1. ಸುದ್ದಿಗಳು

ನಿರಂತರ ಮಳೆಯಿಂದ ಅಡಿಕೆ ಬೆಳೆಗಾರರಿಗೆ ಕೊಳೆರೋಗ ಭೀತಿ

ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲನಾಡಿನ ಅಡಿಕೆ ಬೆಳೆಗಾರರಿಗೆ ಮತ್ತೇ ಸಂಕಷ್ಟ ಎದುರಾಗಿದೆ. ನಿರಂತರ ಮಳೆ ಅಡಿಕೆ ಬೆಳೆಗಾರರ ನಿದ್ದೆಕೆಡಿಸಿದೆ. ಅಡಿಕೆ ಬೆಳೆಗೆ  ತಗಲುತ್ತಿರುವ ಕೊಳೆ ರೋಗದಿಂದಾಗಿ ಅಡಿಕೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರು ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ವಿಪರೀತ ಮಳೆಯಿಂದ (heavy rain) ಔಷಧ ಸಿಂಪಡಣೆ ಮಾಡಲು ಸಮಸ್ಯೆಯಾಗಿರುವುದರಿಂದ ಕೊಳೆರೋಗ (disease ) ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈಗ ಅಡಿಕೆಗೆ ಉತ್ತಮ ಧಾರಣೆ ಇದ್ದರೂ, ಸಣ್ಣ ಹಿಡುವಳಿದಾರರಿಗೆ ಇರುವ ಅಲ್ಪ ಪ್ರಮಾಣದ ಅಡಿಕೆ ಬೆಳೆ ಕೊಳೆರೋಗಕ್ಕೆ ತುತ್ತಾದರೆ ಧಾರಣೆ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಲಿದೆ.

ಮಲೆನಾಡಿನ ಸಾಂಪ್ರದಾಯಕ ಬೆಳೆ ಅಡಿಕೆ.  ಮಲೆನಾಡಿನ ಅತಿ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 11 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ರೈತರ ಅವಿಭಾಜ್ಯ ಅಂಗವಾಗಿದೆ. ಆರೆ ಬಾಧಿ(affects) ಸುತ್ತಿರುವ ಕೊಳೆರೋಗಗಳಿಂದ ಅಡಿಕೆ ಬೆಳೆಗಾರರ ನೆಮ್ಮದಿ ಹಾಳಾಗಿದೆ. ಕನಿಷ್ಠ ಒಂದು ವಾರ ಬಿಸಿಲು ಬಿಟ್ಟರೆ ಕೊಳೆರೋಗದ ಭೀತಿಯಿಂದ ಪಾರಾಗಬಹುದು. ಆದರೆ ಎಡೆಬಿಡದೆ ಮಳೆ ಸುರಿಯುತ್ತಿದ್ದರಿಂದ ಕೊಳೆರೋಗ (areca nut) ನಿಯಂತ್ರಣಕ್ಕೆ ತರಲು ರೈತರು ಹರಸಾಹಸ ಪಡುತ್ತಿದ್ದಾರೆ.

ಸರ್ಕಾರ ನೆರವಿಗೆ ಬರಬೇಕು:

ತೋಟದಲ್ಲಿರುವ ಮರಗಳ ಸುಳಿಗಳು ಕೊಳೆತು ಹೋಗಿ ಮರಗಳು ಒಣಗಿ ಹೋಗುತ್ತಿವೆ. ರೋಗಗಳ ನಿಯಂತ್ರಿಸಲು ಮತ್ತು ತಡೆಗಟ್ಟಲು ಸರ್ಕಾರಗಳು, ಇಲಾಖೆಗಳು  ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.  ಕೂಡಲೇಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದೆ ಬರಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.

ರೋಗ ಲಕ್ಷಣ (disease symptoms):

ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ತೊಟ್ಟಿನಿಂದ ಕಳಚಿ ಉದುರಿಹೋಗುತ್ತವೆ.

ಹರಡುವಿಕೆ( Spread):

ಕೊಳೆರೋಗ ಫೈಟಾಪ್ರತ್‌ ಆರಕೆ ಎಂಬ ಶಿಲೀಂಧ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.

 ಅಡಿಕೆ ಕಾಯಿ ಈಗಷ್ಟೇ ಬೆಳೆಯುತ್ತಿದ್ದು, ರೋಗಕ್ಕೆ ತುತ್ತಾದರೆ ಅಲ್ಲೇ ಉದುರಿ ಬೀಳುತ್ತದೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಅದು ಇಡೀ ತೋಟಕ್ಕೆ ಆವರಿಸಿ ಹಾನಿ ಮಾಡುವ ಸಂಭವ ಇರುತ್ತದೆ. ಇದಕ್ಕಾಗಿ ಮಳೆ ಬಿಟ್ಟ ತಕ್ಷಣ ಅಡಿಕೆ ಗೊನೆಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದರೆ ಮಾತ್ರ ಈ ಕೊಳೆರೋಗದಿಂದ ಬೆಳೆಯನ್ನು ರಕ್ಷಿಸಬಹುದು ಎನ್ನುತ್ತಾರೆ ಕೃಷಿ ತಜ್ಞರು.

Published On: 21 August 2020, 02:09 PM English Summary: heavy rain affects areca nut

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.