ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾದ ಭಾರತದ ಶ್ರೇಷ್ಠ ಅಥ್ಲೀಟ್ ಮಿಲ್ಖಾ ಸಿಂಗ್(91) ರವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿನಿಂದಾಗಿ ಗುಣಮುಖರಾಗಿದ್ದರು. ಶುಕ್ರವಾರ ರಾತ್ರು 11.30 ಗಂಟೆಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೇವಲ ಐದೇ ಐದು ದಿನಗಳ ಹಿಂದಷ್ಟೇ ಹೃದಯ ಸಂಬಂಧಿ ಸಮಸ್ಯೆಗಳಿಂದ ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಕೂಡಾ ಕೊನೆಯುಸಿರೆಳೆದಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಮಿಲ್ಖಾ ಸಿಂಗ್ ಹಾಗೂ ನಿರ್ಮಲ್ ಕೌರ್ ಸಾವಿನಲ್ಲೂ ಜತೆಯಾಗಿಯೇ ಸಾಗಿದ್ದಾರೆ. ಮಿಲ್ಕಾ ಸಿಂಗ್ ರವರ ಅಂತ್ಯ ಸಂಸ್ಕಾರ ಶನಿವಾರ ಸಂಜೆ 5 ಗಂಟೆಗೆ ಚಂಡಿಗಢದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನರೆವೇರಲಿದೆ.
ಚಂಡೀಗಢದ ಸೆಕ್ಟರ್ 8 ರಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಚಂಡೀಗಢ ವೈದ್ಯಕೀಯ ಮಹಾ ವಿದ್ಯಾಲಯದ ಕೋವಿಡ್ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರಧಾನಿ ಸೇರಿ ಗಣ್ಯರ ಸಂತಾಪ
ಒಲಿಂಪಿಯನ್ ಅಥ್ಲೀಟ್ ಮಿಲ್ಕಾಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೇರಿದಂತೆ, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಿಲ್ಕಾ ಸಿಂಗ್ ರವರು ಟ್ರ್ಯಾಕ್ ಆಂಡ್ ಫೀಲ್ಡ್ ನಲ್ಲಿ ಉನ್ನತ ಸಾಧನೆ ಮಾಡಿದ್ದ ಮಿಲ್ಕಾಸಿಂಗ್ ತನ್ನ ವೇಗದಿಂದಲೇ ಹಾರುವ ಸಿಕ್ ಎಂದು ಖ್ಯಾತಿ ಪಡೆದಿದ್ದರು. ಏಷಿಯನ್ ಗೇಮ್ ನಲ್ಲಿ ಪದಕ ವಿಜೇತರಾದ ಬಳಿಕ 1958 ರ ಕಾಮನ್ ವೆಲ್ತ್ ಗೇಮ ನಲ್ಲೂ ಚಿನ್ನದ ಪದಕ ಪಡೆದಿದ್ದರು. 1960 ರಲ್ಲಿ ರೋಮ್ ಓಲಂಪಿಕ್ ನಲ್ಲಿ 400 ಮೀಟರ್ ರೇಸ್ ನಲ್ಲಿ ಸ್ವಲ್ಪ ಅಂತರದಲ್ಲಿ ಹಿಂದುಳಿದು ನಾಲ್ಕನೇ ಸ್ಥಾನ ಪಡೆದಿದ್ದರು.
ಮಿಲ್ಖಾ ಸಿಂಗ್ ಜೀವನವನ್ನು ಆಧರಿಸಿ ‘ಭಾಗ್ ಮಿಲ್ಖಾ ಭಾಗ್’ ಸಿನಿಮಾ ತಯಾರಾಗಿತ್ತು. 2013ರಲ್ಲಿ ಬಂದ ಆ ಸಿನಿಮಾದಲ್ಲಿ ಮಿಲ್ಖಾ ಸಿಂಗ್ ಪಾತ್ರವನ್ನು ಫರ್ಹಾನ್ ಅಖ್ತರ್ ಮಾಡಿದ್ದರು. ಆ ಚಿತ್ರಕ್ಕೆ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಗೆದ್ದಿತ್ತು. ಆ ಚಿತ್ರದ ಮೂಲಕ ಮಿಲ್ಖಾ ಸಿಂಗ್ ಬದುಕಿನ ಸ್ಫೂರ್ತಿದಾಯಕ ಕಥೆ ಅನೇಕರಿಗೆ ತಿಳಿಯುವಂತಾಗಿತ್ತು. ಈಗ ಮಿಲ್ಖಾ ಸಿಂಗ್ ನಿಧನಕ್ಕೆ ಫರ್ಹಾನ್ ಮರುಗಿದ್ದಾರೆ.
ಮಿಲ್ಕಾಸಿಂಗ್ ನಿಧನದೊಂದಿಗೆ ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಕ್ರೀಡಾಪಟುವೊಬ್ಬರನ್ನು ನಾವು ಕಳೆದುಕೊಂಡಂತಾಗಿದೆ. ಅವರ ಪ್ರೇರಣಾದಾಯಕ ವ್ಯಕ್ತಿತ್ವವು ಲಕ್ಷಾಂತರ ಜನರನ್ನು ಸೆಳೆದಿತ್ತು ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
Share your comments