1. ಸುದ್ದಿಗಳು

ರಾಜ್ಯದಲ್ಲಿ ಹೊಸ ಏರೋಸ್ಪೇಸ್‌ ನೀತಿ ಜಾರಿ: 45 ಸಾವಿರಕ್ಕೂ ಹೆಚ್ಚು ಯುವಕರಿಗೆ ವೈಮಾನಿಕ ಕ್ಷೇತ್ರದಲ್ಲಿ ಮಹಾಸಾಧನೆ!

Hitesh
Hitesh
Implementation of new aerospace policy in the state: A great achievement for more than 45 thousand youth in the field of aviation!

ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ.

Aero india 2023 ಬೆಂಗಳೂರು ಏರೋ ಇಂಡಿಯಾ ಶೋ: ಹೊಸ ದಾಖಲೆ ಸೃಷ್ಟಿ, ನೂರು ರಾಷ್ಟ್ರಗಳು, 700ಕ್ಕೂ ಹೆಚ್ಚು ಪ್ರದರ್ಶನ!

ಈ ಬಾರಿಯ ಏರೋ ಶೋ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏರೋ ಶೋಗೆ ಚಾಲನೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಜಾರಿಗೆ ತಂದು ಸುಮಾರು 45 ಸಾವಿರಕ್ಕೂ ಹೆಚ್ಚು ಯುವಜನರನ್ನು ವೈಮಾನಿಕ ಕ್ಷೇತ್ರದಲ್ಲಿ ಮಹಾಸಾಧನೆಗೆ ಸಿದ್ಧಪಡಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ  ತಿಳಿಸಿದರು. 

ಸಂಸದೆ ಜಯಾಬಚ್ಚನ್‌ ಅವರಿಂದ ರಾಜ್ಯಸಭಾಪತಿ ಜಗದೀಪ್‌ ಧನಕರ್‌ ಅವರಿಗೆ ಅಗೌರವ! ಅಷ್ಟಕ್ಕೂ ಅಲ್ಲಿ ನಡೆದ್ದೇನು ?

ಯಲಹಂಕದಲ್ಲಿ ಆಯೋಜಿಸಲಾಗಿರುವ ಏರೋ ಇಂಡಿಯಾ-2023 ಏರ್‌ ಶೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 14ನೇ ಬಾರಿಗೆ ಏರ್‌ ಶೋ ನಡೆಸಲು ರಾಜ್ಯಕ್ಕೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವೆರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತದ ರಕ್ಷಣೆ ಸೇರಿದಂತೆ ಎಲ್ಲ ವಲಯಗಳಲ್ಲಿ ಜಗತ್ತಿನ ಅತಿ ದೊಡ್ಡ ಶಕ್ತಿಯಾಗಿ ರೂಪಿಸುವ ನಿಮ್ಮ ಮಹತ್ವಾಕಾಂಕ್ಷೆಗೆ ಕರ್ನಾಟಕ ಬೆಂಬಲವಾಗಿ ನಿಲ್ಲಲಿದೆ.

ಕರ್ನಾಟಕದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಘೋಷಿಸಲಾಗುತ್ತಿದ್ದು, ಅದರಲ್ಲಿ ಯುವಜನರಿಗೆ ವೈಮಾನಿಕ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಶಕ್ತಿ ತುಂಬಲಾಗುವುದು ಎಂದರು.

Gold Price ವಾರಾಂತ್ಯದಲ್ಲಿ ಕುಸಿತ ಕಂಡ ಚಿನ್ನದ ದರ, ಎಷ್ಟಿದೆ ಚಿನ್ನದ ದರ ? ಗೂಗಲ್‌ ಪೇ ಮೂಲಕ ಚಿನ್ನ ಖರೀದಿ ಇದೀಗ ಸುಲಭ! 

ರಾಜ್ಯದಲ್ಲಿ ನಡೆಯುತ್ತಿರುವ ಏರೋ ಶೋ ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಏರ್‌ ಶೋ ಆಗಿದೆ. ರಕ್ಷಣಾ ವಲಯ ಮತ್ತು ಇಂಥ ಏರ್‌ ಶೋ ನಡೆಸುವಲ್ಲಿ ಕರ್ನಾಟಕ ಮತ್ತು ಭಾರತದ ಶಕ್ತಿ  ಜಗತ್ತಿಗೆ ಪರಿಚಯಿಸಿದ್ದೇವೆ.

