1. ಸುದ್ದಿಗಳು

Cylinder ಬಳಕೆದಾರರಿಗೆ ಸಿಹಿಸುದ್ದಿ: ಮುಂದಿನ ತಿಂಗಳಿಂದ ಕೇವಲ 500ಕ್ಕೆ ಸಿಗಲಿದೆ ಸಿಲಿಂಡರ್‌ !

Hitesh
Hitesh
Good news for cylinder users: cylinder will be available for only 500 from next month!

ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಕೇವಲ 500ರೂಪಾಯಿಗೆ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ತಿಳಿಸಿದ್ದಾರೆ.

500ರೂಪಾಯಿ ಮೊತ್ತದಲ್ಲಿ ಒಟ್ಟು 12 ಸಿಲಿಂಡರ್‌ಗಳನ್ನು ಜನರಿಗೆ ನೀಡಲಾಗುವುದು. ಇದೀಗ ಒಂದು ಸಿಲಿಂಡರ್‌ನ ದರ 1050 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಗ್ಯಾಸ್‌ ಸಿಲಿಂಡರ್ ಅನ್ನು ಕೇವಲ 500ಕ್ಕೆ ನೀಡಲಿದ್ದೇವೆ.

ಈ ಯೋಜನೆ ಏಪ್ರಿಲ್‌ ತಿಂಗಳಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನಸ್ನೇಹಿ ಕಿಚನ್‌ ಕಿಟ್‌ ವಿತರಿಸುವ ಯೋಜನೆಯನ್ನು ಘೋಷಣೆ ಮಾಡಿ ಅದನ್ನು ಜಾರಿ ಮಾಡುವುದಾಗಿ ಅವರು ತಿಳಿಸಿದ್ದಾರೆ.   

  • ಅಡುಗೆ ಅನಿಲ ಸಿಲಿಂಡರ್‌ ಬಳಸುವಾಗ ಈ ಅಂಶಗಳನ್ನು ಪರಿಶೀಲಿಸಿ!
  • ಅಡುಗೆ ಅನಿಲವನ್ನು ಬಳಸುವ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮವಾಗಿದೆ.
  • ಸರಿಯಾದ ಪೂರೈಕೆದಾರರು ಮತ್ತು ಸರಬರಾಜುದಾರರನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಅಂಶಗಳಲ್ಲಿ ಒಂದಾಗಿದೆ.  
  • ರೆಗ್ಯೂಲೇಟರ್ ವ್ಯವಸ್ಥೆ ಪರೀಕ್ಷೆ ಮಾಡಿ, ಅದಕ್ಕೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ, ಐದು ವರ್ಷಕ್ಕಿಂತ ಹೆಚ್ಚು ಇದನ್ನು ಬಳಸುವುದು ತಪ್ಪಿಸಿರಿ.
  • ರಬ್ಬರ್ ಹೊಸ್ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.  ಅಲ್ಲದೇ ಹೋಸ್ ಕ್ಲಿಪ್ ಸರಿಯಾಗಿದೆಯಾ ಎಂದು ತಿಳಿಯಿರಿ. ಗ್ಯಾಸ್ ಸಿಲಿಂಡರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಖಚಿತಪಡಿಸಿಕೊಳ್ಳಿ.  
  • ಸಿಲಿಂಡರ್ ಜೋಡಣೆ ಮಾಡುವ ವೇಳೆ ಸೋಪ್ ನೀರನ್ನು ಹಾಕಿಕೊಂಡು ಅಲ್ಲಿ ಸೋರಿಕೆ ಆಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದೊಮ್ಮೆ ಅಡುಗೆ ಅನಿಲ ಸಿಲಿಂಡರ್‌ ಸೋರಿಕೆ ಆಗುತ್ತಿದ್ದರೆ, ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ.  
  • ಗ್ಯಾಸ್ ಸೋರಿಕೆ ಆಗುತ್ತಿದ್ದರೆ, ತಕ್ಷಣವೇ ಕ್ರಮ ಕೈಗೊಳ್ಳಬೇಕು. ಯಾವುದೇ ಗಡಿಬಿಡಿ ಮಾಡದೆ ಯಾವುದೇ ಸ್ವಿಚ್‌ಅನ್ನು ಆನ್ ಅಥವಾ ಆಫ್ ಮಾಡಬಾರದು.
  • ಕಿಟಕಿ ಮತ್ತು ಬಾಗಿಲುಗಳನ್ನು ತೆರೆಯಬೇಕು. ಇದರಿಂದ ಗಾಳಿಯಲ್ಲಿ ಗ್ಯಾಸ್ ಹೊರಹೋಗುವುದು.
  • ಇನ್ನು ಕೂಡ ಗ್ಯಾಸ್ ಸೋರಿಕೆ ಇದ್ದರೆ ಆಗ ಗ್ಯಾಸ್ ಸಿಲಿಂಡರ್ ನ್ನು ತೆಗೆದು ಹೊರಗೆ ಗಾಳಿಯಾಡುವ ಜಾಗದಲ್ಲಿ ಇಡಬೇಕು. 
Published On: 20 December 2022, 10:11 AM English Summary: Good news for cylinder users: cylinder will be available for only 500 from next month!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.