Krishi Jagran Kannada
Menu Close Menu

ಟಿಲ್ಲಿಂಗ್ ಕ್ಷೇತ್ರದಲ್ಲಿ ನವ ಯುಗದ ಹೊಸ ಬೆಳಕು

Tuesday, 04 June 2019 01:45 PM

ಭಾರತದಲ್ಲಿ ರೈತರು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಅದು ಕೂಲಿ ಕೆಲಸದವರ ಸಮಸ್ಯೆ ಅದಕ್ಕಾಗಿ ಅನೇಕ ರೈತರು ಕೂಲಿ ಕೆಲಸದವರು ಸಿಗದೆ  ಸಮಯಕ್ಕೆ ಬೆಳೆಯನ್ನು ಇಡಲು ಸಾಧ್ಯವಾಗದೆ ಬಹುದೊಡ್ಡ ನಷ್ಟವನ್ನು ಅನುಭವಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯವೇ ಅಗಿದೆ.

ಭಾರತೀಯ ಕೃಷಿಯಲ್ಲಿ ಮೊದಲು ಯಾಂತ್ರೀಕರಣ ಪ್ರಾರಂಭವಾದ್ದರಿಂದ ಈ ಸಮಸ್ಯೆಗೆ ಪರಿಹಾರ ದೊರೆತು ಕೈಗೆಟುಕುವ ಬೆಲೆಯಲ್ಲಿ ಯಂತ್ರಗಳು ದೊರೆಯತೊಡಗಿತು. ಆದ್ದರಿಂದ ರೈತರು ಹೆಚ್ಚು ಕಷ್ಟವಿಲ್ಲದೆ, ಒತ್ತಡವಿಲ್ಲದೆ, ತಮ್ಮ ಕೆಲಸಗಳನ್ನು ಮಾಡಲು ಸಾಧ್ಯವಾಯಿತು.

STIHL ಸಂಸ್ಥೆಯು ಅರಣ್ಯಿ ಕರಣ ಮತ್ತು ವ್ಯವಸಾಯಕ್ಕೆ ಬೇಕಾದ ಸುಲಭ ಸಲಕರಣೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.ಇದರ ಹಿನ್ನೆಲೆಯಲ್ಲಿ ವ್ಯವಸಾಯದಲ್ಲಿ ಯಾಂತ್ರೀಕರಣದ ಬಹುದೊಡ್ಡ ಬದಲಾವಣೆ ಆಗತೊಡಗಿತು. ಆ ಬದಲಾವಣೆಯಿಂದ ರೈತರು, ಅತಿ ಸಣ್ಣ ರೈತರು ಸಹ ಅದರ ಸದುಪಯೋಗವನ್ನು ಪಡೆದುಕೊಂಡು ವ್ಯವಸಾಯದ ಹೊಸ ಯುಗಕ್ಕೆ ನಾಂದಿ ಹಾಡಿದರು.

STIHL ನ ಟಿಲ್ಲರ್ ಮೂಲಕ ಹೊಸ ಯುಗದ ನಾಂದಿಯಾಯಿತು

ಎಂ. ಎಚ್. 610 ಮತ್ತು ಎಂ.ಹೆಚ್.710 ಎಂಬ ಎರಡು ಹೊಸ ಟಿಲ್ಲರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದರಿಂದ ರೈತ ಸಮುದಾಯಕ್ಕೆ ಬಹು ಉಪಯೋಗವಾಗಿ ಹೊಸ ಯುಗ ಪ್ರಾರಂಭವಾಯಿತು.

ರೈತರಿಗೆ ಬಹುದೊಡ್ಡ ಸವಾಲಾಗಿದ್ದ ಮಣ್ಣಿನ ಸಿದ್ಧತೆಗೆ ಟಿಲ್ಲರ್ ಗಳು ಬಹು ಸಹಾಯಕಾರಿಯಾಗಿದೆ.

