1. ಸುದ್ದಿಗಳು

ಟಾಟಾ ಗ್ರೂಪ್‌ನಿಂದ 45 ಸಾವಿರ ಜನರಿಗೆ ಉದ್ಯೋಗಾವಕಾಶ!

Hitesh
Hitesh
Tata

Job opportunity  ಟಾಟಾ ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. 

ಇದನ್ನೂ ಓದಿರಿ: TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್‌ ಕೊಡಿ ಎಂದ ಎಲಾನ್‌ ಮಸ್ಕ್‌!

ಟಾಟಾ ಗ್ರೂಪ್‌ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ (Job opportunity) ನೇಮಕಕ್ಕೆ ಮುಂದಾಗಿದೆ.  

ಹೊಸೂರಿನಲ್ಲಿರುವ ಐ-ಪೋನ್ ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಟಾಟಾ ಗ್ರೂಪ್‌ನ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

LPG ಗ್ರಾಹಕರಿಗೆ ಸಿಹಿಸುದ್ದಿ: ಸಿಲಿಂಡರ್‌ ದರದಲ್ಲಿ ಭಾರೀ ಇಳಿಕೆ!

ಟಾಟಾ ಮತ್ತು ಆಪಲ್‌ ಸಂಸ್ಥೆಗಳು ಜಂಟಿಯಾಗಿ ಐ-ಫೋನ್ ಘಟಕದ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿವೆ.  

ಮುಂದಿನ 18 ರಿಂದ 24 ತಿಂಗಳಿನಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ನೇಮಕಾತಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೂ ಆದ್ಯತೆ ಸಿಗುವ ಸಾಧ್ಯತೆ ಇದೆ.

ಈಗಾಗಲೇ ಕಂಪನಿಯಲ್ಲಿ ಅಂದಾಜು 10 ಸಾವಿರ (Job opportunity) ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ.  

ಹೀಗಾಗಿ,ಮುಂದಿನ ನೇಮಕಾತಿಯಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ.

Rbi: ಆರ್‌ಬಿಐ: ದೇಶದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಕರೆನ್ಸಿ ಲಭ್ಯ!  

tata

ಟಾಟಾ ಹಾಗೂ ಆಪಲ್ ಸಂಸ್ಥೆ ಒಂದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದ್ದು, ದಿನಾಂಕ ನಿಗದಿ ಮಾಡುವುದಷ್ಟೇ ಬಾಕಿ ಉಳಿದಿದೆ.

ಸುಮಾರು 500 ಎಕರೆ ಪ್ರದೇಶದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ.

ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರಿನಲ್ಲಿ ತಮಿಳುನಾಡು ಸರ್ಕಾರದಿಂದ ಭೂಮಿ ಪಡೆದು ಟಾಟಾ ಗ್ರೂಪ್ ಘಟಕ ನಿರ್ಮಾಣ ಮಾಡಿದೆ.

ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕನಿಷ್ಠ 16 ಸಾವಿರ ವೇತನ ನಿಗದಿ ಮಾಡುವ ಸಾಧ್ಯತೆ ಇದೆ.

ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆಹಾರ ಮತ್ತು ಆಶ್ರಯವನ್ನು ಕ್ಯಾಂಪಸ್‌ನಲ್ಲಿಯೇ ಕಲ್ಪಿಸಲಾಗುತ್ತದೆ.

ಉದ್ಯೋಗಕ್ಕೆ ನೇಮಕವಾದ ಮಹಿಳೆಯರಿಗೆ ಟಾಟಾ ಗ್ರೂಪ್ ತರಬೇತಿಯನ್ನು ನೀಡಲಿದೆ.

ವಿಸ್ಟ್ರಾನ್ ಜೊತೆ ಟಾಟಾ ಗ್ರೂಪ್‌ನೊಂದಿಗೆ ಚರ್ಚೆ ನಡೆಸಿದ್ದು, ಇನ್ನಷ್ಟು ವ್ಯವಸ್ಥೆ ಲಭ್ಯವಾಗುವ ಸಾಧ್ಯತೆಯನ್ನೂ ನಿರೀಕ್ಷಿಸಲಾಗಿದೆ.

ಚೀನಾ ಮತ್ತು ಅಮೆರಿಕ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸೃಷ್ಟಿ ಆಗಿರುವ ಸಮಸ್ಯೆಗಳು ಸೃಷ್ಟಿ ಆಗಿರುವ ಹಿನ್ನೆಲೆಯಲ್ಲಿಹಲವು ಕಂಪನಿಗಳು ಟಾಟಾ, ಆಪಲ್ ಕಡೆಗೆ ನೋಡುತ್ತಿದ್ದು, ಹೊಸ ಒಪ್ಪಂದಗಳು ಆಗುವ ಸಾಧ್ಯತೆ ಇದೆ.  

Published On: 02 November 2022, 02:15 PM English Summary: Job opportunity for 45 thousand people from Tata Group!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.