1. ಸುದ್ದಿಗಳು

MFOI 2023- ವಿಸಿಟರ್‌ ಪಾಸ್‌ ಪಡೆಯೋದು ಹೇಗೆ? ಇಲ್ಲಿದೆ ಡಿಟೇಲ್ಸ್‌ 

Maltesh
Maltesh
MFOI 2023- How to get Visitor Pass? Here are the details

MFOI 2023 Visitor Pass : ಮಿಲಿಯನೇರ್ ಫಾರ್ಮರ್ ಆಫ್‌ ಇಂಡಿಯಾ (MFOI) ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೃಷಿ ಜಾಗರಣ ಮತ್ತು ಅಗ್ರಿಕಲ್ಚರ್ ವರ್ಲ್ಡ್ ಆಯೋಜಿಸಿದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನ.-11. 3 ದಿನಗಳ ಕಾಲ ನಡೆಯಲಿರುವ ಕೃಷಿ ವಸ್ತುಪ್ರದರ್ಶನದ ಬಗ್ಗೆಯೂ ಕೆಲ ಮಹತ್ವದ ಸಂಗತಿಗಳನ್ನು  ನಾವು ನೀಡಿದ್ದೇವೆ. ಕೃಷಿಯನ್ನು ವಿಶ್ವದ ಪ್ರಮುಖ ಉದ್ಯಮವೆಂದು ಪರಿಗಣಿಸಲಾಗಿದೆ. ರೈತರು ಇಂದು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಗೌರವಿಸುವ ಉದ್ದೇಶದಿಂದ ಎಂಎಫ್‌ಒಐ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ಕಳೆದ ಜುಲೈನಲ್ಲಿ ದೆಹಲಿಯ ಚಾಣಕ್ಯಪುರಿಯ ಅಶೋಕ್ ಹೋಟೆಲ್‌ನಲ್ಲಿ MFOI ಪ್ರಶಸ್ತಿ ಪ್ರದಾನ ಸಮಾರಂಭದ ಟ್ರೋಫಿ ಮತ್ತು ಲೋಗೋ ಅನಾವರಣ ಸಮಾರಂಭವು ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪರ್ಶೋತ್ತಮ್ ರೂಪಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

MFOI ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 6, 7 ಮತ್ತು 8 ರಂದು ದೆಹಲಿಯಲ್ಲಿ IARI ಪುಸಾ ಮೇಳಾ ಗ್ರೌಂಡ್‌ನಲ್ಲಿ ನಡೆಯಲಿದೆ. ಸಂದರ್ಶಕರಾಗಿ ಭಾಗವಹಿಸಲು ಬಯಸುವವರು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಕೃಷಿ ಉದ್ಯಮ ಕಂಪನಿಗಳ ಮಳಿಗೆಗಳು, ಕೃಷಿ ವಿಜ್ಞಾನಿಗಳೊಂದಿಗೆ ವಿಚಾರಗೋಷ್ಠಿಗಳು, ಅನುಭವಿ ರೈತರೊಂದಿಗೆ ಚರ್ಚೆಗಳು ನಡೆಯುತ್ತವೆ ಇವು ಅನ್ನದಾತರಿಗೆ ವರ್ತಕರಿಗೆ ಸಾಕಷ್ಟು ಮಾಹಿತಿ ಹಂಚಿಕೆಯ ವೇದಿಕೆಯನ್ನು ಕಲ್ಪಿಸುತ್ತದೆ.

ನೀವು ತೋಟಗಾರಿಕೆ ರೈತರೇ..ಹಾಗಿದ್ರೆ ಇನ್ಯಾಕೆ ತಡ ಇಂದೇ MFOIಗೆ ನೋಂದಾಯಿಸಿಕೊಳ್ಳಿ!

ವಿಸಿಟರ್‌ ಪಾಸ್‌ ಪಡೆಯೋದು ಹೇಗೆ?

https://mfoi.krishijagran.com/get-visitor-pass/  - ಬುಕಿಂಗ್ ಪುಟಕ್ಕೆ ಹೋಗಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಲಿಂಗ, ರಾಜ್ಯ, ಜಿಲ್ಲೆ, ಗ್ರಾಮ, ಪಿನ್ ಕೋಡ್ ಇತ್ಯಾದಿಗಳನ್ನು ನಮೂದಿಸಿ.

ನೀವು ಭೂ ಮಾಲೀಕರಾಗಿದ್ದರೆ, ನೀವು ಎಷ್ಟು ಭೂಮಿ ಹೊಂದಿದ್ದೀರಿ ಎಂಬುದನ್ನು ತಿಳಿಸಿ. ಇಲ್ಲದಿದ್ದರೆ (ಇತರೆ) ಆಯ್ಕೆಯನ್ನು ಕ್ಲಿಕ್ ಮಾಡಿ.

ಪ್ರತಿ ವ್ಯಕ್ತಿಗೆ ದಿನಕ್ಕೆ 100 ರೂ.ನಂತೆ ಸಂದರ್ಶಕರ ಶುಲ್ಕವನ್ನು ನಿಗದಿಪಡಿಸಲಾಗಿದೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ ನಂತರ, ಆನ್‌ಲೈನ್ ಪಾವತಿ ಮಾಡುವ ಆಯ್ಕೆಯು ಪರದೆಯ ಮೇಲೆ ಕಾಣಿಸುತ್ತದೆ.

ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಪಾವತಿಸಿ (QR ಕೋಡ್ ಸ್ಕ್ಯಾನ್, ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್, ವ್ಯಾಲೆಟ್ ಎಲ್ಲಾ ಆಯ್ಕೆಗಳು ಲಭ್ಯವಿದೆ)

ಕೃಷಿ ಜಾಗರಣ ಮಾಧ್ಯಮದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಎಂ.ಸಿ. ಡೊಮಿನಿಕ್‌ ಜಗತ್ತಿನ ಜೀವಿಗಳನ್ನು ಪೋಷಿಸುವ ಆ 'ಗೌರವಾನ್ವಿತ ಕೈಗಳನ್ನು' ಗುರುತಿಸಲು  ಈ MFOI 2023 ಉಪಕ್ರಮವನ್ನು ಕೈಗೊಂಡಿದ್ದಾರೆ. ಸಂದರ್ಶಕರಾಗಿ ಭಾಗವಹಿಸಿ ಮತ್ತು ಕೃಷಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯಿರಿ.

MFOI 2023 ಕುರಿತು ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

Published On: 11 November 2023, 02:15 PM English Summary: MFOI 2023- How to get Visitor Pass? Here are the details

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.