1. ಸುದ್ದಿಗಳು

ದೇಶದ ಬೆನ್ನೆಲುಬು ರೈತನಿಗೆ ಅನಂತ ಪ್ರಣಾಮಗಳು

 ತನೆಗೆ ತನೆಗೆ ಸಿಹಿ ಮುತ್ತು

 ಹೊಸ ಗಾಳಿ ಬೀಸುವಾಗ

 ಬೆವರಿನ ಬೆಲೆ ನಮಗೆ ಗೊತ್ತು!

 ತೆನೆ ತೂಗಿ ಹಾಡುವಾಗ,

ರೈತ ನಮ್ಮ ತಾಯಿಯಂತೆ,  ಅವನ ಆಸ್ತಿ ನೇಗಿಲು

 ನಮ್ಮ ಸಾಕು ಭೂಮಿತಾಯಿ ನನ್ನ ನಿನ್ನ ಕಾಯುವಳು,!!

  ತಾನು ಹಸಿದರು ಬೇರೆಯವರಿಗೆ ಉಣಬಡಿಸುವ ರೈತ, ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನ.ಇಂತಹ ರೈತ ದಿನಾಚರಣೆ ಹಲವಾರು ಜನಗಳಿಗೆ ಇನ್ನೂ ಗೊತ್ತಿರುವುದಿಲ್ಲ.ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿದರೆ ಎಲ್ಲಿದೆ ರೈತನಿಗೆ ಗೌರವ.ಇವತ್ತು ನಾವೆಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಆರಾಮಾಗಿ ಇದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ, ರೈತನ ಶ್ರಮ ಮತ್ತು ಬೆವರು.ಇಂತಹ ರೈತನಿಗೆ ನಾವೆಲ್ಲರೂ ತಲೆಬಾಗಿದ್ದರು  ಸಹ ಏನು ತಪ್ಪಿಲ್ಲ ಅಂತ ಹೇಳಬಹುದು. ನಮ್ಮೆಲ್ಲರಿಗೂ ಡಾಕ್ಟರ್, ಲಾಯರ್, ಇಂಜಿನಿಯರ್ ಗಳು ಬೇಕಾಗುತ್ತಾರೆ,ಆದರೆ ದಿನಕ್ಕೆ ಮೂರು ಹೊತ್ತು ತುತ್ತು ಅನ್ನವನ್ನು ನೀಡುವ ರೈತನು ನಮಗೆ ನೆನಪಿಗೆ ಬರುವುದಿಲ್ಲ. ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಜವಾಲಾಲ್ ನೆಹರು ಅವರು ಹೇಳಿದಂತೆ.

" ಪ್ರಕೃತಿಯು ಕೃಷಿಯೊಂದಿಗೆ ಜೂಜಾಟ ಆಡುತ್ತಿದೆ. "ಏನಿದರ ಅರ್ಥ ಅಂತ ಅಂದರೆ? ಹಲವಾರು ಪ್ರದೇಶಗಳಲ್ಲಿ ರೈತರು ಈ ಬೆಳೆಗಳಿಗೆ ರೋಗಗಳು ಕೀಟಭಾದೆ ಗಳು ಇದರಿಂದ ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಇದರಿಂದಾಗಿ ರೈತರು ಮತ್ತೆ-ಮತ್ತೆ ಸಾಲಗಾರನ ಬೇಕಾಗುತ್ತದೆ.ಒಂದು ವೇಳೆ ಚೆನ್ನಾಗಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋದರೆ ಅಲ್ಲಿಯೂ ಸಹ ಆತನಿಗೆ ಆಧುನಿಕ ದಿನಗಳಲ್ಲಿ ಬೆಲೆ ಸಿಗುತ್ತಿಲ್ಲ, ಆತ ಬೆಳಗೆ ಮಾಡಿದ ಖರ್ಚು ಸಹ ಮರಳಿ ಸಿಗದಂತಾಗಿದೆ.ಇಂತಹ ವಿಷಯಗಳಿಂದ ತನ್ನ ಮನಸ್ಥಿತಿ ತಾಳಲಾರದೆ ನೇಣಿಗೆ ಸಹ ಹಲವಾರು ರೈತರು ಬಲಿಯಾಗಿದ್ದಾರೆ.ಇದರಿಂದಾಗಿ ಒಂದು ಸರ್ಕಾರದ ಮಟ್ಟದಲ್ಲಿ ಅವರಿಗೆ ಹೆಚ್ಚು ಒತ್ತು ಸಿಗಬೇಕಾಗಿದೆ, ವ್ಯವಸ್ಥಿತವಾದ ಮಾರುಕಟ್ಟೆಗಳ ಆಗಿರಬಹುದು, ವ್ಯವಸ್ಥಿತವಾದ ಕೃಷಿ ಮಾಹಿತಿ ಆಗಿರಬಹುದು ಇವೆಲ್ಲವೂ ಸಿಗಬೇಕಾಗಿದೆ.ರೈತರು ಶ್ರಮಪಟ್ಟು ಬೆಳೆದಿರುವ ಬೆಳೆಗಳಿಗೆ ಉತ್ತಮ ಬೆಲೆ ಕೊಡಬೇಕಾಗಿ, ಸರ್ಕಾರದ ಉದ್ದೇಶವಾಗಿರಬೇಕು.

