1. ಸುದ್ದಿಗಳು

Fake News Alert ಸೋಷಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಶೇರ್‌ ಮಾಡುವಂತಿಲ್ಲ; ಸರ್ಕಾರ ಹೇಳಿದ್ದೇನು ?

Hitesh
Hitesh
Fake News Alert What did the government say about fake news, how to detect it?

ಇಂದು ಎಲ್ಲರ ಕೈಯಲ್ಲೂ ಮೊಬೈಲ್‌ ಇದೆ. ಯಾವ ಮುಖ್ಯ ವಿಷಯವನ್ನೂದಾರೂ ಕ್ಷಣಾರ್ಧದದಲ್ಲಿ ಸಾವಿರಾರು ಜನರಿಗೆ ಮುಟ್ಟಿಸಬಹುದು.

ಯಾವ ಸುದ್ದಿಯನ್ನಾದರೂ ಎಂದ ಮೇಲೆ ಅದು ಸುಳ್ಳು ಸುದ್ದಿಯನ್ನಾದರೂ, ಇದೇ ಈಗ ಸವಾಲಾಗಿರುವುದು.

ಫೇಕ್‌ನ್ಯೂಸ್‌ ಹಾಗೂ ಸರ್ಕಾರದ ಎಚ್ಚರಿಕೆಯ ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ:  ಸುಳ್ಳು ಸುದ್ದಿ ಅವಾಂತರ, ಅದನ್ನು ಪತ್ತೆ ಹಚ್ಚುವುದೇಗೆ, ಸರ್ಕಾರ ಹೇಳಿದ್ದೇನು ? Fake News Alert| Cm Siddaramaiah

ಈ ನಡುವೆ ರಾಜ್ಯ ಸರ್ಕಾರ ಫೇಕ್‌ನ್ಯೂಸ್‌ಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ. ಸುಳ್ಳು ಸುದ್ದಿಗಳ ಹವಾಂತರಗಳೇನು,

ನೀವು ಹೇಗೆ ಅದನ್ನು ಪತ್ತೆ ಮಾಡಬಹುದು, ಸರ್ಕಾರ ಹೇಳಿದ್ದೇನು ಎನ್ನುವುದನ್ನು ಇಲ್ಲಿ ಸಮಗ್ರವಾಗಿ ವಿವರಿಸಲಾಗಿದೆ.  

ಜಗತ್ತಿನಲ್ಲಿ ಇದು ಸುದ್ದಿಗಳ ಮಹಾಪೂರವೇ ಹರಿಯುತ್ತಿದೆ. ಇತಿಹಾಸದಲ್ಲಿ ಕಂಡುಕೇಳರಿಯದಷ್ಟು ವಿಷಯಗಳು ನಮ್ಮನ್ನು ತಲುಪುತ್ತಿವೆ.

ಆದರೆ, ಇದೇ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು ಸಹ. ಈಚಿನ ವರ್ಷಗಳಲ್ಲಿ ಸುಳ್ಳು ಸುದ್ದಿಗಳು ಸೃಷ್ಟಿಸುತ್ತಿರುವ ಹವಾಂತರಗಳು ಅಷ್ಟಿಷ್ಟಲ್ಲ.

ಫೇಕ್‌ ನ್ಯೂಸ್‌ ಗಳಿಂದಲೇ ಸಾವುಗಳು ಸಹ ಸಂಭವಿಸಿದ ಉದಾಹರಣೆಯೂ ನಮ್ಮ ಮುಂದಿದೆ.

ಫೇಕ್‌ನ್ಯೂಸ್‌ಗಳಿಂದ ಕೊಲೆಗಳು ನಡೆಯುತ್ತಿವೆ ಎಂದರೆ ಅದರ ತೀವ್ರತೆ ನಿಮಗೆ ಅರ್ಥವಾಗಿರಬಹುದು.

ಮಕ್ಕಳ ಕಳ್ಳರು ಬರುತ್ತಿದ್ದಾರೆ, ಗೋಮಾಂಸ ಸಾಗಿಸುವವರು ಎನ್ನುವುದು ಈಚಿನ ವರ್ಷಗಳಲ್ಲಿ ಹಬ್ಬಿದ ಬಹುದೊಡ್ಡ ಫೇಕ್‌ಸುದ್ದಿಗಳು

ಇದರಿಂದ ಹಲವು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇದಾದ ನಂತರದಲ್ಲಿ ಕೋವಿಡ್‌ ಸಂದರ್ಭದಲ್ಲಿ ನಡೆದ ಫೇಕ್‌ನ್ಯೂಸ್‌ಗಳ ಹಾವಳಿಯೂ ಅಷ್ಟಿಷ್ಟಲ್ಲ.

