1. ಸುದ್ದಿಗಳು

Fruits Portal: ಹೊಸ ಜಾಲತಾಣದ ಮೂಲಕ ಸುಲಭವಾಗಿ ರೈತರಿಗೆ ದೊರೆಯಲಿದೆ ಕೃಷಿ ಸಾಲ

Maltesh
Maltesh
ಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯವು ರೈತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರೈತರು ಕೃಷಿ ಅಥವಾ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು, ರೇಷ್ಮೆ, ಡೈರಿ, ಪೌಲ್ಟ್ರಿ, ಮೀನುಗಾರಿಕೆ ಮುಂತಾದ ಕೃಷಿ ಹಾಗೂ ಕೃಷಿ ಸಂಬಂಧಿತ ವಿಭಿನ್ನ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಪ್ರತಿಯೊಂದು ಚಟುವಟಿಕೆಗೆ ವಿಶೇಷ ಜ್ಞಾನ ಮತ್ತು ಅನುಭವದ ಅಗತ್ಯತೆ ಇರುತ್ತದೆ. ಆದ್ದರಿಂದ, ರೈತರಿಗೆ ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಲು ಪ್ರತ್ಯೇಕ ಮತ್ತು ನಿರ್ದಿಷ್ಟ ಇಲಾಖೆಗಳನ್ನು ರಾಜ್ಯ ಸರ್ಕಾರವು ಸ್ಥಾಪಿಸಿದೆ. ಪ್ರತ್ಯೇಕ ಇಲಾಖೆಗಳ ಸ್ಥಾಪನೆಯು ಪ್ರತಿಯೊಂದು ಕ್ಷೇತ್ರದ ಕೇಂದ್ರೀಕೃತ ಅಭಿವೃದ್ಧಿಗೆ ಪೂರಕವಾಗುತ್ತದೆ.

ಯಾವುದೇ ರೀತಿಯ ಸಹಾಯ ಮತ್ತು ಅನುಕೂಲಗಳನ್ನು ಪಡೆಯಲು ರೈತರು ಸಂಬಂಧಿತ ಇಲಾಖೆಗಳಿಗೆ ಸಂಪರ್ಕಿಸಬೇಕಾಗುತ್ತದೆ. ಈ ಎಲ್ಲಾ ಇಲಾಖೆಗಳು ವಿವಿಧ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ನೀಡಲು ರೈತರಿಂದ ಅಗತ್ಯ ಮೂಲ ದಾಖಲೆಗಳನ್ನು ಪಡೆಯುವುದು ಸಾಮಾನ್ಯ ಪರಿಪಾಠವಾಗಿದೆ. ರೈತರು ಪ್ರತಿ ವರ್ಷ ವಿವಿಧ ಇಲಾಖೆಗಳಿಗೆ ಒಂದೇ ರೀತಿಯ ದಾಖಲೆಗಳನ್ನು ಸಲ್ಲಿಸುತ್ತಾರೆ ಹಾಗೂ ಕೆಲವೊಮ್ಮೆ ಒಂದೇ ಇಲಾಖೆಯಲ್ಲಿ ಪ್ರತಿ ಯೋಜನೆಗೆ ಪ್ರತ್ಯೇಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ಮೀನುಗಾರರಿಗೆ ಆರ್ಥಿಕ ನೆರವು ನೀಡಲಾಗುವುದು- ಸಚಿವ ಎಸ್. ಅಂಗಾರ

ಆಯೋಜಿತ ಮತ್ತು ಪರೀಕ್ಷಿತ ರೈತ ದತ್ತಾಂಶವು ರೈತರು ಪ್ರಯೋಜನಗಳನ್ನು ಪಡೆಯಲು ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ. ಇದಲ್ಲದೆ ಇಲಾಖೆಗಳು ಸಾಂಪ್ರದಾಯಿಕ ಪದ್ಧತಿ ಮೂಲಕ ಯೋಜನಾ ಅನುಷ್ಠಾನಗೊಳಿಸುವಾಗ ಎದುರಾಗುವ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತವೆ. ಈ ನಿಟ್ಟಿನಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು NIC ಸಹಯೋಗದೊಂದಿಗೆ  FRUITS(Farmer Registration and Unified beneficiary InformaTion System FRUITS) ಎಂಬ ಸಾಫ್ಟ್ವೇರ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.

ಗುಡ್ ನ್ಯೂಸ್! e-Shram Portalನಲ್ಲಿ ನೋದಾಯಿಸಿಕೊಳ್ಳಿ ಮತ್ತು ಉದ್ಯೋಗ ಪಡೆಯಿರಿ!

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಬ್ಯಾಂಕಿಂಗ್‌ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಎಲ್ಲ ರೀತಿಯ ಕೃಷಿ ಸಾಲ ವಿತರಣೆಗೆ FRUITS BANK ಪೋರ್ಟಲ್‌ ಅಭಿವೃದ್ಧಿ ಪಡಿಸಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಈಗಾಗಲೇ ಈ ಸೇವೆ ಆರಂಭಿಸಲಾಗಿದ್ದು, ಸಹಕಾರಿ ಕ್ಷೇತ್ರದ ಪ್ರತಿ ಬ್ಯಾಂಕ್‌ಗಳಲ್ಲಿ ಹೊಸ ಪೋರ್ಟಲ್‌ಗಾಗಿ ಯುಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಸೃಷ್ಟಿಸುವ ಕಾರ್ಯ ಪ್ರಗತಿಯಲ್ಲಿದೆ. DPAR e ಸರ್ಕಾರಿ ಪೋರ್ಟಲ್ NIC ಸಹಯೋಗದೊಂದಿಗೆ fruits.karnataka.gov.in ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. FRUITS ಯೋಜನೆಯ ಮೂಲಕ, ರೈತರು ತಮ್ಮ ದಾಖಲೆಗಳನ್ನು ಸಲ್ಲಿಸಲು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಓಡುವುದಕ್ಕಿಂತ ಹೆಚ್ಚಾಗಿ ತಮ್ಮ ಸಮಯವನ್ನು ಉಳಿಸಲು ಮತ್ತು ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
ಪಾಲುದಾರ /ಸಂಬಂಧಿತ ಇಲಾಖೆಗಳು

ಕೃಷಿ

ತೋಟಗಾರಿಕೆ

ರೇಷ್ಮೆ ಕೃಷಿ

ಪ್ರಾಣಿ ಸಂಗೋಪನೆ ಮತ್ತು ಪಶುವೈದ್ಯ ವಿಜ್ಞಾನ

ಮೀನುಗಾರಿಕೆ

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

Published On: 22 April 2022, 10:28 AM English Summary: Farmer Registration and Unified beneficiary InformaTion System FRUITS

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.