ಸಾವಿರಾರು ಜನರು ಪ್ರತಿ ದಿನ ಕರ್ನಾಟಕದಿಂದ ಉತ್ತರ ಭಾರತಕ್ಕೆ ಪ್ರಯಾಣಿಸುತ್ತಾರೆ. ಆ ಎಲ್ಲ ಪ್ರಯಾಣಿಕರಿಗೆ ಒಂದು ಸುದ್ದಿ. ಉತ್ತರ ಭಾರತದಲ್ಲಿ ಚಳಿ ಸ್ಟಾರ್ಟ್ ಆಗಿದೆ ಮತ್ತು ಯಾರ್ ಯಾರು ಉತ್ತರಭಾರತಕ್ಕೆ ತಮ್ಮ ಪ್ರಯಾಣ ವನ್ನು ಮಾಡಲು ಬಯಸುತ್ತಿದ್ದಾರೋ ಅವರಲ್ಲಿ ವಿನಂತಿ ಎಂದರೆ ಅವರೆಲ್ಲ ಪ್ರಯಾಣಿಸುವಾಗ ಬೆಚ್ಚನೆಯ ಬಟ್ಟೆ ಮತ್ತು ಬೆಚ್ಚನೆಯ ವಸ್ತುಗಳನ್ನು ತಮ್ಮ ಜೊತೆ ತಗೆದುಕೊಂಡು ಹೋಗಬೇಕು.
ನಾನು ಇವಾಗ ದೆಹಲಿಯಲ್ಲಿ ಇದ್ದೇನೆ ಮತ್ತು ಇಲ್ಲಿಯ ಚಳಿ ತುಂಬಾ ಜೋರು, ನಿಮ್ಮ ಜೊತೆಗೆ ಒಂದು ವಿಷಯ ಹಂಚಿ ಕೊಳ್ಳುವ ಇಚ್ಚೆಯಲ್ಲಿದ್ದೇನೆ. ಸುಮಾರು ಒಂದು ವರ್ಷದ ಹಿಂದೆ ನಾನು ನನ್ನ ಜೀವನದ ಹೊಸ ಅಧ್ಯಾಯ (ಪತ್ರಕರಣ್ ಜೀವನ ) ಶುರು ಮಾಡಲು ನಮ್ಮ ಊರು ಗೋಕಾಕ್ ನಿಂದ ನನ್ನ ಪ್ರಯಾಣ ದೆಹೆಲಿಯತ್ತ ನಡಿಸಿದೆ, ಅವಾಗ ಚಳಿಗಾಲ. ತಂದೆ ಹೇಳಿದ ಮಾತನ್ನು ಕೇಳದೆ ಒಂದು ಸಿಂಪಲ್ ಆದ ಹೊದ್ದಿಕೆಯನ್ನು ತಗೆದು ಕೊಂಡೆ ಮತ್ತು ಉತ್ತರ ಭಾರತದ ಚಳಿಯನ್ನು ಅನುಭವಿಸಲು ಹೊರಟೆ. ಮಹಾರಾಷ್ಟ್ರ ದಾಟುವವರೆಗೂ ಎಲ್ಲ ಚನ್ನಾಗೇ ಇತ್ತು. ಆದರೆ ಯಾವಾಗ ಮಧ್ಯಪ್ರದೇಶ ದಾಟಿದಂತೆಯೇ ಶುರು ವಾಯಿತು ಚಳಿ ದೇವನ ಆರ್ಭಟ! ಕುಂತಲ್ಲೇ ಕೂರಲಾರದೆ ನಿಂತಲ್ಲೇ ನಿಲ್ಲ ಲಾರದೆ ಒದ್ದಾಡಿದೆ. ಎಲ್ಲ ದೇವರುಗಳ ದರ್ಶನ ಒಟ್ಟಾರೆ ಆಯಿತು.
ಈಗ ಉತ್ತರ ಭಾರತ ಸುದ್ದಿಗೆ ಬಂದಾಗ ಸುಮಾರು ಸ್ಥಾನಗಳಲ್ಲಿ ಮಳೆ ಬಿದ್ದ ಕಾರಣ ಈಗಿನ ಉತ್ತರ ಭಾರತದ ಹವಾಮಾನದಲ್ಲಿ ಪರಿವರ್ತನೆ ಕಂಡಿದೆ ಮತ್ತು ಹಿಮಾಲಯ ಬೆಟ್ಟದ ಶ್ರೇಣಿಗಳಲ್ಲಿ ಹಿಮಪಾತ ಜೋರಾಗಿ ಆಗುತ್ತಿರುವುದರಿಂದ ಉತ್ತರ ಭಾರತದಲ್ಲಿ ಚಳಿ ಜೋರಾಗಿದೆ. I .M .D (ಇಂಡಿಯನ್ ಮೀಟರೋಲಾಜಿಕಲ್ ಡಿಪಾರ್ಟ್ಮೆಂಟ್) ವತಿಯಿಂದ ಉತ್ತರ ಭಾರತದಲ್ಲಿ ಪ್ರಸುತ ತಾಪಮಾನದಲ್ಲಿ 2 ರಿಂದ 4 ಡಿಗ್ರಿಗಳಷ್ಟು ತಾಪಮಾನದಲ್ಲಿ ಇಳಿಕೆ ಕಂಡು ಬರುವುದೆಂದು ರಿಪೋರ್ಟ್ ಬಂದಿದೆ.
ಕಾರಣ ಯಾರ್ ಯಾರು ಉತ್ತರ ಭಾರತಕ್ಕೆ ಪ್ರಯಾಣಿಸುತ್ತಾರೋ ಅವರೆಲ್ಲರಲ್ಲಿ ಒಂದು ವಿನಂತಿ. ದಯಮಾಡಿ ಬೆಚ್ಚನೆಯ ಹೊದಿಕೆ ಮತ್ತು ಬೆಚ್ಚನೆಯ ಬಟ್ಟೆಗಳನ್ನು ತಗೆದುಕೊಂಡು ಪ್ರಯಾಣಿಸಿ.
ಇನ್ನಷ್ಟು ಓದಿರಿ: ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಕೃಷಿ ಹೊಂಡ, ಅರಿಷಿಣ, ಈರುಳ್ಳಿ, ಒಣದ್ರಾಕ್ಷಿ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ಹನಿ ಮತ್ತು ತುಂತುರು ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನ
Share your comments