1. ಸುದ್ದಿಗಳು

PM Kisan: ಕೋಟಿಗಟ್ಟಲೇ ರೈತರಿಗೆ ಶಾಕಿಂಗ್ ಸುದ್ದಿ; ಸರ್ಕಾರಿ ವೆಬ್ಸೈಟ್‌ನಿಂದಲೇ ರೈತರ ಆಧಾರ ಮಾಹಿತಿ ಲೀಕ್! ನಿಮ್ಮ ಖಾತೆ ಎಷ್ಟು ಸೇಫ್‌?

Kalmesh T
Kalmesh T
Farmer's Aadhaar card information leak from government website

ಬಹುಪಾಲು ಭಾರತದ ನಾಗರಿಕರ ಮಹತ್ವದ ದಾಖಲೆಯಾಗಿರುವ ಆಧಾರ ಕಾರ್ಡ್ (Aadhaar Card) ಮಾಹಿತಿಗಳು ಸೋರಿಕೆಯಾಗಿವೆ ಎಂದು ಮಾಹಿತಿ ದೊರೆತಿದೆ. ಏನಿದು ತಿಳಿಯಿರಿ

ಇದನ್ನೂ ಓದಿರಿ: ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ..!

ಗುಡ್‌ನ್ಯೂಸ್‌: 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಕೆ ಹೇಗೆ?

ಭಾರತ ಸರ್ಕಾರ ನೀಡುವ ಆಧಾರ್ ಕಾರ್ಡ್ ಜನರ ಬಹುಪಾಲು ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಲೀಕ್ ಆಗಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವೂ ಇದೆ.

ಈ ಸಲ ಸರ್ಕಾರದ ವೆಬ್ಸೈಟ್ನ ಮೂಲಕವೇ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿಗಳು ತಿಳಿದುಬಂದಿವೆ.

ಭದ್ರತಾ ಸಂಶೋಧಕರ ವರದಿಯ ಪ್ರಕಾರ, ದೇಶದ ರೈತರ (Farmer) ಅನುಕೂಲಕ್ಕಾಗಿ ರಚಿಸಲಾದ ಸರ್ಕಾರಿ ವೆಬ್ಸೈಟ್ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ‘ (Pradhan Mantri Kisan Samman Nidhi) ಪೋರ್ಟಲ್ನಿಂದ ಸುಮಾರು 11 ಕೋಟಿ ರೈತರ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಡೇಟಾ ಏನಾದರೂ ಸೈಬರ್ ದರೋಡೆಕೋರರು ಕೈ ಸೇರಿದ್ದಲ್ಲಿ ಅದನ್ನು ಬಳಸಿಕೊಂಡು ಮೋಸ ಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

ಸೋರಿಕೆಯಾದ ವಿವರಗಳು ಯಾವುವು ಗೊತ್ತೆ?

ಭದ್ರತಾ ಸಂಶೋಧಕ ಅತುಲ್ ನಾಯರ್ ಅವರ ಮಾಹಿತಿಯಂತೆ, ‘ಪ್ರಧಾನ ಮಂತ್ರಿ ಕಿಸಾನ್ ಯೋಜನಾ ವೆಬ್ಸೈಟ್‌ನ ಒಂದು ಭಾಗದ ಮೂಲಕ ನೋಂದಾಯಿತ ರೈತರ ಆಧಾರ್ ಸಂಖ್ಯೆಗಳು ಸೋರಿಕೆಯಾಗಿವೆ.

ಪೋರ್ಟಲ್‌ನಲ್ಲಿನ ದೋಷದಿಂದಾಗಿ, ವೆಬ್ಸೈಟ್‌ನ ಒಂದು ಭಾಗವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೋಂದಾಯಿಸಲಾದ ರೈತರ ಆಧಾರ್ ಸಂಖ್ಯೆಯನ್ನು ತೋರಿಸುತ್ತಿದೆ.

ಜನವರಿ ಅಂತ್ಯದಲ್ಲಿ ಈ ಸಮಸ್ಯೆಯನ್ನು ಸಂಶೋಧಕರು ಮೊದಲು ಗಮನಿಸಿದರು ಮತ್ತು ಭಾರತ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೆ ವರದಿ ಮಾಡಲಾಗಿದೆ‘ ಎಂದು ಹೇಳಿದ್ದಾರೆ.

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ

ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಕೂಡಲೇ ಈ ವರದಿಯನ್ನು ನೋಡಲ್ ಏಜೆನ್ಸಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕೆಲವೇ ತಿಂಗಳಲ್ಲಿ ಸಮಸ್ಯೆ ಸರಿಪಡಿಸಲಾಗಿದೆ.

ಜನವರಿಯಲ್ಲಿ ಬಂದ ಈ ಸಮಸ್ಯೆ ಮೇ ಅಂತ್ಯದ ವೇಳೆಗೆ ಸಂಪೂರ್ಣ ನಿವಾರಣೆಯಾಗಿದೆ ಎಂದು ನಾಯರ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. CERT-In ಸಹ ಸಮಯಕ್ಕೆ ಸಮಸ್ಯೆ  ಪರಿಹಾರದಲ್ಲಿ ಸಹಾಯ ಮಾಡಿದ್ದಕ್ಕಾಗಿ ಸಂಶೋಧಕರನ್ನು ಶ್ಲಾಘಿಸಿದ್ದಾರೆ.

11 ಕೋಟಿ ರೈತರ ನೋಂದಣಿ

ರೈತರಿಗೆ ನೇರ ನಗದು ಪ್ರಯೋಜನಗಳನ್ನು ನೀಡಲು ಸರ್ಕಾರವು 2019ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದೆ. ಇದುವರೆಗೆ ಸುಮಾರು 11 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಸರ್ಕಾರಿ ವೆಬ್ಸೈಟ್ನಿಂದ ಆಧಾರ್ ಕಾರ್ಡ್ ವಿವರಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಜಾರ್ಖಂಡ್ ಸರ್ಕಾರದ ಸಾವಿರಾರು ಉದ್ಯೋಗಿಗಳ ಆಧಾರ್ ಡೇಟಾ ಸೋರಿಕೆಯಾಗಿತ್ತು.

Published On: 17 June 2022, 10:39 AM English Summary: Farmer's Aadhaar card information leak from government website

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.