1. ಸುದ್ದಿಗಳು

ವಸತಿ ರಹಿತರಿಗೆ ಸಿಹಿಸುದ್ದಿ: ವಸತಿ ಸಬ್ಸಿಡಿ 1.20 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಳ

Hitesh
Hitesh
Good news for the homeless: Housing subsidy hiked from Rs 1.20 lakh to Rs 3 lakh

ರಾಜ್ಯದಲ್ಲಿರುವ ವಸತಿ ರಹಿತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಅದೇ ಸಬ್ಸಿಡಿ ದರವನ್ನು ಹೆಚ್ಚಿಸುವುದು ಹೌದು ರಾಜ್ಯದಲ್ಲಿರುವ ವಸತಿ ರಹಿತ ಬಿಪಿಎಲ್‌ ಕುಟುಂಬಗಳಿಗೆ ಹಲವು ವಸತಿ ಯೋಜನೆಗಳ ಸಬ್ಸಿಡಿಯನ್ನು ದುಪ್ಪಟ್ಟು ಮಾಡಲು ಮುಂದಾಗಿದೆ.  

Gold Rate| ಹೊಸ ವರ್ಷದ ಮೊದಲ ವಾರವೇ ಚಿನ್ನ, ಬೆಳ್ಳಿದರ ಹೆಚ್ಚಳ! 

ಈಗ ಪರಿಶಿಷ್ಟರು, ಸಾಮಾನ್ಯರು ಸೇರಿದಂತೆ ಎಲ್ಲ ವರ್ಗದವರಿಗೂ ಸಮನಾಗಿ ಗ್ರಾಮೀಣ ಭಾಗದಲ್ಲಿ 3 ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ 4 ಲಕ್ಷ ರೂಪಯಿ ಸಹಾಯಧನ ನೀಡಲು ಮುಂದಾಗಿದೆ. ಸದ್ಯ ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ 2.70 ಲಕ್ಷ ರೂಪಾಯಿಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.

ಯಾವುದೇ ಮನೆ ನಿರ್ಮಾಣಕ್ಕೆ ಕನಿಷ್ಠ 4.50 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಯ ಹಣದ ಅಗತ್ಯವಿದೆ. ಆದರೆ, ರಾಜ್ಯ ಸರಕಾರ ನೀಡುವ ಸಬ್ಸಿಡಿ ದರ ಸಾಲುತ್ತಿಲ್ಲ ಎನ್ನಲಾಗುತ್ತಿದೆ. ನಾನಾ ಯೋಜನೆಗಳಡಿ ಮನೆ ಮಂಜೂರಾತಿ ಪಡೆದ ಬಡವರು ಅಡಿಪಾಯ ಹಾಕಿ 10, 15 ವರ್ಷಗಳು ಕಳೆದರೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಯೋಜನೆಗಳ ಸಬ್ಸಿಡಿ ಮೊತ್ತ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ   ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ  

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಲು ಸಾಲದ ಸುಳಿಗೆ ಸಿಲುಕಬಾರದು. ಇದರಿಂದ ಅವರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪರಿಶಿಷ್ಟರು, ಸಾಮಾನ್ಯ ವರ್ಗದವರು ಎಲ್ಲರಿಗೂ ಏಕರೂಪದ ಸಹಾಯಧನ ನಿಗದಿಮಾಡಿರುವ ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರಮವಾಗಿ 3 ಲಕ್ಷ ಮತ್ತು 4 ಲಕ್ಷ ರೂಪಾಯಿಯನ್ನು  ನಿಗದಿಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಸರಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಇದೇ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ 2023 -24 ನೇ ಸಾಲಿನ ಮುಂಗಡಪತ್ರದಲ್ಲಿ ಈ ತೀರ್ಮಾನ ಪ್ರಕಟವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

PM Kisan| ಪಿ.ಎಂ ಕಿಸಾನ್‌ ಸಾವಿರಾರು ರೈತರ ಕೆವೈಸಿ ಬಾಕಿ: 13ನೇ ಕಂತು ಡೌಟ್‌!

2016 ರಲ್ಲಿ ಘೋಷಣೆಯಾದ ಸರ್ವರಿಗೂ ಸೂರು ಯೋಜನೆಯಡಿ ನಗರ ಪ್ರದೇಶಗಳ ಬಡವರಿಗೆ ನಿರ್ಮಿಸಬೇಕಿದ್ದ 1,80,253 ಮನೆಗಳ ಪೈಕಿ 44,165 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಇದೇ ಮಾರ್ಚ್ ವೇಳೆಗೆ ಒಟ್ಟು 83,198 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಇನ್ನು ನಗರ ಪ್ರದೇಶಗಳಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಮಂಜೂರಾದ ಮನೆಗಳಿಗೆ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂಪಾಯಿ ಹಾಗೂ ಪರಿಶಿಷ್ಟರಿಗೆ 3.50 ಲಕ್ಷ ರೂಪಾಯಿ ಮೊತ್ತದ ಸಬ್ಸಿಡಿ ಇದೆ. ಆದರೆ, ಕೇಂದ್ರ ಸರಕಾರ ಎಲ್ಲ ವರ್ಗದ ಫಲಾನುಭವಿಗಳಿಗೂ ಏಕರೂಪದ ಸಬ್ಸಿಡಿ ನೀಡುತ್ತಿದೆ. ಅದೇ ನಿಯಮವನ್ನು ಇಲ್ಲಿಯೂ ಪಾಲಿಸಲಾಗುವುದು ಎಂದರು.

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ  

Good news for the homeless: Housing subsidy hiked from Rs 1.20 lakh to Rs 3 lakh

ಅಲ್ಲದೇ ಗ್ರಾಮೀಣ ಭಾಗದ ಬಿಪಿಎಲ್‌ ಕುಟುಂಬಗಳಿಗೆ ಮಂಜೂರಾದ ಮನೆಗಳಿಗೆ ಕೇಂದ್ರ ಸರಕಾರದ 72 ಸಾವಿರ ರೂಪಾಯಿ ಮೊತ್ತದ ಸಬ್ಸಿಡಿ ಸಿಗುತ್ತಿದ್ದು, ರಾಜ್ಯ ಸರಕಾರದ 48 ಸಾವಿರ ರೂಪಾಯಿ ಸೇರಿ ಒಟ್ಟು 1.20 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಈ ಮೊತ್ತವನ್ನು ಎಲ್ಲ ವರ್ಗದ ಫಲಾನುಭವಿಗಳಿಗೆ ಸರಿಸಮನಾಗಿ 3 ಲಕ್ಷ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.   

Published On: 05 January 2023, 11:07 AM English Summary: Good news for the homeless: Housing subsidy hiked from Rs 1.20 lakh to Rs 3 lakh

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.