MFOI Awards 2023 : ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಮೊದಲ ಕೃಷಿ ಕುಂಭ ʻಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ 2023' ಸ್ಪಾನ್ಸರ್ಡ್ ಬೈ ಮಹೀಂದ್ರಾ ಟ್ರ್ಯಾಕ್ಟರ್ಸ್ (Mahindra Tractors) ಕಾರ್ಯಕ್ರಮ ಇಂದಿನಿಂದ ಅದ್ದೂರಿಯಾಗಿ ಆರಂಭವಾಗಿದೆ.
ರೈತರ ಆಸ್ಕರ್ ಎಂದು ಬಿಂಬಿತವಾಗಿರುವ ಈ ಕಾರ್ಯಕ್ರಮದಲ್ಲಿ ದೇಶದ ಮಿಲಿಯನೇಯರ್ ರೈತರನ್ನು ಗುರುತಿಸಿ ಅದ್ದೂರಿಯಾಗಿ ಸನ್ಮಾನಿಸಲಾಗುತ್ತಿದೆ. ದೇಶದ ಅತಿದೊಡ್ಡ ಕೃಷಿ ಮಾಧ್ಯಮ ಸಂಸ್ಥೆ ಕೃಷಿ ಜಾಗರಣದ ಸಂಸ್ಥಾಪಕ ಎಂ ಸಿ ( M C Dominic )ಡೊಮಿನಿಕ್ ಹಾಗೂ ನಿರ್ದೇಶಕಿ ಶೈನಿ ಡೊಮಿನಿಕ್ (Shiny Dominic ) ಅವರ ಕನಸಿನ MFOI ಅವಾರ್ಡ್ ಇಂದು ದೇಶದ ವಿವಿಧ ಭಾಗದ ರೈತರನ್ನೆಲ್ಲ ಒಂದೇ ಸೂರಿನಡಿ ಒಂದು ಗೂಡಿಸಿದೆ.
ಇನ್ನು ಈ ಅದ್ದೂರಿ ಕೃಷಿ ಮಹಾಕುಂಭದಲ್ಲಿ ಮಹೀಂದ್ರಾ ಟ್ರಾಕ್ಟರ್ಸ್ (Mahindra Tractors) ತನ್ನ ಅತ್ಯುತ್ತಮ ಮಾದರಿಯ ಟ್ರ್ಯಾಕ್ಟರ್ಸ್‌ಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಿದ್ದು ಎಲ್ಲನ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಕೃಷಿ ಜಾಗರಣದ ಪ್ರಸ್ತುತಿ MFOI ಅವಾರ್ಡ್‌ಗೆ ಮಹೀಂದ್ರಾ ಟ್ರ್ಯಾಕ್ಟರ್ಸ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.
Exhibition ನಲ್ಲಿ ಕಣ್ಮನ ಸೆಳೆದ ಮಹೀಂದ್ರಾ ಟ್ರ್ಯಾಕ್ಟರ್ಸ್‌ಗಳು ಇಲ್ಲಿವೆ.
ಮಹೀಂದ್ರ OJA 3140 ಟ್ರಾಕ್ಟರ್:
ಮಹೀಂದ್ರ OJA 3140 ಟ್ರಾಕ್ಟರ್ ಕೃಷಿ ಕೆಲಸಕ್ಕೆ ಸೂಕ್ತವಾದ ದೃಢವಾದ ಟ್ರಾಕ್ಟರ್ ಆಗಿದೆ. ಎಂಜಿನ್ - 29.5 kW (40 HP). 12x12 ಈ ವ್ಯವಸ್ಥೆಯು ವಿವಿಧ ರೀತಿಯ ಕೃಷಿ ಕಾರ್ಯಗಳನ್ನು ನಿಖರ ಮತ್ತು ದಕ್ಷತೆಯೊಂದಿಗೆ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. vಮಹೀಂದ್ರಾ NOVO 605 DI 4WD V1 ಟ್ರಾಕ್ಟರ್‌ಗಳು: ಮಹೀಂದ್ರ NOVO 605 DI 4WD V1 ಟ್ರಾಕ್ಟರ್‌ಗಳು ಕೃಷಿ ಭೂಮಿಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಪ್ರಬಲ ಟ್ರಾಕ್ಟರ್ ಆಗಿದೆ .
ಮಹೀಂದ್ರ NOVO 655 DI PP V1 ಟ್ರಾಕ್ಟರ್:
ಮಹೀಂದ್ರಾ NOVO 655 DI PP V1 ಟ್ರಾಕ್ಟರ್ 50.7 kW (68 HP) mBoost ಎಂಜಿನ್ ಮತ್ತು ಪವರ್ ಸ್ಟೀರಿಂಗ್ ಅನ್ನು ಹೊಂದಿದೆ. ಈ 2WD ಟ್ರಾಕ್ಟರ್ ಬಲವಾದ ಕಾರ್ಯಕ್ಷಮತೆ ಹೊಂದಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಮಹೀಂದ್ರ 585 YUVO TECH+ ಟ್ರ್ಯಾಕ್ಟರ್:
ಮಹೀಂದ್ರ 585 YUVO TECH+ ಟ್ರಾಕ್ಟರ್ ದೃಢವಾದ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾದ ಪವರ್‌ಹೌಸ್ ಆಗಿದೆ ಎಂದೇ ಹೇಳಬಹುದು. ಯಾಕೆಂದರೆ ಇದರ ಎಂಜಿನ್ - 36.75 kW (49.3 HP) ನಿಂದ ಕೂಡಿದ್ದು ಇದರ ಸಾಮರ್ಥ್ಯ - 1700 ಕೆಜಿ ಆಗಿದೆ. ಈ ಟ್ರಾಕ್ಟರ್‌ನ ಇನ್ನೊಂದು ವೈಶಿಷ್ಟ್ಯವೆಂದರೆ ನಾಲ್ಕು ಸಿಲಿಂಡರ್ ಹೊಂದಿದ್ದು ಇದರ ELS ಎಂಜಿನ್ ಹೆಚ್ಚಿನ ಮೈಲೇಜ್‌ಗೆ ಹೆಸರುವಾಸಿಯಾಗಿದೆ.
Share your comments