1. ಸುದ್ದಿಗಳು

ಎಲ್‌ಪಿಜಿ ಗ್ರಾಹಕರಿಗೆ ಇಲ್ಲಿದೆ ಸಂತಸದ ಸುದ್ದಿ, ಗ್ಯಾಸ್ ಸಿಲಿಂಡರ್ ಉಚಿತವಾಗಿ ಪಡೆಯಲು ಇಂದೇ ಬುಕ್ ಮಾಡಿ

KJ Staff
KJ Staff
LPG Cylinder

ಎಚ್‌ಪಿ, ಇಂಡೇನ್ ಮತ್ತು ಭಾರತ್ ಗ್ಯಾಸ್ ಕಂಪನಿಯ ಎಲ್‌ಪಿಜಿ  ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಇಲ್ಲಿದೆ ಸಂತಸದ ಸುದ್ದಿ. ನೀವು ಉಚಿತವಾಗಿ ಸಿಲೆಂಡರ್  ಪಡೆಯಲು ಹೊಸ ಆಫರ್ ಇಲ್ಲಿದೆ. ಗ್ಯಾಸ್ ಸಿಲಿಂಡರ್ ಬುಕ್‌ ಮಾಡುವುದರ ಜೊತೆಗೆ 700 ರೂಪಾಯಿವರೆಗೆ ಹಣ ಉಳಿತಾಯ ಮಾಡುವುದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ಮಾಹಿತಿ.

ಪೇಟಿಎಂನ ಕ್ಯಾಶ್‌ಬ್ಯಾಕ್ ಕೊಡುಗೆ :

ಪೇಟಿಎಂನ  ಯೋಜನೆಯಡಿ, ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ 700 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್   ನೀಡಲಾಗುತ್ತಿದೆ. ಅಂದರೆ, ನಿಮಗೆ ಸಿಗುವ  ಎಲ್ಪಿಜಿ ಸಿಲಿಂಡರ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಯಾಕೆಂದರೆ ಸಬ್ಸಿಡಿಯ ನಂತರ ರೀಫಿಲ್ ಸಿಲಿಂಡರ್ ಬೆಲೆ ಸುಮಾರು 700-750 ರೂಪಾಯಿಗಳು ಮಾತ್ರ ಆಗಿರುತ್ತವೆ.ಈ ಆಫರ್ ಪಡೆಯಲು ಜನವರಿ 31 ಕೊನೆಯ ದಿನವಾಗಿದೆ. ಇನ್ನೇಕೆ ತಡ. ಇಂದೇ ಬುಕ್ ಮಾಡಿ ಆಫರ್ ಪಡೆಯಿರಿ.

ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ವಿಧಾನ:

