1.. ರಾಜ್ಯದಾದ್ಯಂತ 438 ನಮ್ಮ ಕ್ಲಿನಿಕ್: ಎಲ್ಲರಿಗೂ ಸಿಗಲಿದೆ ಉಚಿತ ಆರೋಗ್ಯ ಸೇವೆ!
2..ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು: ಬಸವರಾಜ ಬೊಮ್ಮಾಯಿ
3.. ಏಮ್ಸ್ನಲ್ಲಿ ರಾಗಿ ಕ್ಯಾಂಟೀನ್ ನಿನ್ನೆಯಿಂದ ಕಾರ್ಯಾರಂಭ
4.. ಹವಾಮಾನ ವೈಪರೀತ್ಯ ಸಮಸ್ಯೆ ನಿವಾರಿಸುವಲ್ಲಿ ಭಾರತದ ಸಾಧನೆ ಮಹತ್ವದ್ದು : ಬಿಲ್ಗೇಟ್ಸ್
5.. ಕಲ್ಯಾಣ ಕರ್ನಾಟಕ ಉತ್ಸವ: ಶ್ವಾನ ಪ್ರದರ್ಶನದಲ್ಲಿ ಬೆರಗುಗೊಳಿಸಿದ ಹತ್ತಾರು ಬಗೆಯ ಶ್ವಾನಗಳು
6.. ಫೆಬ್ರವರಿ ತಿಂಗಳಲ್ಲಿ 1,49,557 ಕೋಟಿ ದಾಖಲೆ ಜಿಎಸ್ ಟಿ ಸಂಗ್ರಹ:
*-*-*
Gold Rate Today ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ!
1..
ರಾಜ್ಯದಾದ್ಯಂತ 438 ನಮ್ಮ ಕ್ಲಿನಿಕ್ಗಳನ್ನು ಪರಿಚಯಿಸಲಾಗುತ್ತಿದ್ದು, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಕ್ಷೇತ್ರಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ಶಿಕ್ಷಣಕ್ಕೆ ನಮ್ಮ ಸರ್ಕಾರವು ಒತ್ತು ನೀಡುತ್ತಿದೆ. ಅಲ್ಲದೇ ವಿದೇಶಿ ಬಂಡವಾಳ, ಆವಿಷ್ಕಾರದಲ್ಲಿ ರಾಜ್ಯ ಮುಂದಿದೆ. ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ, ಬಡತನನಿರ್ಮೂಲನೆಯಲ್ಲಿ ಅಲ್ಲಲ್ಲಿ ಅಸಮಾನತೆ ಕಂಡುಬರುತ್ತಿದ್ದ ಕಾರಣ, ಹಲವು ಜನಪರ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ರೈತರ, ರೈತ ಕೂಲಿಕಾರ್ಮಿಕರ, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಸುಮಾರು 8 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. 100 ಪಿಎಚ್ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.
*-*-*
2..
ಭಾರತದಲ್ಲಿ ನಿಂತ ನೀರಾಗಿದ್ದ ಅಭಿವೃದ್ಧಿ ಕೆಲಸಗಳಿಗೆ ಇಂದು ವೇಗ ನೀಡಲಾಗಿದೆ. ದೇಶದ ಪ್ರತಿ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಗುರಿ ತಲುಪಿಸಲು ಜಲಜೀವನ ಮಿಷನ್ ಯೋಜನೆಯಡಿ ದೇಶದ 10 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ಅವರು ಸಿದ್ಧಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಹಾಗೂ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ.ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ತಲುಪಿಸಲಾಗಿದೆ. ಸರ್ವೋದಯದೊಂದಿಗೆ ನವೋದಯವನ್ನು ಸಾಧಿಸಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
*-*-*
Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ?
3..
ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಜಾಗತಿಕವಾಗಿ ರಾಗಿ ಉತ್ಪನ್ನಗಳನ್ನು ಪ್ರಚಾರ ಮಾಡಲು, 'ರಾಗಿ ಕ್ಯಾಂಟೀನ್' ಆರಂಭಿಸಲಾಗಿದೆ. ನಿನ್ನೆಯಿಂದ ಈ ಕ್ಯಾಂಟೀನ್ ಆರಂಭಗೊಂಡಿದ್ದು, ಟೀನ್ ಸೆಂಟ್ರಲ್ ಕೆಫೆಟೇರಿಯಾದ ಎರಡನೇ ಮಹಡಿಯಲ್ಲಿದೆ. 2023 ಅನ್ನು 'ಅಂತಾರಾಷ್ಟ್ರೀಯ ವರ್ಷದ ರಾಗಿ' ಎಂದು ಘೋಷಿಸಿರುವ ನಿಟ್ಟಿನಲ್ಲಿ ಈ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಈ ಕ್ಯಾಂಟೀನ್ನಲ್ಲಿ ವಿಶೇಷವಾಗಿ ಸಿರಿಧಾನ್ಯಗಳಿಂದ ಮಾಡಿದ ಪದಾರ್ಥಗಳು ಮಾತ್ರ ಲಭ್ಯವಿರುತ್ತದೆ. ಏಮ್ಸ್ನಲ್ಲಿ ದಾಖಲಾಗುವ ರೋಗಿಗಳಿಗೆ ಆರೀಗ್ಯದ ದೃಷ್ಟಿಯಿಂದ ಈ ಕ್ಯಾಂಟೀನ್ ಉತ್ತಮ ಗುಣಮುಟ್ಟದ ಆಹಾರವನ್ನು ಒದಗಿಸಲಿದೆ.
