1. ಸುದ್ದಿಗಳು

ರೈತರ ಸಮಸ್ಯೆಗಳನ್ನು ಸಮಾಜದ ಮುಂದೆ ತೆರದಿಡುವ ಕಾರ್ಯ ಶ್ಲಾಘನೀಯ!

Kalmesh T
Kalmesh T
The work of bringing farmers' problems before the society is commendable!

ಪ್ರಸ್ತುತ ಎಲ್ಲೆಡೆ ರೈತರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಅವುಗಳನ್ನು ಎತ್ತಿ ಹಿಡಿಯುವ, ಸಮಾಜದ ಎದುರಿಗೆ ತೋರಿಸುವ ಕೃಷಿ ಜಾಗರಣದ ಕಾರ್ಯ ಶ್ಲಾಘನೀಯವಾದದ್ದು ಎಂದು ಐಎಸಿಆರ್ ನ ಪ್ರೊಜೆಕ್ಟ್ ನಿರ್ದೇಶಕರಾದ ಡಾ. ಎಸ್.ಕೆ. ಮಲ್ಹೋತ್ರಾ ಹೇಳಿದರು.

Morbi bridge collapse: ಗುಜರಾತ್‌ ಸೇತುವೆ ಕುಸಿತ; 141 ಜನ ಸಾವು, ಸ್ಥಳಕ್ಕೆ ಪ್ರಧಾನಿ ಭೇಟಿ ಸಾಧ್ಯತೆ!

ನವ ದೆಹಲಿಯಲ್ಲಿರುವ ಕೃಷಿ ಜಾಗರಣದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಐಎಸಿಆರ್ (ICAR) ನ ಪ್ರೊಜೆಕ್ಟ್ ನಿರ್ದೇಶಕರಾದ ಡಾ. ಎಸ್.ಕೆ. ಮಲ್ಹೋತ್ರಾ ಅವರು ತಂಡದೊಂದಿಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು.

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳು ಸಮಾಜದ ಬಹುಮುಖ್ಯವಾದ ಅಂಗಗಳಾಗಿದ್ದು, ಅವುಗಳ ಹಿತಕ್ಕಾಗಿ ನಾವೆಲ್ಲ ಕೆಲಸ ಮಾಡಬೇಕು ಎಂದು ಹೇಳಿದರು.

ಸಾಧ್ಯವಾದಷ್ಟು ಕೃಷಿ ಸಂಬಂಧಿ ಮಾಹಿತಿಗಳನ್ನು ಒಂದೆಡೆ ಸೇರಿಸಿ ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯವಾಗಬೇಕು. ಅದು ಇಂದಿನ ಬಹಳ ತುರ್ತಿನ ಕಾರ್ಯವೂ ಹೌದು.

ಇಂತಹ ಕೆಲಸವನ್ನು ಮಾಡುತ್ತಿರುವ ಕೃಷಿ ಜಾಗರಣ ಮಾಧ್ಯಮದ ಕಾರ್ಯ  ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಹೇಳಿದರು‌.

“ಕ್ಯಾಡ್ಬರಿ ಜಾಹೀರಾತಿನಲ್ಲಿ ಮೋದಿಗೆ ಅವಮಾನ”: ಟ್ವಿಟರ್‌ನಲ್ಲಿ ಬಾಯ್ಕಾಟ್‌ ಕ್ಯಾಡ್ಬರಿ ಟ್ರೆಂಡ್‌!

ಬೇರೆಲ್ಲ ಮಾಧ್ಯಮಗಳಿಗಿಂತ ವಿಭಿನ್ನವಾದ ಮಾಧ್ಯಮವಾದ ಕೃಷಿ ಜಾಗರಣ ರೈತರು ಮತ್ತು ಕೃಷಿ ಕ್ಷೇತ್ರದ ಏಳ್ಗೆಗಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯವಾಗಿದೆ.

