ಕೋವಿಡ್-19 ಎರಡನೇ ಅಲೆಯ ಸಂಕಷ್ಟದ ಪ್ರಯುಕ್ತ ಪವರ್ ಲೂಮ್ ನೇಕಾರರಿಗೆ ರಾಜ್ಯ ಸರ್ಕಾರವು 2021-22 ನೇ ಸಾಲಿನಲ್ಲಿ ಪವರ್ ಲೂಮ್ ಘಟಕಗಳಲ್ಲಿನ ನೇಕಾರರು ಹಾಗೂ ಪ್ರೀ-ಲೂಮ್ ಚಟುವಟಿಗಳಾದ ಟ್ವಿಸ್ಟಿಂಗ್, ವೈಂಡಿಗ್, ಯಾರ್ನ ಡೈಯಿಂಗ್, ವಾರ್ಪಿಂಗ್, ಝರಿ ವೈಡಿಂಗ್, ಅಂಡ್ ವಾರ್ಪಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ 3000 ರೂ. ಗಳ ನೆರವನ್ನು ನೀಡುವ ಯೋಜನೆಯಡಿ ಅರ್ಹರಿಂದ ಅರ್ಜಿ ಸಲ್ಲಿಕೆ ಕೊನೆಯ ಅವಧಿಯನ್ನು 2021ರ ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯಡಿ ವಿದ್ಯುತ್ ಮಗ್ಗ ಘಟಕ ಮಾಲೀಕರು ಲೆಟರ್‌ಹೆಡ್, 20 ರೂಪಾಯಿಗಳ ಬಾಂಡ್ ಪೇಪರ್, ಸಾಮಾನ್ಯ ಕಾಗದದಲ್ಲಿ ನೇಕಾರರ/ಕೆಲಸಗಾರರ ವಿವರಗಳೊಂದಿಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಇದರೊಂದಿಗೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೂಲಿ ಕಾರ್ಮಿಕರು ಸ್ವಯಂ ಧೃಢೀಕರಿಸಿದ ಆಧಾರ್ ಕಾರ್ಡ ಪ್ರತಿಗಳು, ಆಧಾರ್ ಮಾಹಿತಿಯನ್ನು ಡಿ.ಬಿ.ಟಿ. ಗಾಗಿ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರಗಳು ವಿದ್ಯುತ್‌ಮಗ್ಗ ಘಟಕದ ಮುಂದೆ ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಗಳ ಗುಂಪಿನ ಫೋಟೋ, ಘಟಕವು ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್. ನಂಬರಿನ ವಿದ್ಯುತ್ ಬಿಲ್ ಘಟಕವು ಬಾಡಿಗೆ ಅಥವಾ ಲೀಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ಇದಕ್ಕೆ ಸಂಬAಧಿಸಿದ ದಾಖಲಾತಿಗಳನ್ನು ಒದಗಿಸಬೇಕು.
ಘಟಕದ ಉದ್ಯೋಗ ಆಧಾರ/ಪಿ.ಎಂ.ಟಿ/ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ನೇಕಾರರ/ಕೆಲಸಗಾರರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ (ಲಭ್ಯವಿದ್ದಲ್ಲಿ) ಸಲ್ಲಿಸಬೇಕು.
ಈಗಾಗಲೇ 2020-21 ನೇ ಸಾಲಿನಲ್ಲಿ ಸೇವಾ ಸಿಂಧು ತಂತ್ರಾAಶದಲ್ಲಿ ನೋಂದಾಯಿಸಲಾದ ಫಲಾನುಭವಿಗಳನ್ನು ಹೊರತುಪಡಿಸಿ ಹೊಸದಾಗಿ ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್‌ಮಗ್ಗ ಘಟಕ ಮಾಲೀಕರು ಲೆಟರ್ ಹೆಡ್/ರೂ 20 ರೂ. ಗಳ ಬಾಂಡ್ ಪೇಪರ್, ಸಾಮಾನ್ಯ ಕಾಗದದಲ್ಲಿ ನೇಕಾರರ, ಕೆಲಸಗಾರರ ವಿವರಗಳೊಂದಿಗೆ ಮುಚ್ಚಳಿಕೆ ಪತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ನಿಗದಿಪಡಿಸಿದ ಅವಧಿಯನ್ನು 2021ರ ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ. ಸದರಿ ಯೋಜನೆಗೆ ಒಳಪಡುವ ಫಲಾನುಭವಿಗಳು ದಾಖಲಾತಿಗಳೊಂದಿಗೆ ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ 2021ರ ಆಗಸ್ಟ್ 24 ರೊಳಗಾಗಿ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಿದ ನಂತರ ಇಲಾಖೆಯಿಂದ ಸೇವಾ ಸಿಂಧು ಆನ್‌ಲೈನ್ ವೆಬ್ ಸೈಟ್‌ನಲ್ಲಿ ನೊಂದಾಯಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಗುರು ಬಸವ ಕಟ್ಟಡ, ಮನೆ ನಂ. 2-910, ಓಕಳಿ ಕ್ಯಾಂಪ್, ಸೌಭಾಗ್ಯ ಕಲ್ಯಾಣ ಮಂಟಪ ಹತ್ತಿರ, ಸೇಡಂ ರಸ್ತೆ, ಕಲಬುರಗಿ-585105 ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-278629ಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಲಾಗಿದೆ.
Share your comments