1. ಸುದ್ದಿಗಳು

government employees ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈಗ ಇಲ್ಲ!

Hitesh
Hitesh
ಏಳನೇ ವೇತನ ಆಯೋಗ ಜಾರಿ ಸದ್ಯಕ್ಕೆ ಕಷ್ಟ

ಸರ್ಕಾರಿ ನೌಕರರ ವೇತನ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಮುಂದೂಡುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳ ಪರಿಷ್ಕರಣೆ ಮಾಡುವ ಉದ್ದೇಶದಿಂದ ಕಳೆದ ವರ್ಷ ನಿವೃತ್ತ ಮುಖ್ಯಕಾರ್ಯದರ್ಶಿ

ಸುಧಾಕರ್ ರಾವ್ ಅವರ ಅಧ್ಯಕ್ಷತೆ ಆಯೋಗ ರಚಿಸಲಾಗಿತ್ತು.

ವರದಿ ಮಂಡಿಸಲು 6 ತಿಂಗಳ ಗಡುವು ಸಹ ನೀಡಲಾಗಿತ್ತು. ಆದರೆ, ಮತ್ತೊಮ್ಮೆ 6 ಅವಧಿ ವಿಸ್ತಿರಿಸಲಾಗಿತ್ತು.

ಆ ಅವಧಿಯು ಇದೇ 18ಕ್ಕೆ ಮುಕ್ತಾಯವಾಗಲಿದೆ.

ಈ ನಡುವೆ 7ನೇ ವೇತನ ಆಯೋಗದ ವರದಿಯ ಕಾಲಾವಧಿಯನ್ನು ಮತ್ತಷ್ಟು  ವಿಸ್ತರಿಸಲು ರಾಜ್ಯ ಆರ್ಥಿಕ ಇಲಾಖೆ ಸರ್ಕಾರಕ್ಕೆ

ಪ್ರಸ್ತಾವನೆ ಸಲ್ಲಿಸಿದ್ದು, ಏಳನೇ ವೇತನ ಆಯೋಗ ಜಾರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.   

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‌ ಚುನಾವಣೆಯ ಅವಧಿಯಲ್ಲಿ ನೀಡಿದ್ದ ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿ ಮಾಡುವುದಕ್ಕೆ

ಪ್ರಾರಂಭಿಕ ಹಂತದಲ್ಲಿ ಒಂದಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಯಿತು. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು

ಹೊಂದಾಣಿಕೆ ಮಾಡುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿತು.  

ಎಲ್ಲವನ್ನೂ ಸರಿಮಾಡಿ ಆರ್ಥಿಕ ಪರಿಸ್ಥಿತಿ ಸರಿದೂಗಿಸಿಕೊಂಡು ಹೋಗುವ ಸಂದರ್ಭದಲ್ಲಿ ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ.

ಈ ನಡುವೆ ಬರ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡಿ ಪ್ರಸಕ್ತ ಆರ್ಥಿಕ ವರ್ಷವನ್ನು ಸರಿದೂಗಿಸುವ ಸವಾಲು

ರಾಜ್ಯ ಆರ್ಥಿಕ ಇಲಾಖೆಯ ಮೇಲಿದೆ. ಇದೀಗ ಏಳನೇ ವೇತನ ಆಯೋಗದ ಜಾರಿಯೂ ಮಾಡುವ ಸಂದರ್ಭ ಎದುರಾದರೆ,

ಇದಕ್ಕೆ ಅಂದಾಜು 78 ಸಾವಿರ ಕೋಟಿ ರೂಪಾಯಿ ಅವಶ್ಯಕತೆ ಇದ್ದು, ಇದನ್ನು ಹೊಂದಾಣಿಕೆ ಮಾಡುವುದು ಸವಾಲಾಗಿ ಪರಿಣಮಿಸಲಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ, ಇದೀಗ 7ನೇ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಹೇಳಲಾಗುತ್ತಿದೆ.    

 ವೇತನ ಪರಿಷ್ಕರಣೆ ಮಾಡಿದರೆ, ವಾರ್ಷಿಕವಾಗಿ 112 ಸಾವಿರ ಕೋಟಿಯಿಂದ 718 ಸಾವಿರ ಕೋಟಿ ಅವಶ್ಯಕತೆ ಇದೆ

ಎಂದು ಮಾಧ್ಯಮಗಳು ವರದಿ ಮಾಡಿವೆ.    

Published On: 07 November 2023, 12:56 PM English Summary: There is no salary revision for government employees now!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.