1. ಸುದ್ದಿಗಳು

ಹೈನುಗಾರಿಕೆ, ಎರೆಹುಳುಗೊಬ್ಬರ ತಯಾರಿಕೆಗೆ ಉಚಿತ ತರಬೇತಿ

ನೆಲಮಂಗಲ ತಾಲೂಕು ಅರಿಶಿನಕುಂಟೆಯಲ್ಲಿರುವ ರುಡ್ ಸೆಟ್ ಸಂಸ್ಥೆಯು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಯುವಕ-ಯುವತಿಯರಿಗಾಗಿ ಸೆ. 28 ರಿಂದ 10 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ ಹಮ್ಮಿಕೊಂಡಿದೆ.

ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿ ಪಡೆಯಲಿಚ್ಚಿಸುವ ಯುವಕ ಯುವತಿಯರಿಗೆ ಉಚಿತವಾಗಿ ವಸತಿಯುತ 10 ದಿನಗಳ ಹೈನುಗಾರಿಕೆ ಹಾಗೂ  ಎರೆಹುಳುಗೊಬ್ಬರ ತಯಾರಿಕಾ ತರಬೇತಿಯನ್ನು ಹಮ್ಮಿಕೊಂಡಿದೆ.

ಕನ್ನಡ ಓದಲು ಬರೆಯಲು ಬಲ್ಲ 18 ರಿಂದ 45 ವರ್ಷ ವಯೋಮಿತಿಯ ಅಭ್ಯರ್ಥಿಗಳು ಸೆ. 28 ರಂದು ನೇರವಾಗಿ ತರಬೇತಿಗೆ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ 080-27728166 ಗೆ ಸಂಪರ್ಕಿಸಲು ಕೋರಲಾಗಿದೆ.

Published On: 27 September 2020, 10:24 AM English Summary: free animal husbandry training

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.