1. ಸುದ್ದಿಗಳು

ಜೂನ್‌ 25ರಿಂದ 25ರವರೆಗೆ “ಹಲಸು ಮೇಳ-2023” ಆಯೋಜನೆ : ವಿಶೇಷ ಆಕರ್ಷಣೆಗಳು ಉಂಟು!

Kalmesh T
Kalmesh T
“Jackfruit Mela-2023” Organized from June 25 to 25

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಮತ್ತು Robosoft Technologies Private Ltd. Udupi ಇವರ ಸಹಯೋಗದಲ್ಲಿ Robosoft Technologies Private Ltd. ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ನಿರ್ಮಾಣವಾದ ರೈತ ಸೇವಾ ಕೇಂದ್ರದ ಮೇಲ್ಟಾವಣಿಯ ಲೋಕಾರ್ಪಣೆ

ಮತ್ತು ಹಲಸು ಮೇಳ-2023 ದಿನಾಂಕ 22-06-2023ನೇ ಗುರುವಾರದಿಂದ ದಿನಾಂಕ 25-06-2023ನೇ ರವಿವಾರದವರೆಗೆ ಉಡುಪಿಯ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರದ ಆವರಣ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರ, ದೊಡ್ಡಣ್ಣಗುಡ್ಡೆಯಲ್ಲಿ ಆಯೋಜಿಸಲಾಗಿದೆ.

ವಿಶೇಷ ಆಕರ್ಷಣೆಗಳು

* ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಾತಿಯ ಹಲಸಿನ ಹಣ್ಣಿನ ಮಾರಾಟ

* ಹಲಸಿನ ಹಣ್ಣಿನ ವಿವಿಧ ಖಾದ್ಯಗಳು ಹಾಗೂ ಉತ್ಪನ್ನಗಳ ಮಾರಾಟ

ಜೇನು ಹಾಗೂ ಜೇನಿನ ಉತ್ಪನ್ನಗಳು ಮಾರಾಟ

* ಜಿಲ್ಲೆಯ ಹಾಗೂ ಹೊರಜಿಲ್ಲೆಯ ರೈತರು ಬೆಳೆದ ವಿವಿಧ ಹಣ್ಣುಗಳ ಮಾರಾಟ

* ಹಲಸು ಹಾಗೂ ಇತರ ಗಿಡಗಳ ಮಾರಾಟ

* ಹಲಸು ಹಾಗೂ ಹಲಸು ಉತ್ಪನ್ನಗಳ ಬಗ್ಗೆ ವಿಚಾರ ಸಂಕೀರಣ ಆಯೋಜನೆ

ಮಳಿಗೆ ತೆರೆಯಲು ಹಾಗೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಚಿಸಿದಲ್ಲಿ ತೋಟಗಾರಿಕೆ ನಿರ್ದೇಶಕರಾದ ಗುರುಪ್ರಸಾದ್ ಸಹಾಯಕ (9900910948) ರವರನ್ನು ಸಂಪರ್ಕಿಸಲು ಕೋರಿದೆ

Published On: 20 June 2023, 06:07 PM English Summary: “Jackfruit Mela-2023” Organized from June 25 to 25

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.