1. ಸುದ್ದಿಗಳು

TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್‌ ಕೊಡಿ ಎಂದ ಎಲಾನ್‌ ಮಸ್ಕ್‌!

Hitesh
Hitesh
Elon Musk

ಟ್ವಿಟರ್‌ ಬಾಸ್‌ ಎಲಾನ್‌ ಮಸ್ಕ್‌ ಅವರು ಹೊಸ ಷರತ್ತೊಂದನ್ನು ವಿಧಿಸಿದ್ದಾರೆ. ಅದರ ವಿವರ ಇಲ್ಲಿದೆ.

LPG ಗ್ರಾಹಕರಿಗೆ ಸಿಹಿಸುದ್ದಿ: ಸಿಲಿಂಡರ್‌ ದರದಲ್ಲಿ ಭಾರೀ ಇಳಿಕೆ!

twitter ದೂರುವವರು ದೂರುತ್ತಲೇ ಇರಿ ಆದರೆ, ಬ್ಲೂಟಿಕ್‌ಗೆ ನೀವು ತಿಂಗಳಿಗೆ ಎಂಟು ಡಾಲರ್‌ ಅಂದರೆ ಅಂದಾಜು 620ರೂಪಾಯಿ  ಪಾವತಿ ಮಾಡಬೇಕು ಎಂದು ಟ್ವಿಟರ್​ನ ಮಾಲೀಕ ಎಲಾನ್ (Elon Musk) ಮಸ್ಕ್ ಅವರು ಷರತ್ತು ವಿಧಿಸಿದ್ದಾರೆ.

ಟ್ವಿಟರ್‌ನ ಬ್ಲೂಟಿಕ್‌ಗೆ ಹಣ ಪಾವತಿ ಮಾಡಬೇಕಾಗಬಹುದು ಎನ್ನುವ ವಿಷಯ ಕಳೆದ ಒಂದು ವಾರದಿಂದ ಚರ್ಚೆಯಲ್ಲಿತ್ತು.

ಇದೀಗ ಎಲಾನ್‌ ಮಸ್ಕ್‌ (Elon Musk) ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ತಿಂಗಳಿಗೆ ಎಂಟು ಡಾಲರ್‌ ಕೊಡಬೇಕು ಎಂದು ಹೇಳಿದ್ದಾರೆ. 

ಈ ಸಂಬಂಧ ಬುಧವಾರ ಟ್ವೀಟ್‌ ಮಾಡಿರುವ ಅವರು “ To all complainers, please continue complaining, but it will cost $8” ದೂರುವವರೇ ದೂರುತ್ತಲೇ ಇರಿ ಆದರೆ,

ನೀವು ಮಾಸಿಕ ಎಂಟು ಡಾಲರ್‌ ಪಾವತಿ ಮಾಡಬೇಕು ಎಂದು ಟ್ವಿಟ್ಟಿಸಿದ್ದಾರೆ.

ಟ್ವಿಟರ್​ನಲ್ಲಿ ಅಧಿಕೃತ ಖಾತೆಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಬ್ಲೂಟಿಕ್ (Twitter Blue Tick) ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ಪಾವತಿಸಬೇಕು ಎನ್ನುವುದು ಈ ಟ್ವಿಟ್‌ನ ಅರ್ಥವಾಗಿದೆ.  

ಜನರೇ ಸ್ವತಃ ಶುಲ್ಕ ನೀಡಲು ಪ್ರಾರಂಭಿಸಿದರೆ, ಮುಂದೆ ಜಾಹೀರಾತುದಾರರ ಮೇಲೆ ಅವಲಂಬನೆ ಆಗುವುದು ಕಡಿಮೆಯಾಗುತ್ತದೆ.

Rbi: ಆರ್‌ಬಿಐ: ದೇಶದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಕರೆನ್ಸಿ ಲಭ್ಯ! 

Elon Musk

ಟ್ವಿಟರ್‌ ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ.

