Krishi Jagran Kannada
Menu Close Menu

ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ಆರ್ಥಿಕ ನೆರವು ಪಡೆಯಲು ಆ. 15 ಕೊನೆ ದಿನ

Saturday, 08 August 2020 10:23 AM
mize

ಲಾಕ್ ಡೌನ್ ಪರಿಣಾಮ ಬೆಳೆಗೆ ಬೇಡಿಕೆ ಇಲ್ಲದೆ ನಷ್ಟ ಅನುಭವಿಸಿದ ಮುಸುಕಿನಜೋಳ ಬೆಳೆದ ರೈತರಿಗೆ  ಸರ್ಕಾರ ಪರಿಹಾರವನ್ನು ಘೋಷಣೆ ಮಾಡಿದೆ. ಪರಿಹಾರವನ್ನು ಪಡೆಯಲು ರೈತರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ಮುಸುಕಿನ ಜೋಳ (ಗೋವಿನ ಜೋಳ) ಬೆಳೆದ ರೈತರಿಗೆ 5 ಸಾವಿರ ರೂ.ಗಳಂತೆ  ಆರ್ಥಿಕ ನೆರವು ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 12087 ಮೆಕ್ಕೆ ಜೋಳ ಬೆಳೆದ ಜಂಟಿ ಖಾತೆ ಭೂ ಹಿಡುವಳಿ ಹೊಂದಿದ ರೈತರಿದ್ದು, ಇದೂವರೆಗೂ ಕೇವಲ 4732 ರೈತರು ಮಾತ್ರ ದಾಖಲಾತಿ ಸಲ್ಲಿಸಿರುತ್ತಾರೆ. ಅದೇ ರೀತಿ ಮೆಕ್ಕೆ ಜೋಳ ಬೆಳೆದ ಕೈಷಿ ಇಲಾಖೆಯಲ್ಲಿ ನೊಂದಣಿ ಆಗದ 33499 ರೈತರಿದ್ದು, ಇದೂವರೆಗೂ ಕೇವಲ 942 ರೈತರು ಮಾತ್ರ ದಾಖಲಾತಿ (Documents) ಸಲ್ಲಿಸಿರುತ್ತಾರೆ. ಇದೂವರೆಗೂ ದಾಖಲಾತಿ ಸಲ್ಲಿಸದೇ ಇರುವ ರೈತರು ದಾಖಲಾತಿಗಳನ್ನು ಸಲ್ಲಿಸಲು ಆಗಸ್ಟ್ 15 ಕೊನೆ ಕೊನೆಯ ದಿನಾಂಕವಾಗಿರುತ್ತದೆ.

ಜಂಟಿ ಖಾತೆ, ಭೂ ಹಿಡುವಳಿ ಹಾಗೂ ಕೈಷಿ ಇಲಾಖೆಯಲ್ಲಿ ನೊಂದಣಿ ಆಗದ ರೈತರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರ ಹಾಗೂ ಸಂಬಂýಸಿದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪ್ರದರ್ಶಿಸಲಾಗಿರುತ್ತದೆ. ಆದ ಕಾರಣ ಮೆಕ್ಕೆ ಜೋಳ ಬೆಳೆದ ಪಟ್ಟಿಯಲ್ಲಿರುವ ರೈತರು ಕೊನೆಯ ದಿನಾಂಕದವರೆಗೆ ಕಾಯದೇ ಇಂದೇ ದಾಖಲಾತಿಗಳನ್ನು ಸಲ್ಲಿಸಿ ಯೋಜನೆಯ ಲಾಭ ಪಡೆಯಬೇಕೆಂದು ರೈತರಲ್ಲಿ ಜಿಲ್ಲಾ ಜಂಟಿ ಕೈಷಿ ನಿರ್ದೇಶಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕಿನ ಸಹಾಯಕ ಕೈಷಿ ನಿರ್ದೇಶಕರ ಕಛೇರಿಗಳಿಗೆ ಭೇಟಿ ನೀಡಬಹುದಾಗಿದೆ.

maize crops farmers Documents kjkannada krishi jagran

Share your comments

Krishi Jagran Kannada Subscription

CopyRight - 2020 Krishi Jagran Media Group. All Rights Reserved.