ಮೊಬೈಲ್‌ನಲ್ಲಿ ಪೇಟಿಎಂ ಅಪ್ಲಿಕೇಶನ್ ತೆರೆಯಿರಿ. ಅಪ್ಲಿಕೇಶನ್ ತೆರೆದ ನಂತರ ಹೋಮ್ ಸ್ಕ್ರೀನ್‌ನಲ್ಲಿ ಆಯ್ಕೆಯು ಗೋಚರಿಸದಿದ್ದರೆ, ನಂತರ ಹೆಚ್ಚಿನದನ್ನು(More) ಕ್ಲಿಕ್ ಮಾಡಿ. ಇದರ ನಂತರ, ರೀಚಾರ್ಜ್ ಮತ್ತು ಪೇ ಬಿಲ್‌ಗಳ ಆಯ್ಕೆಯು ಎಡಭಾಗದಲ್ಲಿ ಗೋಚರಿಸುತ್ತದೆ, ನೀವು ಅದನ್ನು ಟ್ಯಾಪ್ ಮಾಡಿದ ತಕ್ಷಣ, ನಿಮಗೆ ಹಲವು ಆಯ್ಕೆಗಳು ಸಿಗುತ್ತವೆ. ಈ ಆಯ್ಕೆಗಳಲ್ಲಿ ಒಂದು ಬುಕ್ ಎ ಸಿಲಿಂಡರ್ ಆಗಿರುತ್ತದೆ.  ಬುಕ್‌ ಸಿಲಿಂಡರ್ ಅನ್ನು ಕ್ಲಿಕ್ ಮಾಡಿದ ನಂತರ, ನೀವು ನಿಮ್ಮ ಅನಿಲ ಪೂರೈಕೆದಾರರಾದ ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಅಥವಾ ಎಚ್‌ಪಿ ಗ್ಯಾಸ್ ಅನ್ನು ಆರಿಸಬೇಕಾಗುತ್ತದೆ.  ನಂತರ ರಿಜಿಸ್ಟರ್ ಮೊಬೈಲ್ ಸಂಖ್ಯೆ ಅಥವಾ ಎಲ್‌ಪಿಜಿ ಐಡಿಯನ್ನು ನಮೂದಿಸಬೇಕು.. 6) ನೀವು ವಿವರಗಳನ್ನು ನಮೂದಿಸಿ ಮತ್ತು ಪ್ರೊಸೀಡ್ ಕ್ಲಿಕ್ ಮಾಡಿದ ತಕ್ಷಣ, ನೀವು ಎಲ್ಪಿಜಿ ಐಡಿ, ಗ್ರಾಹಕರ ಹೆಸರು ಮತ್ತು ಏಜೆನ್ಸಿಯ ಹೆಸರನ್ನು ನೋಡುತ್ತೀರಿ. ಕೆಳಭಾಗದಲ್ಲಿ, ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ಮೊತ್ತವನ್ನು ನೀಡಲಾಗಿರುತ್ತದೆ.

ಉಚಿತ ಎಲ್ ಪಿಜಿ ಸಿಲಿಂಡರ್ ಪಡೆಯಲು ಸ್ಕ್ರಾಚ್ ಕಾರ್ಡ್ :

ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವ ವೇಳೆ ನಿಮಗೆ ಒಂದು ಸ್ಕ್ರಾಚ್ ಕಾರ್ಡನ್ನು ನೀಡಲಾಗುತ್ತದೆ.. ಇದರಲ್ಲಿ ಸಿಗುವ ಕ್ಯಾಶ ಬ್ಯಾಕ್ 24 ಗಂಟೆಗಳ ಒಳಗೆ ನಿಮ್ಮ Paytm ವಾಲೆಟ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಆಫರ್ ಜ 31ರ ವರೆಗೆ ಮಾತ್ರ ಇರಲಿದೆ. ಈ ಆಫರ್ ನ ಲಾಭವನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದು.

ಯಾರಿಗೆ ಸಿಗಲಿದೆ ಉಚಿತ ಎಲ್ ಪಿಜಿ ಸಿಲಿಂಡರ್ :

Paytm app ಮೂಲಕ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಈ ಲಾಭ ಸಿಗಲಿದೆ. ಅಲ್ಲದೆ IVRS ಮೂಲಕ ಬುಕ್ಕಿಂಗ್ ಮಾಡುವವರಿಗೂ ಈ ಲಾಭ ಸಿಗಲಿದೆ ಆದರೆ ಮೊದಲ ಪೇಮೆಂಟ್ ಮಾತ್ರ Paytm app ಮೂಲಕವೇ ಮಾಡಬೇಕು.ಸ್ಕ್ರಾಚ್ ಕಾರ್ಡ್ (Scratch card) ದೊರೆತ 7 ದಿನಗಳ ನಂತರ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ..  ಪ್ರೋಮೋ ಕೋಡ್ ವಿಭಾಗದಲ್ಲಿ FIRSTLPG ನ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಈ ಪ್ರೋಮೊ ಕೋಡ್‌ನಲ್ಲಿ 500 ರೂ.ಗಳ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಒಂದು ವೇಳೆ ನೀವು ಪ್ರೋಮೋ ಕೋಡ್ ನಮೂದಿಸುವುದು ಮರೆತರೆ, ಕ್ಯಾಶ್‌ಬ್ಯಾಕ್ ಸಿಗುವುದಿಲ್ಲ.

Published On: 30 January 2021, 09:19 AM English Summary: Get free lpg cylinder by using paytm

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.