1. ಸುದ್ದಿಗಳು

ದೇಶ 31, ವಿಮಾನ 149..! ಮೇ 16 ರಿಂದ ವಂದೇ ಭಾರತ್‌ ಮಿಷನ್ 2.0

ಕೊರೋನಾ ಸೋಂಕು ದೇಶಾದ್ಯಂತ ಹರಡುತ್ತಿದ್ದರಿಂದ ಸಮುದಾಯದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಹೇರಲಾದ ಲಾಕ್ಡೌನ್ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆದುಕೊಂಡು ಬರುವ ವಂದೇ ಭಾರತ್‌ ಮಿಷನ್‌ನ ಎರಡನೇ ಹಂತ ಮೇ 16 ರಿಂದ ಪ್ರಾರಂಭವಾಗಲಿದೆ.

31 ದೇಶಗಳಿಂದ ಭಾರತೀಯರನ್ನು ಕರೆದುಕೊಂಡು ಬರಲು ಪ್ಲಾನ್‌ ಸಿದ್ಧವಾಗಿದೆ. ಇದಕ್ಕಾಗಿ 149 ವಿಮಾನಗಳನ್ನು ಕೇಂದ್ರ ನಿಗದಿಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಹಂತದ ವಂದೇ ಭಾರತ್‌ ಮಿಷನ್‌ನಲ್ಲಿ ಒಟ್ಟು 31 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ನಿರ್ಧರಿಸಿದೆ. ಇದಕ್ಕಾಗಿ 149 ವಿಮಾನಗಳನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ. ಇದರ ಜೊತೆ ಫೀಡರ್‌ ವಿಮಾನಗಳನ್ನು ಕೂಡ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ, ಯುಎಇ, ಕೆನಡಾ, ಸೌದಿ ಅರೇಬಿಯಾ, ಇಂಗ್ಲೆಂಡ್‌, ಮಲೇಷಿಯಾ, ಓಮನ್‌, ಕಜಕಸ್ಥಾನ್‌, ಆಸ್ಟ್ರೇಲಿಯಾ, ಉಕ್ರೇನ್‌, ಕತಾರ್‌, ಇಂಡೋನೆಷಿಯಾ, ರಷ್ಯಾ, ಫಿಲಿಫೈನ್ಸ್‌, ಫ್ರಾನ್ಸ್‌, ಸಿಂಗಪೂರ್‌, ಐರ್ಲೆಂಡ್‌, ಕಿರ್ಗಿಸ್ತಾನ್‌, ಕುವೈತ್‌, ಜಪಾನ್‌, ಜೊರ್ಜಿಯೋ, ಜರ್ಮನಿ, ತಜಕಿಸ್ತಾನ್‌, ಬಹ್ರೇನ್‌, ಆರ್ಮೇನಿಯಾ, ಥೈಲ್ಯಾಂಡ್‌, ಇಟಲಿ, ನೇಪಾಳ, ಬೆಲಾರಸ್‌, ನೈಜೀರಿಯಾ ಹಾಗೂ ಬಾಂಗ್ಲಾದೇಶದಲ್ಲಿನ ಭಾರತೀಯರನ್ನು ಎರಡನೇ ಹಂತದಲ್ಲಿ ಕರೆದುಕೊಂಡು ಬರಲಾಗುತ್ತದೆ.

ಮೊದಲ ಸುತ್ತಿನ ವಾಪಸಾತಿ ಮೇ ಮಧ್ಯಭಾಗದಲ್ಲಿ ಸುಮಾರು 2 ಲಕ್ಷ ಜನರನ್ನು ಮರಳಿ ತರುವ ನಿರೀಕ್ಷೆಯಿದೆ. ಜೂನ್ ಮಧ್ಯದ ವೇಳೆಗೆ ಸುಮಾರು 3.5-4 ಲಕ್ಷವನ್ನು ವಾಪಸ್ ತರಲಾಗುವುದು ಎಂದು ಸರ್ಕಾರ ಹೇಳಿದೆ.ಐದು ದಿನಗಳ ಮೊದಲ ಹಂತದ ಡ್ರೈವ್ - ಕಳೆದ ವಾರ ಪ್ರಾರಂಭವಾಯಿತು - ಯುಎಸ್ ಮತ್ತು ಯುಕೆ, ಆಗ್ನೇಯ ಏಷ್ಯಾ ಮತ್ತು ಕೊಲ್ಲಿಯ ಜನರನ್ನು ಮರಳಿ ಕರೆತಂದಿತು.
ಸರ್ಕಾರವು ವಾಣಿಜ್ಯ ಜೆಟ್‌ಗಳು, ಮಿಲಿಟರಿ ವಿಮಾನಗಳು ಮತ್ತು ಯುದ್ಧನೌಕೆಗಳನ್ನು ಕೊಲ್ಲಿ ಯುದ್ಧದ ನಂತರದ ಅತಿದೊಡ್ಡ ವಾಪಸಾತಿ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿತ್ತು.

Published On: 12 May 2020, 07:58 PM English Summary: Indians will be brought back from 31 countries through 149 flights

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.