Income Tax Returns : 2023-24 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ತಪ್ಪದೇ ಸಲ್ಲಿಸುವಂತೆ ಇಲಾಖೆ ತಿಳಿಸಿದೆ.
2023-24 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಈ ಬಾರಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಯಾವುದೇ ಪ್ರಮುಖ ದೋಷಗಳು ಕಂಡುಬಂದಿಲ್ಲ. ಈವರೆಗೆ ಸಲ್ಲಿಸಲಾದ ಐಟಿಆರ್‌ಗಳಲ್ಲಿ ಸುಮಾರು 4 ಕೋಟಿ 46 ಲಕ್ಷ ಐಟಿಆರ್‌ಗಳನ್ನು ಇ-ಪರಿಶೀಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ನಿನ್ನೆ ಮಧ್ಯಾಹ್ನದವರೆಗೆ ಒಟ್ಟು 5 ಕೋಟಿ 08 ಲಕ್ಷ ಐಟಿಆರ್‌ಗಳು ಸಲ್ಲಿಕೆಯಾಗಿವೆ.
ಕಳೆದ ವರ್ಷ ಜುಲೈ ೩೧ರವರೆಗೆ ಸಲ್ಲಿಕೆಯಾದ ಐಟಿಆರ್ ದಾಖಲೆಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಭಾರಿ ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಒಂದೇ ದಿನದಲ್ಲಿ 26 ಲಕ್ಷ ಜನ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಒಂದು ವೇಳೆ ಸಂಜೆಯೊಳಗೆ ಐಟಿಆರ್ ಸಲ್ಲಿಸಿದವರಿಗೆ ದಂಡ ಶುಲ್ಕದೊಂದಿಗೆ ಡಿಸೆಂಬರ್ 31ರ ವರೆಗೆ ಅವಕಾಶ ಇರುತ್ತದೆ.
ಕಳೆದ ವಾರ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ 2022-23 ನೇ ಸಾಲಿನ ಆದಾಯ ತೆರಿಗೆ ಪಾವತಿ ಕುರಿತ ಅಂಕಿಅಂಶಗಳನ್ನು ಸದನದ ಮುಂದೆ ಇಡಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ (Income Tax Returns) ಕುರಿತು ಈ ಆರ್ಥಿಕ ವರ್ಷದಲ್ಲಿ ಎಷ್ಟು ಭಾರತೀಯರು ಆದಾಯ ತೆರಿಗೆ ಫೈಲ್ ಮಾಡಿದವರು ಮತ್ತು ಅವರಲ್ಲಿ ತೆರಿಗೆ ಪಾವತಿಸಿರುವವರ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶಗಳನ್ನು ತಿಳಿಸಿದ್ದರು.
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನವಾಗಿದೆ. ನೀವು ಇನ್ನೂ ಐಟಿ ರಿಟರ್ನ್ ಫೈಲ್ ಮಾಡದೆ ಇದ್ದರೆ ಕೂಡಲೇ ಫೈಲ್ ಮಾಡಬೇಕು.
ಇಲ್ಲದಿದ್ದರೆ, ಜುಲೈ 31ರ ನಂತರ ಐಟಿಆರ್ ಫೈಲ್ (ITR File) ಮಾಡಲು ದಂಡ ಪಾವತಿಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯು 1000 ರೂಪಾಯಿಯಿಂದ 5000 ರೂಪಾಯಿವರೆಗೆ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.
ಇದೆ ಸಮಯದಲ್ಲಿ, ಆದಾಯ ತೆರಿಗೆ ಇಲಾಖೆಯು ಭಾನುವಾರ ಸಂಜೆ 6.30 ರವರೆಗೆ 2022-23 ರ ಆರ್ಥಿಕ ವರ್ಷಕ್ಕೆ 6 ಕೋಟಿಗೂ ಹೆಚ್ಚು ಜನರು ಐಟಿಆರ್ ಸಲ್ಲಿಸಿದ್ದಾರೆ ಎಂದು ಮಾಹಿತಿಯನ್ನು ಕೂಡ ನೀಡಿದೆ.
Share your comments