ಪ್ಲಾಸ್ಟಿಕ್ ಇದೀಗ ಮನುಷ್ಯನ ರಕ್ತದಲ್ಲೂ ಪತ್ತೆಯಾಗಿದೆ. ಈವರೆಗೆ ಸಮುದ್ರ ಆಹಾರಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿತ್ತು. ಅಲ್ಲದೆ ಮನುಷ್ಯನ ಮೆದುಳು ಹಾಗೂ ಗರ್ಭದಲ್ಲಿದ್ದ ಶಿಶುವಿನ ಮಾಸುವಿನಲ್ಲೂ ಕಂಡುಬಂದಿತ್ತು. ಮೊದಲ ಬಾರಿ ಮನುಷ್ಯನ ರಕ್ತದಲ್ಲೂ ಪ್ಲಾಸ್ಟಿಕ್ ದೊರೆತಿರುವುದು ಆತಂಕ ಸೃಷ್ಟಿಸಿದೆ.
ನೆದರ್‌ಲೆಂಡ್‌ನ ಆಮ್ಸರ್‌ಡ್ಯಾಂನಲ್ಲಿರುವ ವ್ರಿಜೆ ವಿವಿಯಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದೆ. ಪರೀಕ್ಷೆಗೆ ಒಳಪಡಿಸಿದ್ದ 22 ಮಾದರಿಗಳಲ್ಲಿ 17ರಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಆ ಪೈಕಿ ಅರ್ಧದಷ್ಟು ಜನರ ರಕ್ತದಲ್ಲಿ ತಂಪು ಪಾನೀಯಗಳನ್ನು ತುಂಬಲು ಬಳಸುವ ಪಿಇಟಿ ಪ್ಲಾಸ್ಟಿಕ್ ಪತ್ತೆಯಾಗಿದ್ದರೆ, 36% ಜನರ ರಕ್ತದಲ್ಲಿ ಆಹಾರಪ್ಯಾಕ್ ಮಾಡಲು ಬಳಸುವ ಪಾಲಿಸರೀನ್ ಪ್ಲಾಸ್ಟಿಕ್ ಹಾಗೂ ಶೇ.23 ಮಂದಿಯಲ್ಲಿ ನಾವು ನಿತ್ಯ ಕ್ಯಾರಿಬ್ಯಾಗ್‌ಗಳಲ್ಲಿ ಬಳಸುವ ಪಾಲಿಥಿಲೇನ್ ಪ್ಲಾಸ್ಟಿಕ್ ಪತ್ತೆಯಾಗಿದೆ.ಮೈಕ್ರೋ ಪ್ಲಾಸ್ಟಿಕ್‌ನ ಅಂಶ 1.6 ಮೈಕ್ರೋಗ್ರಾಂನಷ್ಟು ಕನಿಷ್ಠ ಪ್ರಮಾಣದಲ್ಲಿ ಪತ್ತೆಯಾಗಿದೆ. ಇದು ಆತಂಕಪಡುವ ವಿಚಾರ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ:ಜನಧನ್ ಖಾತೆದಾರರಿಗೆ ಗುಡ್‌ನ್ಯೂಸ್.. ಈ ದಾಖಲೆ ಲಿಂಕ್ ಮಾಡಿದ್ರೆ ₹1.3 ಲಕ್ಷದವರೆಗೆ ಸೌಲಭ್ಯ ನಿಮ್ಮ ಕೈ ಸೇರಲಿದೆ
ನಮ್ಮ ರಕ್ತದಲ್ಲಿ ಪಾಲಿಮರ್ (polymer) ಕಣಗಳಿವೆ ಎಂಬುದಕ್ಕೆ ನಮ್ಮ ಅಧ್ಯಯನವು ಮೊದಲ ಸೂಚನೆಯಾಗಿದೆ. ಇದು ಅದ್ಭುತ ಫಲಿತಾಂಶವಾಗಿದೆ' ಎಂದು ನೆದರ್‌ಲ್ಯಾಂಡ್‌ನ ವ್ರಿಜೆ ಯೂನಿವರ್ಸಿಟಿ ಆಂಸ್ಟರ್‌ಡ್ಯಾಮ್‌ನ ಅಧ್ಯಯನ ಲೇಖಕ ಪ್ರೊಫೆಸರ್ ಡಿಕ್ ವೆಥಾಕ್ ತಿಳಿಸಿದ್ದಾರೆ. 'ಆದರೆ ನಾವು ಸಂಶೋಧನೆಯನ್ನು ವಿಸ್ತರಣೆ ಮಾಡುವ ಅಗತ್ಯವಿದೆ. ಮಾದರಿ ಗಾತ್ರಗಳು, ಮೌಲ್ಯಮಾಪನ ಮಾಡಿದ ಪಾಲಿಮರ್‌ಗಳ ಸಂಖ್ಯೆ ಇತ್ಯಾದಿಗಳನ್ನು ಹೆಚ್ಚಿಸಬೇಕು.' ಎಂದಿದ್ದಾರೆ.
ಇದನ್ನೂ ಓದಿ: PF ಖಾತೆ ಹೊಂದಿರುವರಿಗೆ EPFO ನಿಂದ ಮಹತ್ವದ ಸೂಚನೆ..ಇನ್ನು 5 ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಲೇಬೇಕು..!
ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಶನಲ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಪಾಲಿಮಿಥೈಲ್ ಮೆಥಾಕ್ರಿಲೇಟ್ (ಪಿಎಂಎಂಎ), ಪಾಲಿಪ್ರೊಪಿಲೀನ್ (ಪಿಪಿ), ಪಾಲಿಸ್ಟೈರೀನ್ (ಪಿಎಸ್), ಪಾಲಿಥಿಲೀನ್ (ಪಿಇ), ಮತ್ತು ಪಾಲಿಥಿಲೀನ್ ಟೆರೆಫ್ಥಲೇಟ್ (ಪಿಇಟಿ) ಎನ್ನುವ ಐದು ವಿಧದ ಪ್ಲಾಸ್ಟಿಕ್‌ಗಳನ್ನು ಪರೀಕ್ಷೆ ಮಾಡಿದೆ. 50 ರಷ್ಟು ರಕ್ತದ ಮಾದರಿಗಳಲ್ಲಿ ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಮಾದರಿಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪ್ಲಾಸ್ಟಿಕ್ ವಿಧವಾಗಿದೆ. ಪಿಇಟಿ ಎನ್ನುವುದು ಸ್ಪಷ್ಟ, ಬಲವಾದ ಮತ್ತು ಹಗುರವಾದ ಪ್ಲಾಸ್ಟಿಕ್ ಆಗಿದ್ದು, ಆಹಾರ ಮತ್ತು ಪಾನೀಯಗಳನ್ನು ಪ್ಯಾಕೇಜಿಂಗ್ ಮಾಡಲು ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ತಂಪು ಪಾನೀಯಗಳು, ನೀರು ಇವುಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗಲು ಇದನ್ನು ಬಳಕೆ ಮಾಡಲಾಗುತ್ತದೆ.
Share your comments