1. ಸುದ್ದಿಗಳು

ಮೀನು ಪ್ರಿಯರಿಗೆ ಸಿಹಿಸುದ್ದಿ: ಮಲೆನಾಡು ಭಾಗದಲ್ಲಿ ಮೀನಿನ ದರ ಇಳಿಕೆ!

Hitesh
Hitesh
Good news for fish lovers: the price of fish in the highlands has decreased!

ಮಲೆನಾಡು ಭಾಗದಲ್ಲಿ ಕಳೆದ ಮೂರು ತಿಂಗಳಿನಿಂದ ಮೀನಿನ ದರದಲ್ಲಿ ಇಳಿಕೆ ಆಗಿದೆ.  

ಮಲೆನಾಡಿನ ವಿವಿಧೆಡೆ ಕೆರೆ ಮೀನುಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುತ್ತಿರುವುದು ಹಾಗೂ ಸಮುದ್ರದ ಮೀನಿನ ದರವೂ ಇಳಿಕೆ ಆಗಿರುವುದು ವರವಾಗಿ ಪರಿಣಮಿಸಿದೆ.  

ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!

ಬಣಕಲ್ ಹಾಗೂ ಹ್ಯಾಂಡ್ ಪೋಸ್ಟ್‌ನಲ್ಲಿ ಪ್ರತಿದಿನವೂ ಮೀನಿನ ವಹಿವಾಟು ನಡೆಸಲಾಗುತ್ತದೆ. ಈ ಭಾಗದಿಂದ  ತಾಲ್ಲೂಕಿನ ವಿವಿಧೆಡೆ ಹಾಗೂ ಮಾರುಕಟ್ಟೆಗೆ ಮೀನು ರಬರಾಜು ಮಾಡಲಾಗುತ್ತದೆ.

ಸಾಮಾನ್ಯವಾಗಿ ಮಂಗಳೂರು, ಉಡುಪಿ ಜಿಲ್ಲೆಗಳಿಂದ ಮೂಡಿಗೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಮೀನು ಸರಬರಾಜು ಮಾಡಲಾಗುತ್ತದೆ.

ಕಳೆದ ಎರಡು ತಿಂಗಳಿನಿಂದ ಸಮುದ್ರ ಮೀನಿನ ದರ ಇಳಿಕೆ ಆಗುತ್ತಿರುವುದರಿಂದ ಸಹಜವಾಗಿಯೇ ಬೆಲೆ ಇಳಿಕೆ ಆಗಿದೆ.   ಇದೇ ಮೊದಲ ಬಾರಿಗೆ ಸಮುದ್ರ ಮೀನುಗಳಾದ ಬೂತಾಯಿ, ಬಂಗಡೆ ಮೀನುಗಳಿಗೆ ದರ ಇಳಿಕೆಯಾಗಿದೆ.

ಗೋವುಗಳ ಸಂರಕ್ಷಣೆಗೆ ಸರ್ಕಾರಿ ನೌಕರರ ವೇತನ: ಅಸಮಾಧಾನ!

ಸಮುದ್ರ ಮೀನಿಗೆ ದರ ಕಡಿಮೆಯಾಗಿರುವುದರಿಂದ ಕೆರೆ ಮೀನಿನ ದರವೂ ಅಲ್ಪ ಪ್ರಮಾಣದಲ್ಲಿ ಬೆಲೆ ಇಳಿಮುಖವಾಗಿದೆ.

ಕೆರೆಗಳಲ್ಲಿ ಈಗ ಮೀನಿನ ಮರಿಗಳನ್ನು ಬಿಡುವ ಸಮಯವಾಗಿರುವುದರಿಂದ ಮೀನನ್ನು ಹಿಡಿದಿಲ್ಲದ ಕೆರೆಗಳಲ್ಲಿ ಬೇಡಿಕೆ ಹಾಗೂ ದರಕ್ಕೆ ಅನುಗುಣವಾಗಿ ಮೀನನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ.   

ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ!

ಮೂಡಿಗೆರೆ ಭಾಗಕ್ಕೆ ಬೇಲೂರು ಡ್ಯಾಂ ಮೀನು ಸಹ ಬರುತ್ತದೆ. ಹೀಗಾಗಿ, ಲ್ಲಾಗುವ ಮೀನು ಪೂರೈಕೆಯು ಕೂಡ ಸ್ಥಳೀಯ ಮೀನಿನ ಬೇಡಿಕೆಯನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ಸ್ಥಳೀಯರು.

Good news for fish lovers: the price of fish in the highlands has decreased!

ಇನ್ನು ಸ್ಥಳೀಯವಾಗಿ ಸಾಕುವ ಮೀನುಗಳು ಹೆಚ್ಚು ರುಚಿ ಹಾಗೂ ಫ್ರೈ ಖಾದ್ಯಕ್ಕೆ ಹೆಚ್ಚಾಗಿ ಬಳಕೆಯಾಗುವುದರಿಂದ ಹೋಟೆಲ್ ಗಳಲ್ಲಿ ಸ್ಥಳೀಯ ಮೀನುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ.  

Good news for fish lovers: the price of fish in the highlands has decreased!
Published On: 18 November 2022, 02:10 PM English Summary: Good news for fish lovers: the price of fish in the highlands has decreased!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.