1. ಸುದ್ದಿಗಳು

Gold Price: ಬಂಗಾರ ಪ್ರಿಯರಿಗೆ ಮತ್ತೆ ಶಾಕ್‌ ಸುದ್ದಿ; ಬೆಲೆಯಲ್ಲಿ ಏರಿಕೆ

Kalmesh T
Kalmesh T
Gold Price: Another shock for gold lovers; Increase in price

ಬಂಗಾರ ಪ್ರಿಯರಿಗೆ ಮತ್ತೆ ಶಾಕಿಂಗ್‌ ಸುದ್ದಿ. ಬಂಗಾರದ ಬೆಲೆಯಲ್ಲಿ ಹೆಚ್ಚಳ. ಈ ದಿನದ ದರಗಳು ಹೀಗಿವೆ

ಇದನ್ನೂ ಓದಿರಿ: ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮಳೆ ಸಾಧ್ಯತೆ; ನವೆಂಬರ್‌ 6ರಿಂದ ಚಳಿ ಆರಂಭದ ಮೂನ್ಸೂಚನೆ!

ದೇಶದಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಮುಂದುವರೆದಿದೆ. ಇಂದು ಕೂಡ (ಗುರುವಾರ) ಬಂಗಾರದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಆಯಾ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಪ್ರಮುಖ ನಗರಗಳ ಇಂದಿನ ಬಂಗಾರ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

ನವೆಂಬರ್ 3 ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹ 5,111 ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹ 5,116 ನಿಗದಿಯಾಗಿದೆ.

2022-23 ಹಿಂಗಾರು ಋತುವಿನ ರಸಗೊಬ್ಬರಗಳಿಗೆ ₹51,875 ಕೋಟಿ ಸಬ್ಸಿಡಿಗೆ ಕ್ಯಾಬಿನೆಟ್ ಅನುಮೋದನೆ!

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹ 46,900 ನಿಗದಿಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,160 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:

ಬೆಂಗಳೂರು: ₹ 46,900 (22 ಕ್ಯಾರಟ್‌) - ₹ 51,160 (24 ಕ್ಯಾರಟ್‌)

ಚೆನ್ನೈ:  ₹ 47,410 (22 ಕ್ಯಾರಟ್‌) - ₹ 51,720 (24 ಕ್ಯಾರಟ್‌)

ದಿಲ್ಲಿ:   ₹ 47,000 (22 ಕ್ಯಾರಟ್‌) - ₹ 51,260 (24 ಕ್ಯಾರಟ್‌)

ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್‌ ಇಳುವರಿ!

ಹೈದರಾಬಾದ್‌:   ₹ 46,850 (22 ಕ್ಯಾರಟ್‌) - ₹ 51,110 (24 ಕ್ಯಾರಟ್‌)

ಕೋಲ್ಕತಾ:   ₹46,850 (22 ಕ್ಯಾರಟ್‌) - ₹50,780 (24 ಕ್ಯಾರಟ್‌)

ಮಂಗಳೂರು:   ₹46,900 (22 ಕ್ಯಾರಟ್‌) - ₹51,160 (24 ಕ್ಯಾರಟ್‌)

ಮುಂಬಯಿ:   ₹46,850 (22 ಕ್ಯಾರಟ್‌) - ₹51,110 (24 ಕ್ಯಾರಟ್‌)

ಮೈಸೂರು:   ₹46,900 (22 ಕ್ಯಾರಟ್‌) - ₹51,160 (24 ಕ್ಯಾರಟ್‌)

ಅಕಾಲಿಕ ಮಳೆಯಿಂದ ಖಾರಿಫ್‌ ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ: ಎಸ್‌ಬಿಐ ವರದಿ!

ಬೆಳ್ಳಿ ದರ (Silver Rate)

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ₹ 58,900 ರೂಪಾಯಿ ದಾಖಲಾಗಿದ್ದು, ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹64,500 ಇದ್ದು, ಇಳಿಕೆ ಕಂಡುಬಂದಿದೆ.

ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಕೆಲವೆಡೆ ಇಳಿಕೆ ಕಂಡು ಬಂದಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮೈಸೂರು, ಮಂಗಳೂರಿನಲ್ಲೂ ₹64,500 ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ  ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.  

Published On: 03 November 2022, 02:34 PM English Summary: Gold Price: Another shock for gold lovers; Increase in price

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.