1. ಸುದ್ದಿಗಳು

ಉದ್ಯೋಗ ಮೇಳ; 75 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಣೆ !

KJ Staff
KJ Staff
prime minister narendra modi

ಕೇಂದ್ರ ಸರ್ಕಾರದಿಂದ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೊದಲ ಹಂತದ “ಉದ್ಯೋಗ ಮೇಳ”ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು..

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?

ಪಟಿಯಾಲದ ಪಿಲ್‌ಡ್ಲ್ಯೂನಲ್ಲಿ ನಡೆದ ಉದ್ಯೋಗ ಮೇಳದ ಸಂದರ್ಭದಲ್ಲಿ ಕೇಂದ್ರ ಸಚಿವ ಹರ್ದೀಪ್ ಎಸ್. ಪುರಿ ಅವರು ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 50 ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಅಭಿಯಾನದ ಉದ್ಯೋಗ ಮೇಳದ ಮೊದಲ ಹಂತಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ನೂತನವಾಗಿ ನೇಮಕಗೊಂಡ 75 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸದಾಗಿ ನೇಮಕಗೊಂಡ ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಮತ್ತು ನಾಗರಿಕರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರ ನಿರಂತರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಒಂದು ಪ್ರಮುಖ ಹೆಜ್ಜೆಯಾಗಿದೆ.

ಪ್ರಧಾನಮಂತ್ರಿಯವರ ಸೂಚನೆಯಂತೆ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಮಂಜೂರಾದ ಹುದ್ದೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೆಲಸ ಮಾಡುತ್ತಿವೆ.

ಪಂಜಾಬ್‌ನಲ್ಲಿ, ಪಟಿಯಾಲಾದ ಪಟಿಯಾಲಾ ಲೋಕೋಮೋಟಿವ್ ವರ್ಕ್ಸ್ (ಪಿಎಲ್‌ಡ್ಲ್ಯೂ) ಮತ್ತು ಕಪುರ್ತಾಲಾದ ರೈಲ್ ಕೋಚ್ ಫ್ಯಾಕ್ಟರಿ (ಆರ್ಸಿಎಫ್) ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಎಸ್. ಪುರಿ ಅವರು ಪಟಿಯಾಲದ ಪಿಎಲ್ಡಬ್ಲ್ಯೂನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪಂಜಾಬ್ ಮತ್ತು ಪಕ್ಕದ ಪ್ರದೇಶಗಳಿಂದ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.    

ನೇಮಕಾತಿ ಪಡೆದವರನ್ನು ಪಟಿಯಾಲದ ಪಿಎಲ್ಡಬ್ಲ್ಯೂ, ಇಎಸ್ಐಸಿ, ಅಂಚೆ ಇಲಾಖೆ,ಬಿಎಸ್ಎಫ್, ಎಸ್ಎಸ್ಬಿ ಹಾಗೂ ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ನೇಮಿಸಲಾಗಿದೆ. 

ಕಡಿಮೆ ಅವಧಿಯಲ್ಲಿ ಹೆಚ್ಚು ಆಲೂಗಡ್ಡೆ ಇಳುವರಿ; ಇಲ್ಲಿದೆ ಟ್ರಿಕ್ಸ್‌!

ಈ ಕುರಿತು ಟ್ವೀಟ್ ಮಾಡಿರುವ ಹರ್ದೀಪ್ ಎಸ್. ಪುರಿ, ಭಾರತದ ಯುವಕರಿಗೆ ಸ್ಮರಣೀಯ ದಿನ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿಯವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದಾರೆ,

ಇದರಲ್ಲಿ 10 ಲಕ್ಷ ಯುವಜನರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗುವುದು!

ಮೊದಲ ಹಂತದಲ್ಲಿ 75,000 ಉದ್ಯೋಗಗಳು. ಪಟಿಯಾಲದಿಂದ ಆಯ್ಕೆಯಾದ ಒಟ್ಟು 75 ಅಭ್ಯರ್ಥಿಗಳಲ್ಲಿ 25 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಈ ನೇಮಕಾತಿಯನ್ನು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಮತ್ತು ಯುಪಿಎಸ್ಸಿ, ಎಸ್ಎಸ್ಸಿ, ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡಲಾಗುತ್ತದೆ.

ತ್ವರಿತ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಮತ್ತು ತಾಂತ್ರಿಕವಾಗಿ ಪರಿಣಾಮಕಾರಿಯಾಗಿ ಮಾಡಲಾಗಿದೆ.

Published On: 23 October 2022, 10:07 AM English Summary: Job Fair; Distribution of appointment letters to more than 75 thousand people

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.