ತಂತ್ರಜ್ಞಾನ ಕ್ಷೇತ್ರದಲ್ಲಿ ಲೈಫೈ ತಂತ್ರಜ್ಞಾನವು ಮಹತ್ವದ್ದಾಗಿದೆ. ಈ ಕ್ಷೇತ್ರzಲ್ಲಿ ದಿನೇ ದಿನೇ ಆಧುನಿಕ ಆವಿಷ್ಕಾರಗಳಾಗುತ್ತಿರುತ್ತವೆ. ಲೈಫೈ ಎಂದರೆ ಲೈಟ್ ಪಿಡೆಲಿಟಿ ಎಂದು ಅರ್ಥ. ಬ್ರಿಟಿಷ್ ವಿಜ್ಞಾನಿ ಹೆರಾಲ್ಡ್ ಹಾಸ್ ಈ ಶಬ್ದವನ್ನು ಮೊಟ್ಟ ಮೊದಲ ಬಾರಿಗೆ ಉಪಯೋಗಿಸಿದನು.
ಈ ತಂತ್ರಜ್ಞಾನದಲ್ಲಿ ಮಾಹಿತಿಯನ್ನು ಕಳುಹಿಸಲು ರೇಡಿಯೋ ಕಿರಣಗಳನ್ನು ಬಳಸಲಾಗುತ್ತದೆ. ಸತತ ನಾಲ್ಕು ವರ್ಷಗಳ ಸಂಶೋಧನೆಯ ನಂತರ ಲೈಫೈನ ಕಂಪನಿಯನ್ನು ಹೆರಾಲ್ಡ್ ಸ್ಥಾಪಿಸುವಲ್ಲಿ ಸಫಲವಾದರು. ಲೈಫೈ ಹಾಗೂ ವೈಫೈ ಒಂದೇ ತೆರನಾಗಿದ್ದು ಡಾಟಾ ಪ್ರಸಾರ ಮಾಡುವ ವಿಧಾನ ಬದಲಾಗಿದೆ. ವೈಫೈ ರೇಡಿಯೊ ತರಂಗಳನ್ನು ಬಳಸಿದರೆ ಲೈಫೈ ಬೆಳಕನ್ನು ಉಪಯೋಗಿಸುತ್ತದೆ. ಲೈಫೈಯು ಕಣ್ಣಿಗೆ ಕಾಣದಂತಹ ಬೆಳಕಿನ ಮಾಧ್ಯಮ. ಇದರಲ್ಲಿ ಬೆಳಕನ್ನು ಫೋಟೊ ಡಿಟೆಕ್ಟರ್ ಮುಖಾಂತರ ವಿದ್ಯುತ್ತನ್ನು ಸತತವಾಗಿ ಸಂಗ್ರಹಿಸಿ ಡಾಟಾವನ್ನು ಬಹುವೇಗವಾಗಿ ಮನುಷ್ಯನ ಕಣ್ಣಿಗೆ ಕಾಣದಂತೆ ಸಂಪರ್ಕಿಸಬಹುದು. ಲೆಡ್ ಬಲ್ಬ್‍ಗಳಲ್ಲಿ ಆಗುವ ಚಿಕ್ಕ ಬದಲಾವಣೆಗಳನ್ನು ವಿದ್ಯುತ್ ಕಿರಣಗಳಿಗೆ ವಾಹಕವು ಬದಲಾಯಿಸುತ್ತದೆ. ಸಂಕೇತವು ನಂತರ ಬೈನರಿ ಡಾಟಾಗೆ ಪರಿವರ್ತನೆಗೊಂಡು ವೆÀಬ್, ವಿಡಿಯೊ ಹಾಗೂ ಆಡಿಯೊಗಳಿಗೆ ಪ್ರಸಾರವಾಗುತ್ತದೆ.
