-
-
ರೈತರ ದಿನಾಚರಣೆಯ ಅಂಗವಾಗಿ ರೈತರನ್ನು ಗೌರವಿಸಿ ಅವರಿಗೆ ಟ್ರ್ಯಾಕ್ಟರ್ ವಿತರಿಸಿದ ಸಿಎಂ ಯೋಗಿ ಆದಿತ್ಯನಾಥ್
ರೈತರ ದಿನಾಚರಣೆ ಅಂಗವಾಗಿ, ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಅಂತಹ ಚೌಧರಿ ಚರಣ್ ಸಿಂಗ್ ಅವರ 118ನೇ ಯ ಜನ್ಮದಿನಾಚರಣೆಯ ಅಂಗವಾಗಿ ನಡೆದಂತಹ ರೈತ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಅಂತಹ ಸಿಎಂ ಯೋಗಿ ಆದಿತ್ಯನಾಥ ನವರು 24 ಜನರನ್ನು ಸನ್ಮಾನಿಸಿ ಗೌರವಿಸಿದರು, ಇದರೊಡನೆ ಹನ್ನೊಂದು ರೈತರಿಗೆ ಉಚಿತ ಟ್ರ್ಯಾಕ್ಟರ್ ಗಳನ್ನು ಕೂಡ ವಿತರಿಸಿದರು. ಹಾಗೂ ಮೂರು ಜನ ಪ್ರಗತಿಪರ ಮಹಿಳಾ ರೈತರಿಗೆ ತಮ್ಮ ಅತ್ಯುತ್ತಮ ಕೆಲಸಗಳಿಗಾಗಿ ತಲಾ 75 ಸಾವಿರ ರೂಪಾಯಿಗಳನ್ನು ಕೂಡ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಂತಹ ಸಿಎಂ ಯೋಗಿ ಆದಿತ್ಯನಾಥ ನವರು" ಪ್ರಧಾನಮಂತ್ರಿ ಅವರು ಕೃಷಿಯ ಮಸೂದೆಗಳ ಮೂಲಕ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಿದ್ದಾರೆ, ಹಾಗೂ ರೈತರ ಜೀವನದಲ್ಲಿ ಸಮೃದ್ಧಿಯನ್ನು ತರಲು ಯೋಜನೆಗಳನ್ನು ಪರಿಚಯಿಸಿದ್ದಾರೆ" ಎಂದು ಹೇಳಿದರು.
ಹಾಗೂ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬದ ದಿನದಂದು ರಾಮಲಾ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಮೂಲಕ ರೈತರಿಗೆ ಮತ್ತೊಂದು ಉಡುಗೊರೆಯನ್ನು ನೀಡಿದ್ದಾರೆ.
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ಕೊಡುಗೆ ನೀಡಿ (Contribute now)
Published On: 27 December 2020, 08:13 AM
English Summary: free tractor to farmers
Share your comments