KSRTC ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಸಮಾಧಾನದ ಸುದ್ದಿಯೊಂದು ಹೊರಬಿದ್ದಿದೆ. ಇದನ್ನೂ ನೀವು ಓದಲೆಬೇಕು. ಹತ್ತು ತಿಂಗಳ ಸಮಯಕ್ಕಿಂತ ಕಡಿಮೆ ಸಮಯದ ಗೈರು ಹಾಜರಿಯನ್ನು ಮನ್ನಿಸಿ ಕೆಲಸಕ್ಕೆ ಬಂದ ನೌಕರರ ಮೇಲಿನ ವಿಚಾರಣೆಯನ್ನು ರದ್ದುಗೊಳಿಸುವುದಾಗಿ ಕೆಎಸ್‌ಆರ್‌ಟಿಸಿ ನೌಕರರಿಗೆ ತಿಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 7,200 ನೌಕರರ ವಿರುದ್ಧದ ದಾಖಲಾಗಿದ್ದ ಶಿಸ್ತು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯಿಸುವಂತೆ ರದ್ದು ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ Karnataka State Road Transportation Corporation ನ ಈ ಸುದ್ದಿಯು ಸಾರಿಗೆ ಕಾರ್ಮಿಕರಿಗೆ ನೆಮ್ಮದಿಯನ್ನು ನೀಡಿದೆ.
ಮತ್ತಷ್ಟು ಓದಿರಿ:
ರೈತರ ಕುಟುಂಬಕ್ಕೆ ಬಿಗ್ ಗಿಫ್ಟ್: ಪ್ರತಿ ಕುಟುಂಬದಲ್ಲೂ ಒಬ್ಬರಿಗೆ ನೌಕರಿ ನೀಡುವುದಾಗಿ ಘೋಷಣೆ…!
ಕೆಎಸ್‌ಆರ್‌ಟಿಸಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಕಾರ್ಮಿಕರ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಈ ಆದೇಶವನ್ನು ತಿಳಿಸಿದ್ದಾರೆ. 10 ತಿಂಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರು ಹಾಜರಿಯನ್ನು ಮನ್ನಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾದ ನೌಕರರ ವಿಚಾರಣೆಯನ್ನು ರದ್ದುಗೊಳಿಸಿರುವುದಾಗಿ ಅವರು ತಿಳಿಸಿದರು. ಜೊತೆಗೆ ಶಿಸ್ತು ಪ್ರಕರಣ ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ ಪ್ರತಿ(Order Copy) ಯನ್ನು ನೀಡಿದರು.
ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಮ್ಮ ಸಾರಿಗೆ ಸಂಸ್ಥೆಯ ಬೆನ್ನುಲುಬು ಕಾರ್ಮಿಕರು. ಅವರ ಕ್ಷೇಮ, ಲಾಭವೇ ನಮ್ಮ ಆದ್ಯತೆ. ನಮ್ಮ ಸಂಸ್ಥೆ ನಡೆಯುತ್ತಿರುವುದು ಚಾಲಕ(Driver) , ನಿರ್ವಾಹಕ(Conductor) , ತಾಂತ್ರಿಕ ಸಿಬ್ಬಂದಿಯಿಂದ. ಹೀಗಾಗಿ ಅಧಿಕಾರಿ ಅಥವಾ ನೌಕರರ ಬಾಂಧವ್ಯ ಚೆನ್ನಾಗಿದ್ದರೆ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ" ಎಂದು ಹೇಳಿದರು.
ಮದ್ರಾಸ್ ಹೈಕೋರ್ಟ್‌ನ ಮಹತ್ವದ ನಿರ್ಧಾರ: ಪ್ರಕೃತಿ ಮಾತೆಗೂ ಜೀವಂತ ವ್ಯಕ್ತಿಯ ಸ್ಥಾನಮಾನ!
ರಾಜ್ಯ ಸರ್ಕಾರದ ಮಹತ್ವದ ಆದೇಶ; ಸರ್ಕಾರಿ ನೌಕರರ ಎರಡನೆ ಪತ್ನಿ- ಮಕ್ಕಳಿಗೂ ಸಿಗಲಿದೆ ಅನುಕಂಪದ ನೌಕರಿ!
ಇದೇ ವೇಳೆ MBBS, MTech ಸೇರಿದಂತೆ ಉನ್ನತ ವ್ಯಾಸಂಗ ಮಾಡಿರುವ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳನ್ನು ವಿ. ಅನ್ಬು ಕುಮಾರ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿಗಮದ ಆದಾಯ ಮತ್ತು ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ ಅವರು, "ನಿಗಮದ ಪ್ರತಿದಿನದ ಆದಾಯ ಸರಾಸರಿ 10 ಕೋಟಿ ಇರಬೇಕು. ಆದರೆ, ನಮಗೆ ಸರಾಸರಿ 8 ಕೋಟಿ ರೂ. ಆದಾಯ ಬರುತ್ತಿದೆ. ಇದರಲ್ಲಿ ಶೇ.70ರಷ್ಟು ಡೀಸೆಲ್ ಪಾವತಿಗೆ ಸಂದಾಯ ಮಾಡಬೇಕಾಗಿದೆ. ಆದ್ದರಿಂದ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾದ ಸ್ಥಿತಿಯಲ್ಲಿದೆ. ನೌಕರರು ಸಾರಿಗೆ ಸೇವೆಯನ್ನು ಬಲಪಡಿಸಿ, ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಮ್ಮ ಜತೆ ಕೈಜೋಡಿಸಬೇಕು" ಎಂದು ಮನವಿ ಮಾಡಿದರು.
ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು!
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
ಮಾಹಿತಿಗಾಗಿ: ಈ ಹಿಂದೆ ಕರ್ನಾಟಕದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು
ಈ ಹಿಂದೆ ಕಳೆದ ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (Karnataka State Road Transportation Corporation) ಹಾಗೂ ಕೆಎಸ್‌ಆರ್‌ಟಿಸಿ ನೌಕರರ ನಡುವೆ ವೈಮನಸ್ಸು ಉಂಟಾಗಿ ಅದು ತುಂಬ ದೊಡ್ಡ ಮಟ್ಟಕ್ಕೆ ಹೋಗಿತ್ತು. ನೌಕರರ ಕೆಲವು ಬೇಡಿಕೆಗಳಿದ್ದು, ಅವನ್ನು ಈಡೇರಿಸಿದರೆ ಮಾತ್ರ ನೌಕರಿ ಮಾಡುವುದಾಗಿ ನೌಕರರು ಪಟ್ಟು ಹಿಡಿದು ಕುಳಿತಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆ ಮಾತ್ರ ಯಾವುದೇ ನಿರ್ಧಾರ ಹೇಳದೆ ಸತಾಯಿಸಿತ್ತು. ತದನಂತರ ಇದು ಅತಿರೇಕಕ್ಕೆ ತೆರಳಿ ನೌಕರರು ತೀವ್ರಸ್ವರೂಪದ ಪ್ರತಿಭಟನೆಗೆ ಮುಂದಾಗಿದ್ದರು.
SBI ಅಲರ್ಟ್: ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI
Share your comments