ನವೆಂಬರ್ ಪ್ರಾರಂಭದಿಂದಲೂ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಲ್ಲೇ ಇದ್ದು, ಚಿನ್ನ ಖರೀದಿದಾರರಿಗೆ ನಿರಾಸೆ ಮೂಡಿದೆ. ಆದರೆ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆ ಆಗಲಿದೆ....
ಮೀನು ಪ್ರಿಯರಿಗೆ ಸಿಹಿಸುದ್ದಿ: ಮಲೆನಾಡು ಭಾಗದಲ್ಲಿ ಮೀನಿನ ದರ ಇಳಿಕೆ!
ನವೆಂಬರ್ ಪ್ರಾರಂಭದಿಂದಲೂ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಲ್ಲೇ ಇದ್ದು, ಚಿನ್ನ ಖರೀದಿದಾರರಿಗೆ ನಿರಾಸೆ ಮೂಡಿದೆ.
ಆದರೆ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆ ಆಗಲಿದೆ ಎನ್ನುತ್ತಿದೆ ಬ್ರಿಟಿಷ್ ರಿಸರ್ಚ್ ಕಂಪನಿ ಮೆಟಲ್ಸ್ ಫೋಕಸ್ (British research company Metals Focus).
ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!
ಸೆಪ್ಟೆಂಬರ್ ತಿಂಗಳಲ್ಲಿ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರವು ನವೆಂಬರ್ ಮೊದಲ ತಿಂಗಳಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು.
ನಂತರ ದಿನಗಳಲ್ಲಿ ಚಿನ್ನದ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಲಿಲ್ಲ.
ಇದೀಗ ಬ್ರಿಟಿಷ್ ರಿಸರ್ಚ್ ಕಂಪನಿ ಮೆಟಲ್ಸ್ ಫೋಕಸ್ ಕಂಪನಿಯ ಪ್ರಕಾರ, 2023ರಲ್ಲಿ ಚಿನ್ನದ ಬೆಲೆಯಲ್ಲಿ ಶೇ. 10ರಷ್ಟು ಕುಸಿತವಾಗಲಿದೆ ಎಂದು ಅಂದಾಜಿಸಲಾಗಿದೆ.
ಗೋವುಗಳ ಸಂರಕ್ಷಣೆಗೆ ಸರ್ಕಾರಿ ನೌಕರರ ವೇತನ: ಅಸಮಾಧಾನ!
ಇನ್ನು ಬೆಳ್ಳಿಯ ದರದಲ್ಲೂ ಸಹ ಶೇ. 17ರಷ್ಟು ಬೆಲೆ ಕುಸಿತವಾಗುವ ಸಾಧ್ಯತೆ ಇದೆ. ಇದು ಅಂತಾರಾಷ್ಟ್ರೀಯ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿರುವ ಪರಿಸ್ಥಿತಿ.
ಭಾರತದಲ್ಲೂ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ತುಸು ಇಳಿಕೆ ಆಗುವ ಸಾಧ್ಯತೆ ಇದೆ.
ಭಾರತದಲ್ಲಿ ಕಳೆದ ಎರಡು ದಿನಗಳಿಂದ ಗಮನಾರ್ಹವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಬಹುತೇಕ ಸ್ಥಿರವಾಗಿದೆ.
ಬೆಂಗಳೂರು ಸೇರಿ ಕೆಲವು ನಗರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆ.
ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,750 ರೂಪಾಯಿ ಆಗಿದೆ0. 24 ಕ್ಯಾರೆಟ್ ಚಿನ್ನದ ಬೆಲೆ 53,180 ರೂಪಾಯಿ ಇದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. 1 ಕಿಲೋ ಬೆಳ್ಳಿ ಬೆಲೆಯಲ್ಲಿ 800 ರೂನಷ್ಟು ಕಡಿಮೆ ಆಗಿದೆ. ಸದ್ಯ ಬೆಳ್ಳಿ ಬೆಲೆ 62 ಸಾವಿರ ರೂಪಾಯಿ ಇದೆ.
Share your comments