1. ಸುದ್ದಿಗಳು

ಸಾಲು ಸಾಲು ಹಬ್ಬ: ಐದು ದಿನ ಬ್ಯಾಂಕ್‌ಗಳಿಗೆ ರಜೆ!

KJ Staff
KJ Staff
bank holidays

ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ಆಗಿದ್ದರೆ ಎಲ್ಲಿಯವರೆಗೆ ರಜೆ, ಯಾವ ಸೌಲಭ್ಯ ಇರುತ್ತದೆ ಇಲ್ಲಿದೆ ಮಾಹಿತಿ…

ಉದ್ಯೋಗ ಮೇಳ; 75 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಣೆ !

ಅಕ್ಟೋಬರ್‌ ತಿಂಗಳು ಮುಗಿಯಲು ಇನ್ನು ಏಳು ದಿನಗಳಷ್ಟೇ ಬಾಕಿ ಉಳಿದಿವೆ. ದೀಪಾವಳಿ ಮತ್ತು ಇತರ ಹಬ್ಬಗಳ ಕಾರಣ ಬ್ಯಾಂಕುಗಳು ಬಹುತೇಕ ದಿನಗಳು ಮುಚ್ಚಲ್ಪಡುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ, ಬ್ಯಾಂಕುಗಳು ಬಹುತೇಕ ವಾರ ಪೂರ್ತಿ ಮುಚ್ಚಿರುತ್ತವೆ. ಈ ಸಮಯದಲ್ಲಿ ಯಾವ ಪ್ರದೇಶದಲ್ಲಿ ಯಾವ ದಿನ ರಜೆ ಇರುತ್ತದೆ ಎನ್ನುವ ಕುತೂಹಲವೇ ಇಲ್ಲಿದೆ ಮಾಹಿತಿ.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!

  • ಅಕ್ಟೋಬರ್ 23 ಭಾನುವಾರ ದೇಶದಾದ್ಯಂತ ರಜಾದಿನವಾಗಿದೆ.
  • ಅಕ್ಟೋಬರ್  24 ಕಾಳಿ ಪೂಜೆ/ ದೀಪಾವಳಿ/ ನರಕ್ ಚತುರ್ದಶಿಯ ಕಾರಣ ಗ್ಯಾಂಗ್ಟಾಕ್, ಹೈದರಾಬಾದ್ ಮತ್ತು ಇಂಫಾಲ್ ಹೊರತುಪಡಿಸಿ ಇಡೀ ದೇಶದಲ್ಲಿ ಬ್ಯಾಂಕ್ಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. 
  • ಅಕ್ಟೋಬರ್ 25ರಂದು ಲಕ್ಷ್ಮೀ ಪೂಜೆ/ ದೀಪಾವಳಿ/ ಗೋವರ್ಧನ ಪೂಜೆಯ ಕಾರಣದಿಂದ ಗ್ಯಾಂಗ್ಟಾಕ್, ಹೈದರಾಬಾದ್ ಮತ್ತು ಇಂಫಾಲ್‌ನಲ್ಲಿ ರಜೆ ಇರುತ್ತದೆ.
  • ಅಕ್ಟೋಬರ್ 26ರಂದು ಗೋವರ್ಧನ ಪೂಜೆ/ ವಿಕ್ರಮ ಸಂವತ್ ಹೊಸ ವರ್ಷದ ದಿನ/ ಭಾಯಿ ದೂಜ್/ ದೀಪಾವಳಿ/ ಬಲಿ ಪ್ರತಿಪದ/ಲಕ್ಷ್ಮೀ ಪೂಜೆ/ಪ್ರವೇಶ ದಿನ- ಅಹಮದಾಬಾದ್, ಬೆಂಗಳೂರು,  ಡೆಹ್ರಾಡೂನ್, ಗಗ್ಟಕ್, ಜಮ್ಮು, ಕಾನ್ಪುರ್, ಲಕ್ನೋ, ಮುಂಬೈ, ನಾಗ್ಪುರ, ಶಿಮ್ಲಾ, ಶ್ರೀನಗರ ಬ್ಯಾಂಕ್ ಮುಚ್ಚಿರುತ್ತವೆ.
  • ಇನ್ನು ಅಕ್ಟೋಬರ್ 27ರಂದು ಭಾಯಿ ದೂಜ್/ ಚಿತ್ರಗುಪ್ತ ಜಯಂತಿ/ ಲಕ್ಷ್ಮೀ ಪೂಜೆ/ ದೀಪಾವಳಿ/ ನಿಂಗೋಲ್ ಚಕ್ಕುಬಾದ ಹಿನ್ನೆಲೆಯಲ್ಲಿ  ಗ್ಯಾಂಗ್‌ಟಾಕ್, ಇಂಫಾಲ್, ಕಾನ್ಪುರ ಮತ್ತು ಲಕ್ನೋದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿವೆ

ರಜಾದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್‌ ಸೇವೆ ಲಭ್ಯ

ದೇಶದಲ್ಲಿ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದ್ದರೂ, ಹಬ್ಬದ ಋತುವಿನಲ್ಲಿ ಬ್ಯಾಂಕ್ ಶಾಖೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆದರೆ, ಗ್ರಾಹಕರ ಅನುಕೂಲಕ್ಕಾಗಿ, ಬ್ಯಾಂಕ್‌ಗಳು ತಮ್ಮ ಆನ್‌ಲೈನ್ ಸೇವೆಗಳ ಮೂಲಕ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ. ಇದು ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲು ಸಹಕಾರಿ ಆಗಿದೆ.

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?

Published On: 23 October 2022, 11:29 AM English Summary: festival: Five days off for banks!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.