1. ಸುದ್ದಿಗಳು

ರೈತರ ಕುಟುಂಬಕ್ಕೆ ಬಿಗ್ ಗಿಫ್ಟ್: ಪ್ರತಿ ಕುಟುಂಬದಲ್ಲೂ ಒಬ್ಬರಿಗೆ ನೌಕರಿ ನೀಡುವುದಾಗಿ ಘೋಷಣೆ…!

Kalmesh T
Kalmesh T
Big Gift for Farmers' Families: Announces Promotion of Employment to Every Family

ಕಾರ್ಮಿಕ ದಿನಾಚರಣೆಯ ದಿನದಂದೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರತಿ ರೈತ ಕುಟುಂಬದಲ್ಲಿ ಕನಿಷ್ಠ ಒಂದಾದರೂ ಕೆಲಸದ ಅವಕಾಶವನ್ನು ನೀಡುವ ಗುರಿ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ 2,10,000 ಉದ್ಯಮಿಗಳು ಮತ್ತು ರೈತರಿಗೆ ತರಬೇತಿ ನೀಡುವ ಗುರಿಯನ್ನು ಉತ್ತರ ಪ್ರದೇಶ ಸರ್ಕಾರವು ಹೊಂದಿದೆ ಎಂದು ತಿಳಿಸಿದ್ದಾರೆ. ರೈತರ ಆದಾಯವನ್ನು ಹೆಚ್ಚಳ ಮಾಡುವುದರ ಗುರಿಯೊಂದಿಗೆ, ಈ ರೈತರನ್ನು ಉದ್ಯಮಿಗಳನ್ನಾಗಿ ಪರಿವರ್ತನೆ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ ಎಂದಿದ್ದಾರೆ. ಇದು ರೈತರ ಆದಾಯ ಹೆಚ್ಚಳ ಮಾಡುವಲ್ಲಿ ಸಹಕಾರಿ ಮಾಡುವುದು ಮಾತ್ರವಲ್ಲದೆ, ಯುವಕರಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳನ್ನು ದೊರಕಿಸಿಕೊಡಲಿದೆ.

ಇದನ್ನೂ ಓದಿರಿ:

ಮದ್ರಾಸ್ ಹೈಕೋರ್ಟ್‌ನ ಮಹತ್ವದ ನಿರ್ಧಾರ: ಪ್ರಕೃತಿ ಮಾತೆಗೂ ಜೀವಂತ ವ್ಯಕ್ತಿಯ ಸ್ಥಾನಮಾನ!

ರಾಜ್ಯ ಸರ್ಕಾರದ ಮಹತ್ವದ ಆದೇಶ; ಸರ್ಕಾರಿ ನೌಕರರ ಎರಡನೆ ಪತ್ನಿ- ಮಕ್ಕಳಿಗೂ ಸಿಗಲಿದೆ ಅನುಕಂಪದ ನೌಕರಿ!

ಉತ್ತರ ಪ್ರದೇಶದ ಸರ್ಕಾರದ ಮಾಹಿತಿಯ ಪ್ರಕಾರ, ಯೋಗಿ ಆದಿತ್ಯನಾಥ್ ಸರ್ಕಾರ 375 ಎಕರೆಯ ಬೃಹತ್ ಆಹಾರ ಸಂಸ್ಕೃರಣಾ ಘಟಕವನ್ನು (Food Processing Units) ಆರಂಭಿಸಲು ಸಿದ್ಧತೆ ನಡೆಸಿದೆ. ಅದರೊಂದಿಗೆ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ (PMFE) ಯೋಜನೆಯಡಿ ಪ್ರಧಾನ ಮಂತ್ರಿ ಕಾರ್ಯಕ್ರಮದ ಅಡಿಯಲ್ಲಿ 41,336 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಹಾಗೂ ಮೇಲ್ದರ್ಜೆಗೇರಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಕೂಡ ಹೇಳಿದ್ದಾರೆ.

ಇತ್ತೀಚಿಗಷ್ಟೇ ಉತ್ತರ ಪ್ರದೇಶ ಸರ್ಕಾರ, ನಿಗದಿತ ಕನಿಷ್ಠ ಬೆಂಬಲ ಬೆಲೆಯ (MSP) 2022-23 ರ ರಾಬಿ ಬೆಳೆ ಸಂಗ್ರಹಣೆ ಪ್ರಾರಂಭವಾಗುತ್ತಿದ್ದಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 72 ಗಂಟೆಗಳ ಒಳಗೆ ರೈತರ ಬ್ಯಾಂಕ್ ಖಾತೆಗಳಿಗೆ (Farmers Bank Account) ಹಣವನ್ನು ವರ್ಗಾಯಿಸಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದರು.

ಈ ವರ್ಷ 60 ಲಕ್ಷ ಮೆ.ಟನ್ ಗೋಧಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಕೇಂದ್ರ ಸರ್ಕಾರವು ( Central government  ) ಗೋಧಿಗೆ ಎಂಎಸ್ ಪಿ ಅನ್ನು ಕ್ವಿಂಟಲ್‌ಗೆ 2,015 ರೂ.ಗೆ ನಿಗದಿಪಡಿಸಿದೆ, ಕಳೆದ ವರ್ಷ ಕ್ವಿಂಟಲ್‌ಗೆ 1,975 ರೂಪಾಯಿ ನಿಗದಿ ಮಾಡಲಾಗಿತ್ತು. ಬೆಂಬಲ ಬೆಲೆಯಲ್ಲಿ 40 ರೂಪಾಯಿ ಏರಿಕೆ ಮಾಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು!

ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!

PMFME ಯೋಜನೆಯಡಿ, ಆಹಾರ ಉದ್ಯಮದಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಲು ಸರ್ಕಾರವು ಸಹಾಯವನ್ನು ನೀಡುತ್ತದೆ. ಇದರ ಅಡಿಯಲ್ಲಿ ಸಣ್ಣ ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ಪ್ರಾರಂಭಿಸಬಹುದು.

ರೈತರ ಬೆಳೆಗೆ (Farmer crops) ಉತ್ತಮ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯ. ಇದಕ್ಕಾಗಿ ರೈತರನ್ನು ಆಹಾರ ಸಂಸ್ಕರಣಾ ಉದ್ಯಮದೊಂದಿಗೆ ಸಂಪರ್ಕಿಸಲಿದೆ. ಆಹಾರ ಸಂಸ್ಕರಣೆಯ ನಂತರ ಬೆಳೆ ಹಾನಿಯಾಗುವ ಸಾಧ್ಯತೆ ಇರುವುದಿಲ್ಲ ಮತ್ತು ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ದೊರೆಯುತ್ತದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಇದಲ್ಲದೆ, ರೈತರು ಮತ್ತು ಉದ್ಯಮಿಗಳಿಗೆ ಉದ್ಯಮಗಳನ್ನು ಸ್ಥಾಪಿಸಲು ತರಬೇತಿ ನೀಡಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿತ್ಯನಾಥ್, ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಗೋಧಿ ಖರೀದಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸೂಚಿಸಿದ್ದಾರೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಎಚ್ಚರ ಕರ್ನಾಟಕ! ಹಕ್ಕಿಜ್ವರ; ಲೆಕ್ಕ ತಪ್ಪಿದರೆ ಕಾದಿದೆ ಆಪತ್ತು!

Published On: 01 May 2022, 05:31 PM English Summary: Big Gift for Farmers' Families: Announces Promotion of Employment to Every Family

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.