Krishi Jagran Kannada
Menu Close Menu

ಪ್ರತಿ ಬೂತ್ ಮಟ್ಟದಿಂದ ಸದಸ್ಯತ್ವ ಅಭಿಯಾ£

Tuesday, 23 July 2019 06:06 PM
bjp

ಮಾಲೂರು : ಪ್ರತಿ ಬೂತ್ ಮಟ್ಟದಿಂದ ಸದಸ್ಯತ್ವ ಅಭಿಯಾನ ಮಾಡಿಸುವ ಮೂಲಕ ಪಕ್ಷವನ್ನು ಸಂಘಟಿಸಲು ಬಿಜೆಪಿ ಕರ‍್ಯಕರ್ತರು ಮುಂದಾಗುವಂತೆ ಬಿಜೆಪಿ ರಾಜ್ಯ ಪ್ರಧಾನ ಕರ‍್ಯದರ್ಶಿ ಅರುಣ್‌ಜೀ ಹೇಳಿದರು.

ಪಟ್ಟಣದ ಶ್ರಿÃ ಕುಂಬೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತ್ವಾ ಅಭಿಯಾನ-೨೦೧೯ ರ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ ಪಕ್ಷದ ಕರ‍್ಯಕರ್ತರು ಪ್ರತಿ ಭೂತ್ ಮಟ್ಟದಿಂದ ೫ ಮಂದಿ ಪ್ರಾಮಾಣಿಕವಾಗಿರುವ ರೈತ, ಮಾಜಿ ಸೈನಿಕ, ವೈಧ್ಯರು, ವ್ಯಾಪಾರಸ್ಥರು, ಸಾಹಿತಿಗಳು, ಚಿಂತಕರು ಒಳಗೊಂಡಂತೆ ಅವರನ್ನು ಅಭಿನಂದಿಸುವ ಮೂಲಕ ಬಿಜೆಪಿ ಪಕ್ಷದ ಸದಸ್ಯತ್ವವನ್ನು ಮಾಡಿಸುವ ಹೊಸ ವಿನೂತನ ಕರ‍್ಯಕ್ರಮವಾಗಬೇಕು. ದೇಶದ್ಯಾಂತ ನೀರಿಗೆ ಅಹಕಾರವಿದ್ದು, ಪ್ರದಾನಿ ನರೇಂದ್ರ ಮೋದಿ ಅವರು ಬಿಜೆಪಿ ಸದಸ್ಯತ್ವ ಅಭಿಯಾನ ಕರ‍್ಯಕ್ರಮದಲ್ಲಿ ಮನೆ ಮನೆಗೆ ತೆರಳಿ ಸದಸ್ಯತ್ವದ ಜತೆಗೆ ಒಂದು ಗಿಡಿ ನಡುವಂತೆ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವಂತೆ ಅರಿವು ಮೂಡಿಸಿ. ಪ್ರತಿ ಕರ‍್ಯಕ್ರಮದಲ್ಲಿ ೫ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡುವಂತೆ ಕರ‍್ಯಕರ್ತರಿಗೆ ಕರೆ ನೀಡಿದ್ದಾರೆ. ಪ್ರತಿ ಗ್ರಾಮದಲ್ಲಿ ಬಿಜೆಪಿ ಕರ‍್ಯಕರ್ತರು ಸರಕಾರಿ ಕಟ್ಟಡಗಳನ್ನು ಬಿಟ್ಟು ಕರ‍್ಯಕರ್ತರ, ಹಿತೇಶಿಗಳ ಮನೆಗಳ, ಕಾಂಪೌಂಡ್‌ಗಳ ಮೇಲೆ ಬಿಜೆಪಿ ಸೇರಿ ದೇಶ ಕಟ್ಟೊÃಣ ಎಂಬ ಬರಹವನ್ನು ಬರೆಯುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಸದಸ್ಯತ್ವ ಅಭಿಯಾನದ ತಾಲೂಕು ಸಂಚಾಲಕ ಪುರನಾರಾಯಣಸ್ವಾಮಿ, ಸಹ ಸಂಚಾಲಕ ರಾಮಕೃಷ್ಣೆÃಗೌಡ, ತಾಲೂಕು ಅಧ್ಯಕ್ಷ ಬಿ.ಆರ್.ವೆಂಕಟೇಶ್, ತಾಲೂಕು ಪ್ರಧಾನ ಕರ‍್ಯದರ್ಶಿ ಬಾಬುರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಆರ್.ಪ್ರಭಾಕರ್, ರಾಜ್ಯ ಕರ‍್ಯಕಾರಿ ಸದಸ್ಯ ಎಟ್ಟಕೋಡಿ ಕೃಷ್ಣಾರೆಡ್ಡಿ, ಜಿಲ್ಲಾ ಪ್ರಧಾನ ಕರ‍್ಯದರ್ಶಿ ಗುರುನಾಥರೆಡ್ಡಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕರ‍್ಯದರ್ಶಿ ಸಿ.ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

bjp karnataka bharathiya janata party

Share your comments


CopyRight - 2019 Krishi Jagran Media Group. All Rights Reserved.