ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಖುಷ್ಕಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವೈಯಕ್ತಿಕ ನೀರಾವರಿ ಕೊಳವೆಬಾವಿ / ತೆರೆದಬಾವಿ ಮತ್ತು ಏತ ನೀರಾವರಿಗಾಗಿ ಸಾಲ ಸೌಲಭ್ಯ ನೀಡಲಾಗುವುದು
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ ವೆಲ್ ಗಳನ್ನು ಹಾಕಲು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ. ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ, ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾತ ರೈತರು ಮಾತ್ರ ಅರ್ಹರಾಗುತ್ತಾರೆ.
ಹಾಗಾಗಿ ಆಸಕ್ತಿಯುಳ್ಳ ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಹಾಗೂ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 10- 12- 2020, ಆಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ ಎಲ್ಲ ಡಾಕ್ಯುಮೆಂಟ್ ಗಳನ್ನು ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ.
ಆನ್ ಲೈನ್ ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಗೂಗಲ್ನಲ್ಲಿ http://kmdc.karnataka.gov.in ಟೈಪ್ ಮಾಡಿ ಹಾಗೂ ಸರ್ಚ್ ಮಾಡಿ
- ನಿಮಗೆ kmdc ವೆಬ್ ಸೈಟಿನ ಹೋಂ ಪೇಜ್ ಓಪನ್ ಆಗುತ್ತದೆ.
- ಅಲ್ಲಿ ಗಂಗಾ ಕಲ್ಯಾಣ್ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ
- ಆನ್ಲೈನ್ ಮೂಲಕ ಎಲ್ಲಾ ಅರ್ಜಿಯನ್ನು ಭರ್ತಿ ಮಾಡಿ ಹಾಗೂ ಸಬ್ಮಿಟ್ ಮಾಡಿ.
ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10 ಹಾಗೂ ಅರ್ಜಿಯನ್ನು ಸಲ್ಲಿಸಿದ ನಂತರ ಡಾಕ್ಯುಮೆಂಟ್ ಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 21.
Share your comments