1. ಸುದ್ದಿಗಳು

SSLC ವಿದ್ಯಾರ್ಥಿಗಳಿಗೆ ಮತ್ತೆ ಸಿಹಿಸುದ್ದಿ: ಈ ವರ್ಷವೂ ಗ್ರೇಸ್ ಮಾರ್ಕ್ಸ್‌ ನೀಡಲು ತೀರ್ಮಾನ

Kalmesh T
Kalmesh T
good news for SSLC students: decision to give grace marks this year too

23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಭಾಷಾ ವಿಷಯಗಳಿಗೆ ಶೇ 10 ಮತ್ತು ಐಚ್ಛಿಕ ವಿಷಯಗಳಿಗೆ ಶೇ 8ರಷ್ಟು ಕೃಪಾಂಕ ನೀಡಲು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕ ರಾಮಚಂದ್ರ ಅವರು, ಕಳೆದ ಎರಡು ವರ್ಷಗಳಲ್ಲಿ 8,9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ, ಈ ವರ್ಷವೂ ಶೇಕಡ 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಬೋರ್ಡ್‌ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ.

ರಾಜ್ಯದ ದಕ್ಷಿಣ ಭಾಗದಲ್ಲಿ ಧಾರಾಕಾರ ಮಳೆ; ಏ.7ರವರೆಗೂ ಮುಂದುವರೆಯುವ ಸಾಧ್ಯತೆ

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನ ನೀಡಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣಕ್ಕೆ ಶೇಕಡ 10 ರಷ್ಟು ಗ್ರೇಸ್‌ ಮಾರ್ಕ್ಸ್‌ ನೀಡಲಾಗಿತ್ತು.

ಆದರೆ ಈ ಬಾರಿಯೂ ಕೂಡಾ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ಸ್ ಅಂಕ ನೀಡಲಾಗುತ್ತಿದೆ. ಭಾಷಾ ಹಾಗೂ ಕೋರ್ ವಿಷಯಗಳಿಗೆ ಮಾತ್ರ ಗ್ರೇಸ್‌ ಅಂಕ ಕೊಡಲಾಗುತ್ತದೆ.

Jal Jeevan Mission: 60% ಶುದ್ಧ ಕುಡಿಯುವ ನೀರಿನ ಕವರೇಜ್

ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯವನ್ನು ಶಿಕ್ಷಣ ಇಲಾಖೆ ಪೂರ್ಣಗೊಳಿಸಿದೆ. ರಾಜ್ಯಾದಂತ ಒಟ್ಟು 3,305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಗುರುತಿಸಲಾಗಿದೆ.

ಭಾರತದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ..ಮರಿಗಳಿಗೆ ಹೆಸರು ಸೂಚಿಸಲು ಸ್ಪರ್ಧೆ ಆಯೋಜನೆ

ಈ ಬಾರಿ ಚುನಾವಣೆ ಇರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲು ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿಗೆ ಮೊದಲೇ ಸೂಚನೆ ಕೊಡಲಾಗಿದೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕ ರಾಮಚಂದ್ರ ಹೇಳಿದ್ದಾರೆ.

ಅಲ್ಲದೆ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗಿದ್ದು ಉಹಾ ಪೋಹಗಳಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಕಿವಿಕೊಡದಂತೆ ಅವರು ಮನವಿ ಮಾಡಿದ್ದಾರೆ.

Published On: 04 April 2023, 07:31 PM English Summary: good news for SSLC students: decision to give grace marks this year too

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.