ಮಗುವಿನ ಪೋಷಣೆ ಮತ್ತು ಪಾಲನೆಯಲ್ಲಿ ಪತಿ ಮತ್ತು ಪತ್ನಿಯ ನಡುವೆ ಸದಾ ಒಂದಿಲ್ಲೊಂದು ಗೊಂದಲಗಳು ಸೃಷ್ಟಿಯಾಗುತ್ತಲ್ಲೇ ಇರುತ್ತವೆ. ಸದ್ಯ ಪುರುಷ ಉದ್ಯೋಗಿಗಳಿಗೂ ಇಲ್ಲೊಂದು ಸಿಹಿಸುದ್ದಿ ಇದೆ.
ಕೇಳುವವರೇ ಇಲ್ಲ ಕೋವ್ಯಾಕ್ಸಿನ್; 50 ಮಿಲಿಯನ್ ಕೋವ್ಯಾಕ್ಸಿನ್ ನಿಷ್ಕ್ರೀಯತೆಗೆ ತಯಾರಿ!
ಉದ್ಯೋಗಕ್ಕೆ ಸೇರಿದ ನಂತರದಲ್ಲಿ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಸಂಬಂಧಿಸಿದ ರಜೆಗಳು ಕಾನೂನಾತ್ಮಕವಾಗಿ ಲಭ್ಯವಾಗುತ್ತವೆ.
ಆದರೆ, ಬಹುತೇಕ ಕಂಪನಿಗಳಲ್ಲಿ ಮಗುವಿನ ತಂದೆಗೆ ಈ ರೀತಿಯ ರಜೆ ಸೌಲಭ್ಯ ಸಿಗುವುದಿಲ್ಲ.
ಇದೀಗ ಉದ್ಯೋಗದಲ್ಲಿರುವ ದಂಪತಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.
ಮುಂದಿನ ದಿನಗಳಲ್ಲಿ ತಮ್ಮ ಮಗುವಿನ ಜನನದ ಬಳಿಕ ತಂದೆ, ತಾಯಿ ಇಬ್ಬರೂ 6 ತಿಂಗಳುಗಳ ಕಾಲ ರಜೆ ಸೌಲಭ್ಯ ಸಿಗಲಿದೆ.
ರಾಜ್ಯದ ಹಲವು ಜಿಲ್ಲೆಯಲ್ಲಿ ಮುಂದುವರಿದ ಮಳೆ
ಪುರುಷ ಮತ್ತು ಮಹಿಳೆಯರ ನಡುವೆ ಲಿಂಗ ಸಮಾನತೆಯನ್ನು ಉತ್ತೇಜನ ನೀಡುವ ಉದ್ದೇಶದಿಂದ ಈಗಾಗಲೇ ಹಲವು ಕಂಪನಿಗಳು ಮಗು ಜನಿಸಿದರೆ, ಮಹಿಳೆಯಷ್ಟೇ ಪುರುಷರಿಗೂ ಆದ್ಯತೆ ನೀಡಿ ಆರು ತಿಂಗಳು ವೇತನ ಸಹಿತ ರಜೆ ನೀಡುತ್ತಿವೆ.
ಮಗುವಿನ ಕಾಳಜಿಯಲ್ಲಿ ಪುರುಷರ ಪಾತ್ರವೂ ಇದೆ. ಹೀಗಾಗಿ, ಉದ್ಯೋಗ ಮಾಡುತ್ತಿರುವ ಪುರುಷರಿಗೂ ಈ ಸಂದರ್ಭದಲ್ಲಿ ರಜೆ ನೀಡಲು ಅನೇಕ ಪ್ರತಿಷ್ಠಿತ ಕಂಪನಿಗಳ ಮುಂದಾಗಿವೆ.
ಇದನ್ನೂ ಓದಿರಿ: ನವೆಂಬರ್ 7ರಿಂದ ಒಂದು ತಿಂಗಳು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಅಭಿಯಾನ: ಪ್ರಭು ಚವ್ಹಾಣ್
ಈಗಾಗಲೇ ಕೆಲವು ಕಂಪನಿಗಳು ಮಗು ಜನಿಸಿದ ಸಂದರ್ಭದಲ್ಲಿ ಮಹಿಳೆಯರಿಗೆ ರಜೆ ಸೌಲಭ್ಯ ನೀಡಲು ಮುಂದಾಗಿವೆ.
Cure.fit ಮತ್ತು Natwest ಗ್ರೂಪ್ ಅಂತಹ ಕಂಪನಿಗಳು ಈ ನಿಟ್ಟಿನಲ್ಲಿ ಮುಂದಡಿ ಇರಿಸಿವೆ.
ಕೆಲವು ಸಂಸ್ಥೆಗಳು ಈ ಹಿಂದೆ ಪ್ರಾಥಮಿಕ ಆರೈಕೆದಾರರು ಎಂದು ಮಗುವಿಗೆ ಜನ್ಮ ನೀಡಿದ ತಾಯಿಗೆ 26 ವಾರಗಳ ಶಿಶುಪಾಲನಾ ರಜೆಯನ್ನು ಪಡೆಯಲು ಅವಕಾಶ ಕಲ್ಪಿಸಿತ್ತು.