  ರೈತರು ಕಷ್ಟದಲ್ಲಿದ್ದಾಗ ಆತನಿಗೆ ಎಲ್ಲರೂ ಸಹಾಯಮಾಡು ಸ್ಥಿತಿಯಲ್ಲಿರಬೇಕು,ಅಂದಾಗ ಮಾತ್ರ ಆತನು ಸದೃಢವಾಗಿ ಬದುಕಲು ಸಾಧ್ಯ, ಒಂದು ದೇಶ ಹಲವಾರು ಹಳ್ಳಿಗಳಿಂದ ಕೂಡಿರುತ್ತದೆ,ಹಳ್ಳಿಯಲ್ಲಿನ ರೈತರು ಸುಧಾರಿಸಿದರೆ ಊರು ಸುಧಾರಿತ ವಾಗುತ್ತದೆ, ಅದರಂತೆ 13 ಸುಧಾರಿತ ವಾದರೆ ಒಂದು ಜಿಲ್ಲೆ ಸುಧಾರಿತ ವಾಗುತ್ತದೆ. ನಂತರ ಒಂದು ಜಿಲ್ಲೆ ಸುಧಾರಿತವಾದ ಒಂದು ರಾಜ್ಯ ಸುಧಾರಿತ ವಾಗುತ್ತದೆ. ಒಂದು ರಾಜ್ಯ ಸುಧಾರಿತ ವಾದರೆ ಒಂದು ಇಡೀ ದೇಶವು ಸುಧಾರಿತ ವಾಗುತ್ತದೆ,

ಈ ಮಾತನ್ನು ನಮ್ಮೆಲ್ಲರ ನೆನಪಿನಲ್ಲಿಟ್ಟುಕೊಳ್ಳಬೇಕು.ರೈತರ ಮೇಲೆ ಅತ್ಯಂತ ಗೌರವ ಹೊಂದಿರುವ "ಶ್ರೀ ಚೌಧರಿ ಚರಣ್ ಸಿಂಗ್" ರವರ ಡಿಸೆಂಬರ್ 23 ರಂದು ಅವರಜನ್ಮ ದಿನವನ್ನು ನಾವು ರೈತ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಮೂಲತಹ ಉತ್ತರ ಪ್ರದೇಶದವರು ರೈತ ಕುಟುಂಬದಿಂದ ಬಂದವರು ಮತ್ತು ಭಾರತದ ಪ್ರಧಾನಮಂತ್ರಿಯಾಗಿ ಸಹ ಕಾರ್ಯವನ್ನು ಮಾಡಿದರು.ಸುಮಾರು 1979 ರಿಂದ 1980 ರವರೆಗೆ ಈ ಅಲ್ಪಾವಧಿಯಲ್ಲಿ, ರೈತರ ಎಲ್ಲಾ ಅಗತ್ಯಗಳನ್ನು ಜಾರಿಗೆ ತಂದರು, 1979 ರ ಬಜೆಟ್ ಮಂಡನೆಯಲ್ಲಿ ರೈತರ ಎಲ್ಲ ಅಂಶಗಳನ್ನು ಸೇರಿಸಿದರು ನಂತರ ಇವತ್ತು ಉತ್ತರಪ್ರದೇಶದಲ್ಲಿ ಸಾರ್ವಜನಿಕವಾಗಿ ರಜೆ ನೀಡಲಾಗುತ್ತದೆ. ಮತ್ತು ದೇಶದ ಎಲ್ಲಾ ಕಡೆಯೂ,ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ವಿಶ್ವವಿದ್ಯಾಲಯಗಳು,ಇವುಗಳಲ್ಲಿ ಇವತ್ತಿನ ದಿನ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕೊನೆಯದಾಗಿ ಎಲ್ಲ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕಾಗಿದೆ, ಬರೀ ರಾಸಾಯನಿಕಗಳಿಂದ ಒಂದು ಮಣ್ಣಿನ ಫಲವತ್ತತೆ ಹಾಳಾಗುತ್ತಾ ಹೋಗುತ್ತಿದೆ, ಮತ್ತು ಸರಿಯಾದ ಆಹಾರ ಸಿಗುತ್ತಿಲ್ಲ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ ಆಹಾರಗಳನ್ನು ಬೆಳೆದು ದೇಶಕ್ಕೆ ಅನ್ನ ನೀಡುವ ಕೆಲಸ ರೈತನದಾಗಿದೆ.

ರೈತ ದಿನಾಚರಣೆ ಶುಭಾಷಯಗಳು

 ಲೇಖಕರು ಮುತ್ತಣ್ಣ ಬ್ಯಾಗೆಳ್ಳಿ

Published On: 23 December 2020, 01:10 PM English Summary: kisan divas special story

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.