*-*-*
4..
ಹವಾಮಾನ ವೈಪರೀತ್ಯ ಸಮಸ್ಯೆಗೆ ವೈಜ್ಞಾನಿಕ ಆವಿಷ್ಕಾರದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅದಕ್ಕೆ ಭಾರತ ನೇತೃತ್ವ ವಹಿಸಬೇಕು ಎಂದು ಮೈಕ್ರೋಸಾಫ್ಟ್ನ ಸಹಸಂಸ್ಥಾಪಕ ಬಿಲ್ಗೇಟ್ಸ್ ಕರೆ ನೀಡಿದ್ದಾರೆ. ತಮ್ಮ ಬ್ಲಾಗ್ನಲ್ಲಿ ಅವರು, ಜಗತ್ತಿನಲ್ಲಿ ತಲೆದೂರಿರುವ ಜಾಗತಿಕ ಸಮಸ್ಯೆಯನ್ನ ನಿವಾರಣೆ ಮಾಡುವ ನಿಟ್ಟಿನಲ್ಲಿ ಭಾರತದ ಸಾಧನೆ ಉತ್ತಮವಾಗಿದೆ ಎಂದು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತವು ನನಗೆ ಮುಂದಿನ ಭವಿಷ್ಯದ ಹೊಸ ಭರವಸೆಯನ್ನು ನೀಡುತ್ತದೆ. ಇದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲು ಹೊರಟಿದೆ, ಇನ್ನೂ, ಭಾರತವು ದೊಡ್ಡ ಸವಾಲುಗಳನ್ನು ನಿಭಾಯಿಸಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
*-*-*
5..
ಕಲ್ಯಾಣ ಕರ್ನಾಟಕ ಉತ್ಸವದ ಕೊನೆ ದಿನವಾದ ರವಿವಾತ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಒಳಾಂಗಣ ಕ್ರೀಡಾಂಗಣದಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶ್ವಾನ ಪದರ್ಶನ ಮೇಳದಲ್ಲಿ ಜಿಲ್ಲೆಯ ಹತ್ತಾರು ತಳಿಗಳ ಶ್ವಾನಗಳು ಪ್ರದರ್ಶನಗೊಂಡವು. ನೂರಾರು ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳೊಂದಿಗೆ ಸಂಭ್ರಮ ಮತ್ತು ಉತ್ಸಾಹದಿಂದ ಭಾಗಿಯಾದರು. ಕಾರ್ಯಕ್ರಮಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಶ್ವಾನದಳದಿಂದ ಅಪರಾಧಿಗಳ ಪತ್ತೆ ಮಾಡುವ ಜರ್ಮನ್ ಶೆಫರ್ಡ್. ಮತ್ತು ವಿಐಪಿ ಭದ್ರತಾ ಪರಿಶೀಲನೆ, ಮಾದಕ ವಸ್ತು ಸ್ಫೋಟಕಗಳನ್ನು ಪತ್ತೆ ಹಚ್ಚಲು ವಿಶೇಷ ಅಣಕು ಪ್ರದರ್ಶನ ಶ್ವಾನ ಪ್ರಿಯರಲ್ಲಿ ಆಸಕ್ತಿ ಮೂಡಿಸಿತು..
*-*-*
6..
ಪೆಬ್ರವರಿ ತಿಂಗಳಲ್ಲಿ ಸರುಕು ಸೇವಾ ತೆರಿಗೆ – ಜಿಎಸ್ ಟಿ 1 ಲಕ್ಷ 49 ಸಾವಿರದ 557 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಇದೇ ತಿಂಗಳಿಗೆ ಹೊಲಿಸಿದರೆ ಶೇ. 12ರಷ್ಟು ಜಿಎಸ್ ಟಿ ಸಂಗ್ರಹಣೆ ಹೆಚ್ಚಾಗಿದೆ. ಸತತ 12 ತಿಂಗಳಿನಿಂದ ಪ್ರತಿ ತಿಂಗಳ ಜಿಎಸ್ ಟಿ ಸಂಗ್ರಹದ ಮೊತ್ತ 1 ಲಕ್ಷ 40 ಸಾವಿರಕ್ಕೂ ಅಧಿಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪೆಬ್ರವರಿ ತಿಂಗಳಲ್ಲಿ ಸಂಗ್ರಹವಾಗಿರುವ 1 ಲಕ್ಷ 49 ಸಾವಿರದ 577 ಕೋಟಿ ರೂಪಾಯಿ ಜಿಎಸ್ ಟಿ ತೆರಿಗೆಯಲ್ಲಿ ಸಿಜಿಎಸ್ ಟಿ- 27 ಸಾವಿರದ 662 ಕೋಟಿ ರೂಪಾಯಿ. ಎಸ್ ಜಿಎಸ್ ಟಿ – 34 ಸಾವಿರದ 915 ಕೋಟಿ ರೂಪಾಯಿ, ಕೋಟಿ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ.
Share your comments