1. ಸುದ್ದಿಗಳು

ತೊಳೆದ ಅಕ್ಕಿ ನೀರನ್ನು ಗಿಡಗಳಿಗೆ ಹಾಕಿದರೆ ಸೊಂಪಾಗಿ ಬೆಳೆಯುತ್ತವೆ

ದಕ್ಷಿಣ ಭಾರತದಲ್ಲಿ ಬಹುತೇಕ ಜನರು ನಿತ್ಯಊಟಕ್ಕೆ ಬಳಸುವದು ಅನ್ನವೇ. ಆಕ್ಕಿಯನ್ನು ಬೇಯಿಸು ಮುನ್ನ 3 ಸಲ ನೀರಿನಲ್ಲಿ ತೊಳೆದು ಶುದ್ಧಗೊಳಿಸುವದು ರೂಢಿ. ಆದರೆ ಈ ನೀರನ್ನು ಬಳಸದೇ ಚೆಲ್ಲುವದುಕೂಡ ಸಾಮಾನ್ಯಎಂಬಂತಾಗಿಬಿಟ್ಟಿದೆ. ಕೆಲವರು ಮಾತ್ರ ತಲೆ ಗೂದಲಿಗೆ, ತ್ವಚೆಯ ಅಂದಕ್ಕೆ ಈ ನೀರನ್ನು ಬಳಸುವರು. ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಹಾಕಿದರೆ ಅವು ಸೊಂಪಾಗಿ ಬೆಳೆಯುತ್ತವೆ ಗೊತ್ತೆ? ಜೊತೆಗೆ ಇದರಿಂದ ಕೀಟನಾಶಕ ಮತ್ತು ಗೊಬ್ಬರವನ್ನು ಕೂಡ ತಯಾರಿಸಬಹುದು. ಅಕ್ಕಿ ತೊಳೆದ ನಂತರ ಬಸಿಯವ ನೀರು ಮಾತ್ರವಲ್ಲ, ಕೆಲವೊಮ್ಮೆ ನೆನೆ ಹಾಕಿದ ಅಕ್ಕಿಯನ್ನಷ್ಟೇ ಬಳಸಿ ಚೆಲ್ಲುವ ನೀರನ್ನುಕೂಡ ಗಿಡಗಳಗೆ ಹಾಕಬಹುದು.

ಆಕ್ಕಿ ತೊಳೆದ ನೀರಿನಲ್ಲಿ ವಿವಿಧ ಬಗೆಯ ಪೋಷಕಾಂಶಗಳಿವೆ.ಗಿಡಗಳ ಬೆಳವಣಿಗೆಗೆ ಇವು ಪೂರಕ. ಇದರಲ್ಲಿರುವ ಪ್ರೋಟೀನ್, ನಾರಿನಾಂಶ, ಅಮೈನೊ ಆಮ್ಲಗಳು, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಸತು ಮೊದಲಾದ ಅಂಶಗಳು ತರಕಾರಿ ಗಿಡಗಳಿಗೆ, ಔಷಧಿ ಗಿಡಗಳಿಗೆ ಹಾಗೆಯೆ ಮನೆಯ ಆಲಂಕಾರಿಕ ಗಿಡಗಳಿಗೆ ಬಳಸಬಹುದು.ಇದರಲ್ಲಿ ಹಲವು ಬಗೆಯ ವಿಟಮಿನ್ ಗಳು, ಖನಿಜಾಂಶಗಳಿದ್ದು ಇವು ಬೇರುಗಳಿಗೆ ಸಾಕಷ್ಟು ಪೌಷ್ಟಿಕಾಂಶ ಒದಗಿಸುತ್ತವೆ. ಬೇರಿನಲ್ಲಿರುವ ಲ್ಯಾಕ್ಟೊ ಬೆಸಿಲೈ ಎಂಬ ಬ್ಯಾಕ್ಟೀರಿಯಾ ಬೆಳಯಲೂ ಇದು ಪೋಷಕಾಂಶ ಒದಗಿಸುತ್ತದೆ.

ಈ ನೀರನ್ನು ಹಾಗೇಯೆ ಬಳಸಬೇಕೆ ಎಂಬ ಪ್ರಶ್ನೆ ಏಳುವದು ಸಹಜ. ಇದನ್ನು ಗಿಡಗಳಿಗೆ ನೇರವಾಗಿ ಹಾಕಬಹುದು. ಇದರಿಂದಅಗತ್ಯ ಪೋಷಕಾಂಶಗಳು ಲಭ್ಯ. ಆದರೆಕೀಟನಾಶಕದಂತೆ ಬಳಸುವದಾದರೆ ನೈಸರ್ಗಿಕ ಪ್ರಕ್ರಿಯೆ ಅವಶ್ಯಕ. ಇದಕ್ಕಾಗಿ ಅಕ್ಕಿ ತೊಳೆದ ನೀರನ್ನುಒಂದು ಬಕೆಟ್ ನಲ್ಲಿ ಶೇಖರಿಸಿಡಿ. ನೆರಳಿರುವ ಜಾಗದಲ್ಲಿಇರಿಸುವದನ್ನು ಮರೆಯಬೆಡಿ.ಆದರೆ ಸಾಕಷ್ಟು ಗಾಳಿಯಾಡುವಂತಿರಬೇಕು. 10-15 ದಿನಗಳ ನಂತರಇದರಲ್ಲಿ ಯೀಸ್ಟ ಬೆಳದು ನೀರಿನ ಮೇಲೆ ಬರುತ್ತದೆ. ಇದು ಗಿಡಗಳಿಗೆ ಒಳ್ಳೆಯ ಕೀಟನಾಶಕಕೂಡ. ಇದನ್ನುತರಕಾರಿ, ಹೂವಿನ ಗಿಡಗಳ ಮೇಲೆ ಎರಚಬಹುದು.

ಲೇಖಕರು: ಶಗುಪ್ತಾ ಅ ಶೇಖ

Published On: 25 November 2020, 10:14 PM English Summary: Use washed rice water to grow the plant

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.