ಕೊರೊನಾ ಕಾಲದಲ್ಲಿಯೂ  ಪ್ಯಾರಿಸ್‌ ಏರ್‌ಶೋವನ್ನು ರದ್ದುಪಡಿಸಿದ ಕಾಲದಲ್ಲೂ ನಾವು ಯಶಸ್ವಿಯಾಗಿ ನಡೆಸಿದ ಹೆಮ್ಮೆ ನಮ್ಮದು ಎಂದಿದ್ದಾರೆ.  

ಏರೊ ಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940ರಲ್ಲಿ ಎಚ್ ಎ ಎಲ್ ಸ್ಥಾಪನೆಯಾಗಿದ್ದು, ಎನ್ ಎ ಎಲ್ , ಬಿಎಚ್ ಇ ಎಲ್, ಡಿಆರ್‌ಡಿಒ ಎಲ್ಲವೂ ಆರ್ ಆಂಡ್ ಡಿ ಸಾಮರ್ಥ್ಯವನ್ನು ಹೆಚ್ಚಿಸಿವೆ.

1960ರ ದಶಕದಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. 1960ರಲ್ಲಿ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು.

ಶೇ. 67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ ಎಂದು ಹೇಳಿದರು.

Post Office Insurance ಪೋಸ್ಟ್ ಆಫೀಸ್ ಇನ್ಶೂರೆನ್ಸ್; ಕಡಿಮೆ ಪ್ರೀಮಿಯಂನಲ್ಲಿ 10 ಲಕ್ಷದವರೆಗೆ ಲಾಭ! 

Implementation of new aerospace policy in the state: A great achievement for more than 45 thousand youth in the field of aviation!

4ನೇ ಆವೃತ್ತಿಯ ಏರೋ ಇಂಡಿಯಾ ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಹೇಳಿದರು.

ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ ಹಾಗೂ ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ.

ಏರೋ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತ. ಇದರ ಆಯೋಜಿಸುವುದು ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ.

ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿ ಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು ಎಂದರು.

ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೊ ನಡೆಸಲು ಅತ್ಯಂತ ಸೂಕ್ತ ಸ್ಥಳ.

ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ ಎಂದರು.

1960 ರಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. ಪ್ರತಿ ದಶಕದಲ್ಲಿ ಏರೊ ಸ್ಪೇಸ್ ಅಭಿವೃದ್ಧಿಯಾಗಿದೆ.

ಸ್ಥಳ , ಸಾಮರ್ಥ್ಯ, ವೃದ್ಧಿಯಾಯಿತು. 1960 ಆರ್ಯಭಟ ಉಪಗ್ರಹ ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು.

ಶೇ 67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಿಂದ ಉತ್ಪಾದನೆಯಾಗುತ್ತದೆ ಎಂದರು.

ಕರ್ನಾಟಕ ಮತ್ತು ಬೆಂಗಳೂರು ಎರಡಕ್ಕೂ ಕಾರ್ಯಕ್ರಮವನ್ನು ಆಯೋಜಿಸುವುದು ಅಭ್ಯಾಸವಾಗಿದೆ.

ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ನಮ್ಮ ಪೂರ್ವಜರಿಗೆ ಧನ್ಯವಾದಗಳು ಎಂದು ಹೇಳಿದರು.

ಸಂಚಾರ ನಿಯಮ ಉಲ್ಲಂಘನೆ; ದಂಡ ರಿಯಾಯಿತಿ: ಅವಧಿ ವಿಸ್ತರಿಸಲು ಸಂಚಾರ ಪೊಲೀಸರಿಂದಲೇ ಮನವಿ!  

Implementation of new aerospace policy in the state: A great achievement for more than 45 thousand youth in the field of aviation!

ಏನಿದು ಏರೋ ಇಂಡಿಯಾ ಶೋ

ಏರೋ ಇಂಡಿಯಾ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ವೈಮಾನಿಕ ಪ್ರದರ್ಶನ.

ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತೀಯ ವಾಯು ಸೇನೆ, ಬಾಹ್ಯಾಕಾಶ ಇಲಾಖೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಹಯೋಗದೊಂದಿಗೆ ರಕ್ಷಣಾ ವಸ್ತುಪ್ರದರ್ಶನ ಸಂಸ್ಥೆ ಮತ್ತು ರಕ್ಷಣಾ ಸಚಿವಾಲಯಗಳು ಆಯೋಜಿಸುತ್ತವೆ. 

ಇದನ್ನೂ ಓದಿರಿ: Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ    

Published On: 13 February 2023, 12:38 PM English Summary: Implementation of new aerospace policy in the state: A great achievement for more than 45 thousand youth in the field of aviation!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.