1. ಸುದ್ದಿಗಳು

ಸಂಕ್ರಾಂತಿ ಬಂತು ಋತು ಋತು ! ಮಕರ ಸಂಕ್ರಾಂತಿಯ ವಿಶೇಷ!

Ashok Jotawar
Ashok Jotawar
Makara Sankranti Special

ಭಾರತ ಮೂಲತಃ ಒಂದು ಕೃಷಿ ಪ್ರಧಾನ ದೇಶ ಮತ್ತು ಈ ದೇಶದಲ್ಲಿ ಯಾವುದೇ ಹಬ್ಬವಾದರೂ ಅದರ ಒಂದು ಪ್ರಾಮುಖ್ಯತೆ ಇದ್ದೆ ಇರುತ್ತೆ.

ಈಗ ಮಕರ ಸಂಕ್ರಾಂತಿ ವಿಷಯಕ್ಕೆ  ಬಂದರೆ ಈ ಒಂದು ಹಬ್ಬವನ್ನು ದೇಶದ ವಿವಿದೆಡೆ ವಿವಿಧ ರೂಪದಲ್ಲಿ ಮತ್ತು ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತೆ.

ನಾವು ನಮ್ಮ ಪಕ್ಕದ ರಾಜ್ಯಗಳಲ್ಲಿಯೇ ನೋಡುವುದಾದರೆ. ತಮಿಳು ನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್(PONGAL) ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಮತ್ತು ಅದೇ ರೀತಿ ನೋಡುವುದಾದರೆ ಗುಜರಾತಿನಲ್ಲಿ ಉತ್ತರಾಯಣ(UTTARAYANA), (LOHARI ) ಲೋಹರಿ  ಪಂಜಾಬಿನಲ್ಲಿ, (POUSH SONGKRANTI) ಬೆಂಗಾಲಿಯಲ್ಲಿ, ಕನ್ನಡದಲ್ಲಂತೂ ಮಕರಸಂಕ್ರಾಂತಿಯನ್ನು ಉತ್ತರ ಕರ್ನಾಟಕದಲ್ಲಿ,  ಈ ಹಬ್ಬದ ಹೆಸರು ಮಕರ ಸಂಕ್ರಾಂತಿಯಂದೇ ಕರೆಯಲಾಗುತ್ತೆ. ಮತ್ತು ದಕ್ಷಿಣ ಕರ್ನಾಟಕಕ್ಕೆ ಹೋದರೆ ಈ ಹಬ್ಬವನ್ನು ಸುಗ್ಗಿಹಬ್ಬ ಎಂದು ಕರೆಯಲಾಗುತ್ತೆ. ಮಹಾರಾಷ್ಟ್ರದಲ್ಲಿ (MAGHI SANKRANT) ಮಾಗಿಸಂಕ್ರಾಂತ್, (BHOGALI BIHU) ಭೂಗಲಿ ಬಿಹೂ ಎಂದುಅ ಸ್ಸಾಂನಲ್ಲಿ  ಕರೆಯುತ್ತಾರೆ ಮತ್ತು ಮುಂತಾದ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತೆ.ಕರ್ನಾಟಕದಲ್ಲಿಯೇ ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತೆ. ಮತ್ತು ಇಡೀ ಭಾರತದ ವಿಚಾರಕ್ಕೆ ಬಂದಾಗ ಇನ್ನು ಎಷ್ಟೂ ಹೆಸರುಗಳು ಈ ಒಂದು ಹಬ್ಬಕ್ಕೆ ಇದೆಯೋ ಗೊತ್ತಿಲ್ಲ.

ಸಂಕ್ರಾಂತಿ ಎಂದು ಕಿವಿಗೆ ಬಿದ್ದಾಗ ಮನಸ್ಸಿನಲ್ಲಿ ಒಂದು ಸಂಚಲನ ಉಂಟಾಗುತ್ತೆ. ಏಕೆಂದರೆ ಮನೆಯಲ್ಲಿ ವಿವಿಧ ತರಹದ ಅಡುಗೆ ಮತ್ತು ಪೂಜೆ ಪುನಸ್ಕಾರ ಎಲ್ಲ ಕಣ್ಣು ಮುಂದೆ ಬರುತ್ತೆ.

ಮೂಲತಃ ಈ ಹಬ್ಬ ಏಕೆ ಆಚರಿಸುತ್ತಾರೆ ಎಂಬುದೆ ವಿಶೇಷ. ಸೂರ್ಯನ ಚಲನ. ಸೂರ್ಯನ ಚಾಲನೆ  ಈ ಸಮಯದಲ್ಲಿ ಬದಲಾಗುತ್ತೆ. ಅಂದರೆ ತಂಪು ಮುಕ್ತಾಯ ಮತ್ತು ಬೇಸಿಗೆಯ ಪ್ರಾರಂಭ. ಮತ್ತು ಮಕರ  ಸಂಕ್ರಾಂತಿಯಿಂದ ಸೂರ್ಯ ತನ್ನ ಚಾಲನೆ ಬದಲಾಯಿಸುತ್ತ ಋತುವು ಕೂಡ ಬದಲಾಗುತ್ತೆ.