ಮುಂದೆಯೂ ಕೂಡ ಇದೆ ರೀತಿ ಕಾರ್ಯವನ್ನು ಮಾಡುವ ಮೂಲಕ ರೈತ ಸಹೋದರರ ಹಿತಕಾಯುವ ಕೆಲಸ ಮಾಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೇ ಪ್ರಸ್ತುತ ರೈತರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಇವನ್ನೆಲ್ಲ ತಿಳಿದುಕೊಳ್ಳಲು ಮಾಧ್ಯಮಗಳು ರೈತರ ಬಳಿ ತೆರಳಬೇಕು‌.

RBI ನಿಂದ ನವೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ; ಒಟ್ಟು 20 ದಿನ ಬಂದ್‌ ಇರಲಿವೆ ಈ ಬ್ಯಾಂಕ್‌ಗಳು!

ಅವರ ಸಮಸ್ಯೆಗಳ ಕುರಿತು ಅವರನ್ನೆ ಮಾತನಾಡಿಸಿ ಮಾಹಿತಿ ಕಲೆ ಹಾಕಬೇಕು.

ಅದಕ್ಕೆ ಸೂಕ್ತವಾದ ಪರಿಹಾರ ಏನು ಎನ್ನುವುದನ್ನು ತಜ್ಞರನ್ನು ಸಂಪರ್ಕಿಸಿ ರೈತರಿಗೆ ಸೂಕ್ತ ಮಾಹಿತಿಯನ್ನು ನೀಡುವ ಕಾರ್ಯ ಮಾಡಬೇಕು ಎಂದರು.

ಜನವರಿ ತಿಂಗಳ ಮ್ಯಾಗಜಿನ್‌ ನಿರ್ವಹಣೆ!

ಮುಂಬರುವ ಜನವರಿಯಲ್ಲಿ ಸಂಪೂರ್ಣವಾಗಿ ಮಿಲೆಟ್ಸ್‌ಗಳ ಬಗ್ಗೆ ಮ್ಯಾಗಜಿನ್‌ ತರುವ ಯೋಜನೆಯನ್ನು ಕೃಷಿ ಜಾಗರಣ ಮಾಡುತ್ತಿದ್ದು, ಇದರ ಸಂಪೂರ್ಣ ನಿರ್ವಹಣೆಯನ್ನು ಡಾ. ಎಸ್.ಕೆ. ಮಲ್ಹೋತ್ರಾ ಅವರು ನಿರ್ವಹಿಸಲಿದ್ದಾರೆ.

ಕೃಷಿ ಮಾದರಿ ಕೈಪಿಡಿ ಹೊರತರಲು ಸಲಹೆ

ಕೃಷಿ ಹಾಗೂ ರೈತರ ಹಿತದೃಷ್ಟಿಯಿಂದ ವಿವಿಧ ರೀತಿಯ ಕೈಪಿಡಿಗಳನ್ನು, ಪುಸ್ತಕ, ನಿಯತಕಾಲಿಕೆಗಳನ್ನು ಹೊರತರಬೇಕು

ಇವುಗಳಲ್ಲಿ ಜಾನುವಾರು ಸಾಕಣೆ, ಜಾನುವಾರು ನಿರ್ವಹಣೆ, ತೋಟಗಾರಿಕೆ, ಸುಲಭ ಕೃಷಿ, ಸಾವಯವ ಕೃಷಿ, ಕೈತೋಟಗಳು, ಗೊಬ್ಬರ ತಯಾರಿಸುವಿಕೆ ಹೀಗೆ ಹತ್ತು ಹಲವಾರು ಉಪಯುಕ್ತ ಮಾಹಿತಿಗಳಿರುವ ಕೈಪಿಡಿಯನ್ನು ಮಾಧ್ಯಮಗಳು, ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಹಾಗೂ ಜನರು ಸೇರಿ ಹೊರತರುವ ಪ್ರಯತ್ನ ಮಾಡಬೇಕು

Published On: 01 November 2022, 03:15 PM English Summary: The work of bringing farmers' problems before the society is commendable!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.