ಲಾಕ್ಡೌನ್ ಸಡಿಲಿಕೆಯಾದ ಬಳಿಕ ಕೋರೋನಾ ವೈರಸ್ ತನ್ನ ಅಬ್ಬರ ಮುಂದುವರೆಸಿದೆ. ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಶುಕ್ರವಾರ ರಾತ್ರಿ ಸೋಂಕಿತರ ಸಂಖ್ಯೆ 3,09600ಕ್ಕೆ ಏರಿಕೆಯಾಗಿದೆ. ಪ್ರತಿದಿನ ಸರಾಸರಿ 10 ಸಾವಿರಕ್ಕೂ ಹೆಚ್ಚಾಗುತ್ತಿದೆ. ಕಳೆದ ವಾರ ಏಳನೇ ಸ್ಥಾನದಲ್ಲಿದ್ದ ಭಾರತವೀಗ 4ನೇ ಸ್ಥಾನಕ್ಕೆ ತಲುಪಿದೆ.
ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ.ಶುಕ್ರವಾರ ಒಂದೇ ದಿನ ಭಾರತದಲ್ಲಿ ದಾಖಲೆಯ 396 ಜನ ಕೊರೊನಾಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 8,890ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 1 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಮಹಾರಾಷ್ಟ್ರವೊಂದರಲ್ಲೇಸೋಂಕಿತರ ಸಂಖ್ಯೆ 1,01,141ಕ್ಕೆ ಏರಿಕೆಯಾಗಿದೆ. ಇಲ್ಲಿ ಸಾವಿನ ಸಂಖ್ಯೆ 3717ಕ್ಕೆ ತಲುಪಿದೆ. ಶುಕ್ರವಾರ ದಾಖಲೆಯ 3,493 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಸದ್ಯ ಈ ರಾಜ್ಯದಲ್ಲಿ 49 ಸಾವಿರ ಪ್ರಕರಣದು ಸಕ್ರಿಯವಾಗಿವೆ. ಮಹಾರಾಷ್ಟ್ರದ ನಂತರ ತಮಿಳುನಾಡು ಇದ್ದು, 40,698 ಕೊರೊನಾ ಪ್ರಕರಣಗಳು ಕಂಡುಬಂದಿವೆ. ರಾಜಧಾನಿ ದೆಹಲಿಯಲ್ಲಿ 36,824 ಪಾಸಿಟಿವ್ ಕೇಸ್‌ಗಳು ಕಂಡುಬಂದಿವೆ.
ಕರ್ನಾಟಕದಲ್ಲಿ 271 ಹೊಸ ಪ್ರಕರಣ-ಸೋಂಕಿತರ ಸಂಖ್ಯೆ 6516, ಮೃತರ ಸಂಖ್ಯೆ 79ಕ್ಕೆ ಏರಿಕೆ
ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 271 ಕೊರೋನಾ ಸೋಂಕು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 6516 ಕ್ಕೆ ತಲುಪಿದೆ.ಸೋಂಕಿನಿಂದ ಶುಕ್ರವಾರ ಒಂದೇ ದಿನ ದಾಖಲೆಯ 7 ಜನ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ನಾಲ್ವರು, ಕಲಬುರಗಿಯಲ್ಲಿ ಇಬ್ಬರು, ಹಾಸನದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.ಕಳೆದ ವಾರದಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತಿದೆ ಆದರೆ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಆತಂಕ ಹೆಚ್ಚಾಗಿದೆ.
ಭಾರತದಲ್ಲಿ ಮೂರು ಲಕ್ಷ ಗಡಿ ದಾಟಿದ ಕೊರೋನಾ- ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಕೊರೋನಾ
Published On: 13 June 2020, 06:10 PM
English Summary: India’s coronavirus count crosses 3 lakh
Share your comments