1. ಸುದ್ದಿಗಳು

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ

Kalmesh T
Kalmesh T
Indefinite sit-in by State Sugarcane Growers Association for 2nd day

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಮುಂದುವರೆದಿದೆ.

ಇದನ್ನೂ ಓದಿರಿ: ರೈತರ ಸಮಸ್ಯೆಗಳನ್ನು ಸಮಾಜದ ಮುಂದೆ ತೆರದಿಡುವ ಕಾರ್ಯ ಶ್ಲಾಘನೀಯ!

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಮುಂದುವರೆದಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮನವಿಯನ್ನ ತಿರಸ್ಕರಿಸಿ, ಕಬ್ಬಿನ ದರ ನಿಗದಿಗೊಳಿಸುವವರೆಗೆ ಹೋರಾಟ ಮುಂದುವರಿಕೆ ಮಾಡಿದ್ದಾರೆ.

ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚುವರಿ ನಿಗದಿಗಾಗಿ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರರು ಅಹೋರಾತ್ರಿ ಹೋರಾಟ ನಡೆಸಿದ್ದು, ಹೋರಾಟದ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಪೂಜಾರ್ ರವರು ಭೇಟಿ ನೀಡಿದ್ದಾರೆ.

ಅಲ್ಲದೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಅಲ್ಲಿಯವರೆಗೆ ಚಳುವಳಿ ಕೈಬಿಡುವಂತೆ ಮನವಿಯನ್ನು ಮಾಡಿದರು.

ಇದಕ್ಕೆ ಒಪ್ಪದ ರೈತರು ಹೋರಾಟ ನಡೆದೆ ಇರುತ್ತದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ  ಸಚಿವರಿಗೆ ಒತ್ತಾಯಿಸಿದರು.

Morbi bridge collapse: ಗುಜರಾತ್‌ ಸೇತುವೆ ಕುಸಿತ; 141 ಜನ ಸಾವು, ಸ್ಥಳಕ್ಕೆ ಪ್ರಧಾನಿ ಭೇಟಿ ಸಾಧ್ಯತೆ!

ಧರಣಿ ನಿರತ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಯ ಸುತ್ತಲೂ ಉರುಳು ಸೇವೆ ನಡೆಸಿದರು.

ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ರಾಜ್ಯ ಸರ್ಕಾರ ರೈತ ಚಳುವಳಿಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು.

ದೀಪಾವಳಿ ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳಿದ ಮುಖ್ಯಮಂತ್ರಿಗಳು ಇಂದು ರೈತರನ್ನು ರಸ್ತೆಯಲ್ಲಿ ಮಲಗಿಸಿ ಕಹಿ ಅನುಭವ ನೀಡುತ್ತಿದ್ದಾರೆ.

ನಾಳೆಯಿಂದ ವಿಭಿನ್ನ ವಿಶಿಷ್ಟ ಚಳುವಳಿಯ ಮೂಲಕ ರೈತ ವಿರೋಧಿ ನೀತಿಯ ಬಗ್ಗೆ ರಾಜ್ಯದ ರೈತರಿಗೆ ಕರೆ ನಿಡಲಾಗುವುದು ಎಂದರು ಎಚ್ಚರಿಕೆ ನೀಡಿದರು.

“ಕ್ಯಾಡ್ಬರಿ ಜಾಹೀರಾತಿನಲ್ಲಿ ಮೋದಿಗೆ ಅವಮಾನ”: ಟ್ವಿಟರ್‌ನಲ್ಲಿ ಬಾಯ್ಕಾಟ್‌ ಕ್ಯಾಡ್ಬರಿ ಟ್ರೆಂಡ್‌!

ನಾವು ಸರ್ಕಾರದ ಭಿಕ್ಷೆ ಕೇಳುತ್ತಿಲ್ಲ, ನಮ್ಮ ಶ್ರಮಕ್ಕೆ ತಕ್ಕನಾದ ಬೆಲೆ ನಿಗದಿಯಾಗಲಿ ಎಂದು ಕಾನೂನಿ ಅಡಿಯಲ್ಲಿ ನ್ಯಾಯ ಕೇಳುತ್ತಿದ್ದೇವೆ.

ಕೆಲವರು ರಾಜಕೀಯ ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರನ್ನು ಮೆಚ್ಚಿಸಲು ರೈತರ ಮಕ್ಕಳಾಗಿದ್ದರೂ ಅದನ್ನು ಮರೆತು ರೈತರಿಗೆ ದ್ರೋಹ ಬಗೆಯುವ ಹೇಳಿಕೆ ಕೊಡುತ್ತಿದ್ದಾರೆ.

ಇದು ನಿಲ್ಲಬೇಕು, 40 ವರ್ಷ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈಗಲೂ ವಿರೋಧ ಪಕ್ಷದ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂದು ಕಟುವಾಗಿ ಟಿಕಿಸಿದರು.

RBI ನಿಂದ ನವೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ; ಒಟ್ಟು 20 ದಿನ ಬಂದ್‌ ಇರಲಿವೆ ಈ ಬ್ಯಾಂಕ್‌ಗಳು!

ಚಳುವಳಿ ಜಾಗಕ್ಕೆ ಬೆಳಗಾವಿ ಬಾಗಲಕೋಟೆ ಗದಗ್ ಜಿಲ್ಲೆಯ ರೈತ ಮುಖಂಡರು ಭಾಗವಹಿಸಿ ಬೆಂಬಲ ಕೊಟ್ಟರು

ರೈತ ಮುಖಂಡರಾದ ನಿಜಗುಣ ಕೆಲಗೆರಿ, ಉಳುವಪ್ಪ ಬೆಳಗೇರ ಕುಮಾರ್ ಬುಬಾಟಿ,ವಾಸು ಡಾಕಪ್ಪನವರ್,

ಬಸವನಗೌಡ ಸಿದ್ದನಗೌಡ, ಎಂ ವಿ ಗಾಡಿ, ಶಂಕರ ಕಾಜಗಾರ್, ಚುನಪ್ಪಾ ಪೂಜಾರಿ, ಆಶೂಕ ಮೆಟಿ, ರಾಮಪ್ಪ ನೆಲ್ಲರವಿ ಮಂಜುಳಗೌಡ ಸಾತುರಿಗೂಡೆಮನಿ ಇನ್ನೂ ಮುಂತಾದ 1000 ಕೂ ಹೆಚ್ಚು ರೈತರು ಉರುಳುಸೇವೆ ಮಾಡಿದರು  

Published On: 01 November 2022, 03:38 PM English Summary: Indefinite sit-in by State Sugarcane Growers Association for 2nd day

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.