1. ಸುದ್ದಿಗಳು

ಒಂದೆಡೆ ಭಾರೀ ಮಳೆ, ಇನ್ನೊಂದೆಡೆ ರಣಗುಡುವ ಬಿಸಿಲು! ತತ್ತರಿಸಲಿದೆಯೇ ಜನತೆ?

Kalmesh T
Kalmesh T
Heavy rain and heavy heatwave alert in Karnataka

Heavy rain and heavy heatwave alert in Karnataka: ರಾಜ್ಯದಲ್ಲಿ ಹವಮಾನ ವೈಪರಿತ್ಯಗಳ ನಡುವೆ ಇದೀಗ ಜನತೆ ಸಿಲುಕಿದೆ. ಸದ್ಯ ರಾಜ್ಯದ ಕೆಲವೆಡೆ ಮಳೆ ಮತ್ತು ಬಿಸಿಲು ಜನರನ್ನು ಕಂಗೆಡಿಸಿವೆ. ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.

ರಾಜ್ಯದ ವಿವಿದೆಡೆ ಮುಂದಿನ 5 ದಿನ ಮಳೆ (Rain in different parts of the state)

ಇಂದಿನಿಂದ ಕರ್ನಾಟಕದ ಹಲವೆಡೆ ಮಳೆಯ ಅಬ್ಬರ (Heavy rain in Karnataka) ಜೋರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ.

ಇದು ಒಂದೆಡೆ ಬಿಸಿಲಿಗೆ ಬೆಂದು ಬಸವಳಿದ ಜನತೆಗೆ ನೆಮ್ಮದಿ ನೀಡುವಂತಿದ್ದರು, ಜೋರಾದ ಮಳೆ ಬರುವ ಕಾರಣ ಜನರು ಮುಂಜಾಗೃತೆ ಕ್ರಮಗಳನ್ನು ವಹಿಸಿ ಸುರಕ್ಷತೆಯನ್ನು ಮಾಡಿಕೊಳ್ಳಬೇಕು.

ಇವತ್ತಿನಿಂದ ಬೆಂಗಳೂರು ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಕರಾವಳಿ ಭಾಗದಲ್ಲಿ ಒಣಹವೆ ಮುಂದುವರೆಯಲಿದೆ.

ಕೆಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದ 3 ದಿನಗಳಿಂದ ರಾಜ್ಯದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಈಗ ಮಳೆಯ ಪ್ರಮಾಣ ಹೆಚ್ಚಾಗಲಿದೆ.

ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಬೆಳಗಾವಿ, ಕೊಪ್ಪಳ, ಗದಗ ಭಾಗದಲ್ಲಿ ಮಳೆಯಾಗಲಿದ್ದು, ಮೋಡ ಮುಸುಕಿದ ವಾತಾವರಣ ಇರಲಿದೆ.

ದಕ್ಷಿಣ ಒಳನಾಡಿದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಮಳೆಯಾಗಲಿದೆ. ಕರಾವಳಿ ಮತ್ತು ದಾವಣಗೆರೆ ಭಾಗದಲ್ಲಿ ಒಣಹವೆ ಇರಲಿದೆ.

Rain: ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಹೆಚ್ಚಾಗಲಿರುವ ಬಿಸಿಲಿನ ಶಾಖದ ಅಲೆ! (IMD issues heatwave alert in the state)

ಮುಂಬರುವ ದಿನದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ತಾಪಮಾನವು ಸುಮಾರು 40 ° C ಗಿಂತ ಹೆಚ್ಚಾಗಲಿದೆ.

ಹವಾಮಾನ ಶಾಸ್ತ್ರಜ್ಞರ ಪ್ರಕಾರ ಕರ್ನಾಟಕವು ತನ್ನ ಗರಿಷ್ಠ ಬೇಸಿಗೆಯ ದಿನಗಳನ್ನು ಸಮೀಪಿಸುತ್ತಿರುವಾಗ ಮುಂದಿನ ಎರಡು ವಾರಗಳಲ್ಲಿ ಗರಿಷ್ಠ ತಾಪಮಾನವು ಸರಾಸರಿ ವ್ಯಾಪ್ತಿಯಿಂದ ಮೂರು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

Heat wave: ಸಾಂದರ್ಭಿಕ ಚಿತ್ರ

ಕರಾವಳಿ ಜಿಲ್ಲೆಗಳಲ್ಲಿ 37-39 ಮತ್ತು ಉತ್ತರ ಕರ್ನಾಟಕದಲ್ಲಿ 39-41 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ  (Temperature will increase in the state) ಎಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇದಲ್ಲದೆ, ಹೆಚ್ಚಿನ ಮಟ್ಟದ ಆರ್ದ್ರತೆಯು ಕರಾವಳಿ ಕರ್ನಾಟಕದಲ್ಲಿ ಹೆಚ್ಚು ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಊಹಿಸಲಾಗಿದೆ.

ಈಗಾಗಲೇ ತೀವ್ರ "ಶಾಖದ ಅಲೆ"ಯಿಂದ ಬಳಲುತ್ತಿರುವ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ 38-41 ಡಿಗ್ರಿ ಸೆಲ್ಸಿಯಸ್‌ನಷ್ಟು (High temperature of 38-41 degrees Celsius) ಹೆಚ್ಚಿನ ತಾಪಮಾನ ಕಂಡುಬರುತ್ತಿದೆ.

Heat wave : ಸಾಂದರ್ಭಿಕ ಚಿತ್ರ

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಮೀರಿದೆ.

ಬೆಂಗಳೂರಿನಲ್ಲಿರುವ ಭಾರತೀಯ ಹವಾಮಾನ ಇಲಾಖೆಯ (IMD) ವಿಜ್ಞಾನಿಗಳು ಮೈಸೂರು ಮತ್ತು ದಕ್ಷಿಣ-ಮಧ್ಯ ಕರ್ನಾಟಕದ ಇತರ ಜಿಲ್ಲೆಗಳಂತಹ ಪ್ರದೇಶಗಳಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ಅನುಭವಿಸುತ್ತಿದ್ದಾರೆ.

PM Kisan 14th Installment: ಪಿ.ಎಂ ಕಿಸಾನ್ 14ನೇ ಕಂತು: ಈ ರೈತರಿಗೆ ಮಾತ್ರ 2000 ರೂ., ಕಾರಣವೇನು ?

Published On: 23 April 2023, 12:15 PM English Summary: Heavy rain and heavy heatwave alert in Karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.