ಅಲ್ಲದೇ ಟ್ವಿಟರ್​ನಲ್ಲಿ ಬ್ಲೂಟಿಕ್ ಪಡೆಯುವುದು ಪ್ರತಿಷ್ಠೆಯ ವಿಷಯವೂ ಆಗಿದೆ ಎನ್ನಲಾಗಿದೆ.

ಇನ್ನು ಪ್ರಸ್ತುತ ಟ್ವಿಟರ್​ನಲ್ಲಿ ಎರಡು ಮಾದರಿಯ ಬಳಕೆದಾರರ ಸೃಷ್ಟಿ ಆಗಿದೆ. ಒಂದು ಹೆಚ್ಚು ಬಲಿಷ್ಠರು ಮತ್ತೊಂದು  ಕೆಲಸಗಾರರು ಎಂಬ ಎರಡು ವರ್ಗ ನಿರ್ಮಾಣವಾಗಿದೆ.

ವಾಟ್ಸಪ್‌ನಲ್ಲೂ ಲಭ್ಯ ಮೆಟ್ರೋ ಟಿಕೆಟ್‌; ಈ ಸೇವೆ ಪ್ರಾರಂಭಿಸಿದ ದೇಶದ ಮೊದಲ ಮೆಟ್ರೋ!  

twitter

ಮುಂದಿನ ದಿನಗಳಲ್ಲಿ ಈ ಅಸಮಾನತೆ ಇರುವುದಿಲ್ಲ. ತಿಂಗಳಿಗೆ 8 ಡಾಲರ್ ಶುಲ್ಕವನ್ನು ಯಾರೂ ಬೇಕಾದರೂ ಪಾವತಿ ಮಾಡಿ ಬ್ಲೂಟಿಕ್‌ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಬ್ಲೂಟಿಕ್‌ಗೆ ಈಗ ನಿರ್ಧರಿಸಿರುವ ಮೊತ್ತವು ಆಯಾ ದೇಶಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಲಾಗುವುದು ಎಂದು ಮಸ್ಕ್ ತಿಳಿಸಿದ್ದಾರೆ.

Gkvk: ಕೃಷಿ ಮೇಳಕ್ಕೆ ಜಿಕೆವಿಕೆ ಸಜ್ಜು; ಈ ಬಾರಿಯ ವಿಶೇಷತೆಗಳೇನು?  

twitter

ಸದ್ಯ ಟ್ವಿಟರ್‌ ಬ್ಲೂಟಿಕ್‌ಗೆ ಯಾವುದೇ ಹಣ ಪಡೆದುಕೊಳ್ಳುತ್ತಿಲ್ಲ. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿತ್ತು.   

ಸದ್ಯ ಬ್ಲೂ-ಟಿಕ್ ಪಡೆದಿರುವ ಖಾತೆಗಳಿಗೆ ಟ್ವಿಟರ್​ನಲ್ಲಿ ಆದ್ಯತೆ ಸಿಗುತ್ತದೆ. ಈ ಅಂಶವನ್ನು ಮಸ್ಕ್  ತಿಳಿಸಿದ್ದಾರೆ.

ಬ್ಲೂಟಿಕ್ ಪಡೆದ ಖಾತೆಗಳಿಗೆ ಪ್ರತಿಕ್ರಿಯೆಗಳು, ಉಲ್ಲೇಖಗಳು ಮತ್ತು ಹುಡುಕಾಟಗಳಲ್ಲಿ ಆದ್ಯತೆ ಸಿಗುತ್ತದೆ.

ಇಂಥವರಿಗೆ ದೀರ್ಘ ಅವಧಿಯ ವಿಡಿಯೊ ಹಾಗೂ ಆಡಿಯೊ ಪೋಸ್ಟ್ ಮಾಡಲೂ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.  

Published On: 02 November 2022, 11:06 AM English Summary: “continue complaining, but it will cost”

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.