STIHLನ ಈ ಟಿಲ್ಲರ್ ಪ್ರಪಂಚದ ಅತಿ ಉತ್ತಮ ಕಾರ್ಯಕ್ಷಮತೆಯುಳ್ಳ STIHL ಯುರೋ ವಿ ಇಂಜಿನ್ ಹೊಂದಿದ್ದು ಇದು ಕಡಿಮೆ ಇಂಧನದಿಂದ ಹೆಚ್ಚು ಕೆಲಸ ಮಾಡುತ್ತದೆ ಮತ್ತೊಂದು ವಿಶೇಷವೆಂದರೆ ಇದು ತೇವಾಂಶವುಳ್ಳ ಏರ್ ಫಿಲ್ಟರ್ ಅನ್ನು ಹೊಂದಿದ್ದು ಉತ್ತಮ ಧೂಳು ರಹಿತವಾದ ಗಾಳಿಯನ್ನು ಕಾರ್ಪೂರೇಟರ್ ಗೆ  ತಲುಪಿಸುವಲ್ಲಿ ಯಶಸ್ವಿಯಾಗಿದೆ .ಇದು ಎಲ್ಲಾ ಕಾಲಕ್ಕೂ, ಎಲ್ಲಾ ಸ್ಥಳದಲ್ಲೂ ಉತ್ತಮ ಕೆಲಸ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು ವೇಗದಲ್ಲಿ ಸ್ಟಾರ್ಟ್ ಆಗಿ ನೀರಿನ ನಿರ್ವಹಣೆ ಮತ್ತು ಪಂಪ್ ಮಾಡಲು ಸಹ ಸಹಕಾರಿಯಾಗಿದೆ.

ಹೆಚ್ಚು ಅಗಲ ಪ್ರದೇಶವನ್ನು ಇದು ಕ್ರಮಿಸುತ್ತದೆ ಹಾಗೂ ಆಳಕ್ಕೆ ಇಳಿಯಬಲ್ಲ ಸಾಧನ ಇದಾಗಿದೆ. ಭೂಮಿಯನ್ನು ಉಳುಮೆ ಮಾಡಲು ಬದುಗಳನ್ನು ನಿರ್ಮಿಸಲು ಅಂತರ ಬೇಸಾಯ ಕ್ರಮವನ್ನು ಅನುಸರಿಸಲು ಇದು ಬಹಳ ಸಹಾಯಕಾರಿಯಾಗಿದೆ.

ಇದು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದು ಸುತ್ತ ಮುತ್ತಲು ಇದು ಆರಾಮಾಗಿ ಕೆಲಸ  ನಡೆಯುವಂತೆ ನೋಡಿಕೊಳ್ಳುತ್ತದೆ. ಫ್ರೆಂಟ್ ಲಿಫ್ತಿಂಗ್ ಹ್ಯಾಂಡಲ್ ಹೊಂದಿದೆ ಸರಾಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಗಾಲಿಗಳ ವ್ಯವಸ್ಥೆಯಿದೆ. ಯಾವುದೇ ಕಡೆಗೆ ಅದು ತಿರುಗಬಲ್ಲ ಸಾಧನವಾಗಿದೆ ಒಟ್ಟಾರೆ  ವಿಶಿಷ್ಟತೆಯನ್ನು ಹೊಂದಿದೆ  ಯಂತ್ರ ಎಂದರೆ ತಪ್ಪಾಗಲಾರದು.

 ಸಿಂಪಲ್ ಥ್ರೊಟಲ್ ಆಕ್ಟ್ಯೂಷನ್, ವಿಶ್ವಾಸಾರ್ಹ ಗೇರ್ ಶಿಫ್ಟ್, ಮೆಕ್ಯಾನಿಸಮ್ ಮತ್ತು ಪ್ರೊಟೆಕ್ಟಿವ್ ಹೌಸಿಂಗ್ ಕವರ್ ದೃಢವಾದ ಗೇರ್ ಬಾಕ್ಸ್ ಇದು ಹೊಂದಿದೆ.