ಲೈಫೈ |
ವೈಫೈ |
ಚಿಕ್ಕ ಶ್ರೇಣಿಯದಾಗಿರವದರಿಂದ ಇದು ಸುರಕ್ಷಿತ ಸಂಪರ್ಕವಾಗಿದೆ ಮತ್ತು ವೇಗವಾಗಿದೆ |
ಇದು ವಿಶಾಲವಾದ ಜಾಲತಾಣವಾಗಿದ್ದರೂ ವೇಗ ಕಡಿಮೆಯಾಗಿದೆ |
ಇದರ ತರಂಗಗಳು ಗೋಡೆಯಿಂದ ಹೊರಸೂಸುವದಿಲ್ಲ. ಅದಕ್ಕಾಗಿ ಮನೆಯಲ್ಲಿ ಸಾಮಥ್ರ್ಯವುಳ್ಳ ಲೆಡ್ ಬಲ್ಬಗಳನ್ನು ಮನೆಯ ತುಂಬಾ ಇಡಬೇಗುತ್ತದೆ. |
ವೈಫೈ ತರಂಗಗಳು ಎಲ್ಲಾ ಗೋಡೆಯಿಂದ ಸುಲಭವಾಗಿ ಹೊರಸೂಸುವದು ಹಾಗೂ ಸಂಪರ್ಕವನ್ನು ವೇಗವಾಗಿ ಪಡೆಯಬಹುದು
|
ಲೈಫೈ ಇಂಟರನೆಟ್ ಮೇಲೆ ಅಗಾಧ ಪರಿಣಾಮ ಬೀರಿ ಡಾಟಾವನ್ನು ವೇಗÀವಾಗಿ ವರ್ಗಾಯಿಸುತ್ತದೆ |
ಡಾಟಾವನ್ನು ನಿಧಾನವಾಗಿ ವರ್ಗಾಯಿಸುತ್ತದೆ |
ಲೈಫೈಯನ್ನು ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬಳಸಲು ಪ್ರಯತ್ನ ನಡೆಸಲಾಗುತ್ತಿದೆ |
ವೈಫೈ ಎಲೆಕ್ಟ್ರಾನಿಕ್ ಹಾಗೂ ಬ್ಯಾಟರಿ ಆದಾರಿತ ಸಾಮಾನುಗಳಲ್ಲಿ ಸ್ಮಾರ್ಟ್‍ಫೋನ್ ಹಾಗೂ ಸ್ಮಾರ್ಟ್‍ವಾಚ್ ಹಾಗೂ ಸೆನ್ಸರ್‍ಗಳಲ್ಲಿ ಕೂಡ ಬಳಸಲಾಗುತ್ತದೆ |
ಲೈಫೈನ ಭವಿಷ್ಯ
ನವೆಂಬರ್ 2014ನೆಯ ಇಸವಿಯಲ್ಲಿ ಲೈಫೈ ಲುಸಿಬೆಲ್ ಕಂಪನಿಯೊಂದಿಗೆ ಜೊತೆಗೂಡಿ ಸಾಕಷ್ಟು ವಸ್ತುಗಳನ್ನು 2015ನೆಯ ಇಸವಿಯ ಕೊನೆಗೆ ಉತ್ಪಾದಿಸಿದೆ. ಇದು ಪರಿಪೂರ್ಣವಾಗಿ ಈಗಾಗಲೇ ಎರಡು ವಸ್ತುಗಳನ್ನು ಉತ್ಪಾದಿಸಿದೆ. ಮೊದಲನೆಯದಾಗಿ ಲೈಫ್ಲೇಮ್ ಸೀಲಿಂಗ್ ಯುನಿಟ್ ಲೆಡ್ ಬೆಳಕನ್ನು ಸ್ಥಿರಸ್ಥಿತಿಗೆ ಹೊಂದಿಸುತ್ತದೆ. ಎರಡನೆಯದು ಲೈಫ್ಲೇಮ್ ಡೆಸ್ಕಟಾಪ್ ಇದು ಯುಎಸ್‍ಬಿ ಮುಖಾಂತರ ಬೆಳಕು ಹಾಗೂ ಸಂಪರ್ಕ ಕಲ್ಪಿಸುವುದರಲ್ಲಿ ಸಹಕಾರಿ. ಇದನ್ನು ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಇದು ವಿಡಿಯೊ, ಆಡಿಯೊ ಹಾಗೂ ಇಂಟರನೆಟ್ ಸೌಲಭ್ಯವನ್ನು ಕಲ್ಪಿಸುತ್ತದೆ. ಮುಂಬರುವ ಐಫೋನ್‍ಗಳಲ್ಲಿ ಲೈಫೈ ಅಳವಡಿಸಲಾಗುವದು. ಜನಸಮೂಹ ಈ ಹೊಸ ತಂತ್ರಜ್ಞಾನದ ಬಳಕೆಯನ್ನು ಜೀವನದಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.
ಲೇಖಕರು: ಶಗುಪ್ತಾ ಅ. ಶೇಖ ಎಂ.ಬಿ.ಎ(ಕೃಷಿವ್ಯವಹಾರ)
Share your comments