;

ಸಂಕ್ರಾಂತಿಯ  ಅಡುಗೆ:

ಸಂಕ್ರಾಂತಿಯಲ್ಲಿ  ಅಡುಗೆಯ ವಿಚಾರಕ್ಕೆ ಬಂದಾಗ ಮನೆಯಲ್ಲಿ ಅಮ್ಮ ವಿಶೇಷ ಅಡುಗೆ ಮಾಡುತ್ತಾಳೆ.  ಅದರಲ್ಲೂ ಸಜ್ಜಿ ರಟ್ಟಿ, ಚಪಾತಿ, ಬದನೇಕಾಯಿ ಎಣೆಗಾಯಿ, ಮೊಸರನ್ನ, ಮಸಾಲೆಯುಕ್ತ ಅನ್ನ, ತರ ತರಹದ ಪಲ್ಯಾ, ಮತ್ತು ಉತ್ತರ ಕರ್ನಾಟಕದಲ್ಲಿ ವಿಶೇಷ ಸಿಹಿ ಅಡುಗೆ ಮಾಡಲಾಗುತ್ತೆ, ಅದು ಅಂದರೆ 'ಮಾದೇಲಿ'.  ಈ ಒಂದು ಸಿಹಿ ತಿನಿಸು ತುಂಬಾನೇ ಸ್ವಾದಿಷ್ಟ ವಾಗಿರುತ್ತೆ. ಇದನ್ನು ಗೋದಿಯ ರವೇಯಿಂದ ಮಾಡಲಾಗುತ್ತೆ ಮತ್ತು ಇದರಲ್ಲಿ ಗೋಡಂಬಿ, ಬದಾಮ್, ಮುಂತಾದ  (DRY FRUITS) ಗಳನ್ನು ಹಾಕಿ ಮಾಡಲಾಗುತ್ತೆ.

ಮೂಲತಃ ಮಕರ ಸಂಕ್ರಾಂತಿಯ ಸಮಯದಲ್ಲಿ ಪರಿವಾರದ ಎಲ್ಲ ಸದಸ್ಯರು,ಮನೆಯಿಂದ  ಅಡುಗೆ ಕಟ್ಟಿ ಕೊಂಡು ನಿಸರ್ಗದ ಸೊಬಗಿನಲ್ಲಿ ಅಡುಗೆಯ ಸವಿಯನ್ನು ಸವಿಯುತ್ತಾರೆ.

ನನ್ನ  ಒಂದು ನೆನಪು

 ನಮ್ಮ ಮನೆಯವರು, ಅಕ್ಕ ಪಕ್ಕ ದವರು ಎಲ್ಲರು ಮನೆಯಿಂದ ಊಟ ಕಟ್ಟಿ ಕೊಂಡು ನದಿಯ ದಡಕ್ಕೆ ಹೋಗುತ್ತಿದ್ದೆವು. ಮತ್ತು ಅಲ್ಲಿಯೇ ಎಲ್ಲರೂ ಮೊದಲು ತಾವು ಕಟ್ಟಿ ಕೊಂಡು ಬಂದ ಅಡುಗೆಯಿಂದ ಗಂಗೆಯ ಪಾಲು ಅಂತ ತಾಯಿ ಗಂಗೆಗೆ ಪೂಜೆ ಮಾಡಿ ನದಿಯಲ್ಲಿ ನೈವೇದ್ಯವನ್ನು ಬಿಟ್ಟು ಆಮೇಲೆ ನಮ್ಮ ಹೊಟ್ಟೆಯತ್ತ ನೋಡುತ್ತಿದೆವು. ಹೀಗೆ ವಿವಿಧ ಅಡುಗೆಯ ಅಡುಗೆ ತಿಂದಮೇಲೆ ಅಲ್ಲಿಯೇ ಯಾವುದಾದರು ಒಂದು ಮರದ ಕೆಳಗೆ ಚನ್ನಾಗಿ ನಿದ್ದೆ. ಮತ್ತು ಸಂಜೆಯಾಗುವಷ್ಟರಲ್ಲೇ ಮನೆ ಕಡೆ ಹಾದಿ ಹಿಡಿಯುತ್ತಿದೆವು .ಮಕರ ಸಂಕ್ರಾಂತಿಯನ್ನು ಆಚರಿಸವುದಕ್ಕೆ ಮುಖ್ಯ ಕಾರಣ ಅಂದರೆ ನಾವು ನಮ್ಮ ಹೊಲದಲ್ಲಿ ಬೆಳೆದ ಬೆಳೆಗೆ ಸಹಾಯ ಮಾಡುವ ಎಲ್ಲ ನಿಸರ್ಗವನ್ನು ಪೂಜೆ ಮಾಡಿ ಆ ಸಕಲ ಚರಾ ಚರ ಗಳಿಗೂ ಒಂದು ರೀತಿ ಧನ್ಯವಾದ ಹೇಳಬೇಕು ಎಂದು. ಸಂಕ್ರಾಂತಿಯಲ್ಲಿ ನಾವು ಮೊದಲು ಭೂ ಮಾತೆಗೆ ನಮನ ಸಲ್ಲಿಸುತ್ತೇವೆ, ಆಮೇಲೆ ಸೂರ್ಯದೇವ, ಮತ್ತು ಭೂಮಿಯ ಮೇಲೆ ಬೆಳೆ ಸರಿಯಾಗಿ ಬರಲು ಗಂಗೆಯ ಅವಶ್ಯಕತೆ ತುಂಬಾ ಇರುತ್ತೆ. ಹೀಗಾಗಿ ಗಂಗೆ ಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.

ಮಕರ ಸಂಕ್ರಾಂತಿಯ ಶುಭಾಶಯಗಳು ಎಲ್ಲ ಕೃಷಿ ಜಾಗರಣ ಓದುಗರಿಗೆ.

ಇನ್ನಷ್ಟು ಓದಿರಿ:  

MSPಯಲ್ಲಿ 64.07 ಲಕ್ಷ ರೈತರ ಖಾತೆಗೆ 1,04,441.45 ಕೋಟಿ ರೂ!

PADDY MARKET! ರೈತರು ಏಕೆ ಭತ್ತ ಮಾರಾಟ ಮಾಡುತ್ತಿಲ್ಲ?

Share your comments

Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2022 Krishi Jagran Media Group. All Rights Reserved.