STIHL ಎಂ. ಎಚ್. 610 ಮತ್ತು ಎಂ. ಎಚ್.710 ಎಂಬ ಎರಡು ಬಗೆಯ ಟಿಲ್ಲರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು ಇದು  ಭಾರತದಾದ್ಯಂತ ಡೀಲರ್ ಗಳ ಮೂಲಕ ಲಭ್ಯವಿದೆ. ಟಿಲ್ಲರ್ ಗಳು, ಬುಷ್ ಕಟ್ಟರ್ ಗಳು ಕಳೆ ನಾಶಕ ಯಂತ್ರಗಳು ನೀರನ್ನು ಸಿಂಪಡಿಸುವ ಮತ್ತು ಹಾಯಿಸುವ ಯಂತ್ರಗಳನ್ನು ಭಾರತದ ರೈತರಿಗೆ ನೀಡುತ್ತಿದೆ.

ಈ ಹೊಸ ಯಂತ್ರಗಳ ಬಿಡುಗಡೆಗೆ ರೈತರಿಂದ ಬಹುದೊಡ್ಡ ಪ್ರತಿಕ್ರಿಯೆ ಬಂದಿದ್ದು ರೈತರು ಹೆಚ್ಚು ಉತ್ಸುಕರಾಗಿದ್ದಾರೆ ಅವರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗ್ರಾಹಕರು ಟಿವಿಎಸ್ ಸ್ಟಾರ್ ಸಿಟಿ ಅಂತಹ ದ್ವಿಚಕ್ರ ವಾಹನಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ಅಲ್ಲದೆ ಅನೇಕ ಬಹುಮಾನಗಳನ್ನು ರೈತರು ತಮ್ಮದಾಗಿಸಿಕೊಂಡಿದ್ದಾರೆ.

 STIHLಭಾರತದ ವ್ಯವಸಾಯ ಕ್ಷೇತ್ರಕ್ಕೆ ತನ್ನ ಕೊಡುಗೆ ನೀಡುತ್ತಲೇ ಬಂದಿದ್ದು ಆ ಮೂಲಕ ರೈತ ಪರವಾದ ತನ್ನ ಬದ್ಧತೆಯನ್ನು ತೋರಿಸತೊಡಗಿದೆ.

ಅದಕ್ಕಾಗಿ ಪುಣೆ ಸಮೀಪದ ಚಾಕಣ ಎಂಬ ಸ್ಥಳದಲ್ಲಿ ಹೊಸದೊಂದು ಉದ್ಯಮವನ್ನು STIHL ಪ್ರಾರಂಭಿಸತೊಡಗಿದೆ. ಇದು 2020 ರ ಎಪ್ರಿಲ್ ಒಳಗಾಗಿ ತನ್ನ ಕಾರ್ಯವನ್ನು ಪ್ರಾರಂಭಿಸಲಿದೆ.

ಭಾರತದ ರೈತರ ಬಹುದೊಡ್ಡ ಸಮಸ್ಯೆಯೆಂದರೆ ಹೆಚ್ಚು ಶ್ರಮದಿಂದ ಕಡಿಮೆ ಉತ್ಪಾದನೆಯಾಗುತ್ತಿತ್ತು ದೇಶದ ರೈತರ ಯಾತನೆಯನ್ನು ಅರ್ಥ ಮಾಡಿಕೊಂಡ  STIHL ಸಂಸ್ಥೆಯು ಕೃಷಿಯ ಯಾಂತ್ರೀಕರಣ ದೊಂದಿಗೆ ಮೊದಲ ಹಂತದ ಯಂತ್ರಗಳನ್ನು ಸಿದ್ಧಮಾಡಿ ರೈತರ ಬಹು ದೊಡ್ಡ ಸಮಸ್ಯೆಯನ್ನು ನೀಗಿಸುವಲ್ಲಿ STIHL ಮಹತ್ತರ ಪಾತ್ರ ವಹಿಸಿದೆ.

field Stihl Tiller

Share your comments


CopyRight - 2019 Krishi Jagran Media Group. All Rights Reserved.