ಸೆಕೆಂಡರಿ ಪಾಲನೆದಾರರು (ತಂದೆ) ಕೆಲವೊಮ್ಮೆ 2 ವಾರಗಳ ರಜೆಯನ್ನು ಪಡೆಯಲು ಸಹ ಕೆಲವು ನಿರ್ದಿಷ್ಟ ಕಂಪನಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು “ಕೃಷಿ ಮೇಳ” ಹಲವು ದಾಖಲೆ ಸೃಷ್ಟಿ ; ಮೇಳಕ್ಕೆ 17.35 ಲಕ್ಷ ಜನ ಭೇಟಿ!
ಕೆಲವು ಸಂದರ್ಭಗಳಲ್ಲಿ ಮಾತ್ರ ರಜೆಯನ್ನು ಒಂದು ತಿಂಗಳವರೆಗೆ ವಿಸ್ತರಿಸುವ ಅವಕಾಶ ಇದೆ. ಇದೀಗ cure.fit ಎಂಬ ಸಂಸ್ಥೆಯು 6 ತಿಂಗಳ ಹೆರಿಗೆ ಮತ್ತು ಪಿತೃತ್ವ ನೀತಿಯು ಬೈನರಿ ಅಲ್ಲದ ಪೋಷಕರನ್ನು ಒಳಗೊಂಡಿರುತ್ತದೆ ಎಂದು ಘೋಷಿಸಿದೆ.
ರೈತರ ಖಾತೆಗೆ ನೇರವಾಗಿ ಡೀಸೆಲ್ ಸಬ್ಸಿಡಿ ಪಾವತಿ; ದಾಖಲೆಯೂ ಬೇಕಿಲ್ಲ: ಬಿ.ಸಿ ಪಾಟೀಲ್
ಅರ್ಥಾತ್ ಸ್ವಾಭಾವಿಕ ಜನನ, ಬಾಡಿಗೆ ತಾಯ್ತನ ಅಥವಾ ದತ್ತು ಪಡೆಯುವ ಮೂಲಕ ಪಿತೃತ್ವವನ್ನು ಆಯ್ಕೆ ಮಾಡುವ ಉದ್ಯೋಗಿಗಳು ತಮ್ಮ ಲಿಂಗವನ್ನು ಲೆಕ್ಕಿಸದೆ ಪೋಷಕರ ರಜೆಗಳಿಗೆ ಅರ್ಹರಾಗಿರುತ್ತಾರೆ ಎನ್ನುವುದೇ ಆಗಿದೆ.
ನ್ಯಾಟ್ ವೆಸ್ಟ್ನ ಪಾಲುದಾರರ ರಜೆ ನೀತಿ ಸಹ ಸಲಿಂಗ ಮತ್ತು ಭಿನ್ನಲಿಂಗೀಯ ಪೋಷಕರಿಗೆ ಮುಕ್ತವಾಗಿದೆ. ಮುಂದಿನ ವರ್ಷ ಜನವರಿಯಿಂದ ಈ ನೀತಿ ಜಾರಿಗೆ ಆಗುವ ಸಾಧ್ಯತೆ ಇದೆ.
13.5 ಲಕ್ಷ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಅಸ್ತು!
ಆರು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ತಮ್ಮ ಮಗುವನ್ನು ನೋಡಿಕೊಳ್ಳಲು ಕೆಲಸದಿಂದ 12 ವಾರಗಳವರೆಗೆ ಸಂಬಳದ ರಜೆ ತೆಗೆದುಕೊಳ್ಳಲು ನ್ಯಾಟ್ ವೆಸ್ಟ್ ಎಂಬ ಸಂಸ್ಥೆಯ ಅವಕಾಶ ಕಲ್ಪಿಸುತ್ತಿದೆ.
ಮಗು ಜನನ, ದತ್ತು ಅಥವಾ ಬಾಡಿಗೆ ತಾಯ್ತನದ ಮೂಲಕ ಜನಿಸುತ್ತದೆಯೇ ಎಂಬುದನ್ನು ಲೆಕ್ಕಿಸದೆ ಈ ರಜೆಗಳನ್ನು ತೆಗೆದುಕೊಳ್ಳಬಹುದು.
ಮೊದಲು, ರಜೆಯ ಪ್ರಮಾಣವು 2 ವಾರಗಳಷ್ಟೇ ಇದು ಸೀಮಿತವಾಗಿತ್ತು.
ಆಲ್ಕೋಹಾಲ್ ಕಂಪನಿ ಡಿಯಾಜಿಯೊ ಇಂಡಿಯಾ ಕಳೆದ ವರ್ಷ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅರ್ಹ ಉದ್ಯೋಗಿಗಳಿಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಆರೈಕೆದಾರ ಪೋಷಕರಿಗೆ ಕುಟುಂಬ ರಜೆ ನೀತಿ ನೀಡುವುದಾಗಿ ಘೋಷಣೆ ಮಾಡಿತ್ತು.
ಕಂಪನಿಯು ಪಾಲಿಸಿಯ ಅಡಿಯಲ್ಲಿ ಎಲ್ಲಾ ಪ್ರಯೋಜನಗಳನ್ನು ಒಳಗೊಂಡಿರುವ 26 ವಾರಗಳ ಪೋಷಕರ ರಜೆಯನ್ನು ನೀಡುತ್ತಿದೆ.
ಮಗು ಜನಿಸಿದ ಒಂದು ವರ್ಷದ ಒಳಗಿನ ಯಾವುದೇ ಅವಧಿಯಲ್ಲಾದರೂ ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎನ್ನುವುದು ವಿಶೇಷವಾಗಿದೆ.
Share your comments