ವಿಮಾನದಲ್ಲಿ ಔಷಧಿ ಸಿಂಪಡಿಸುತ್ತಾರೆ, ದುಡ್ಡು ಹಾಕುತ್ತಾರೆ ಎನ್ನುವುದರಿಂದ ಊಹೆಗೂ ನಿಲುಕದ ಫೇಕ್‌ನ್ಯೂಸ್‌ಗಳು ಬಂದಿದ್ದವು.

ಇನ್ನು 2000 ಸಾವಿರ ರೂಪಾಯಿಯಲ್ಲಿ ಚಿಪ್‌ ಇದೆ ಎನ್ನುವ ನ್ಯೂಸ್‌ ಅಂತು ನೀವು ಕೇಳಿಯೇ ಇರುತ್ತೀರ.

ಈಚೆಗೆ ತಾಜಾ ಉದಾಹರಣೆಯಂತೆ ಮಹಿಳೆಯರು ಬಸ್‌ ಡೋರ್‌ ಕಿತ್ತರು ಎನ್ನುವುದು.

ಫೇಕ್‌ನ್ಯೂಸ್‌ಗಳು ಹೇಗಿರುತ್ತವೆ ?

ಈಗೆಲ್ಲ ಫೇಕ್‌ನ್ಯೂಸ್‌ಗಳನ್ನು ಪತ್ತೆ ಹಚ್ಚುವುದೇ ಬಹುದೊಡ್ಡ ಸವಾಲು. ಆದರೆ, ಕಷ್ಟವೇನಲ್ಲ. ಬಹುತೇಕ ಫೇಕ್‌ನ್ಯೂಸ್‌ಗಳು ಈ ರೀತಿ ಇರುತ್ತವೆ.

ನಕಲಿ ವೆಬ್‌ಸೈಟ್‌ನ ಮೂಲಕ ಪ್ರಕಟವಾಗುವುದು, ಒಂದು ಸಂಶೋಧನೆಯ ಪ್ರಕಾರ ಎನ್ನುವ ವಾಕ್ಯದೊಂದಿಗೆ ಅಥವಾ ಸೆಳೆಯುವಂತೆಯೂ,

ಪ್ರಚೋದನೆಗೆ ಒಳಪಡಿಸುವಂತೆಯೂ, ಧಾರ್ಮಿಕ  ಭಾವನೆ ಕೆರಳಿಸವಂತೆ, ಕೋಪ ಹಾಗೂ ಭಯವನ್ನು ಸೃಷ್ಟಿಸುವ ವಿಷಯದ ಮೇಲೆಯೇ

ಫೇಕ್‌ನ್ಯೂಸ್‌ ಸೃಷ್ಟಿಯಾಗುತ್ತವೆ. ಅಲ್ಲದೇ ಕೆಲವು ಟ್ರೋಲ್‌ಗಳ ಮೂಲಕವೂ ಫೇಕ್‌ನ್ಯೂಸ್‌ ಹಬ್ಬುತ್ತದೆ.

ನಕಲಿ ಸುದ್ದಿಗಳನ್ನು ಗುರುತಿಸುವುದು ಹೇಗೆ

ನೀವು ನಿಯಮಿತವಾಗಿ ಪತ್ರಿಕೆಗಳನ್ನು ಓದುತ್ತಿದ್ದರೆ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಸುಳ್ಳು ಸುದ್ದಿಗಳ ಒಂದು ಅಂದಾಜು ಸಿಗುತ್ತದೆ.

ಇದರ ಹೊರತಾಗಿ ನಕಲಿ ಸುದ್ದಿಗಳನ್ನು ಈ ಐದು ಅಂಶಗಳ ಮೂಲಕ ಪತ್ತೆ ಮಾಡಬಹುದಾಗಿದೆ. 

1.ಸುದ್ದಿಯ ಮೂಲವನ್ನು ಪರಿಶೀಲಿಸಿ
2. ಇತರ ಮೂಲಗಳನ್ನು ಪರಿಶೀಲಿಸಿ
3. ವಿಮರ್ಶಾತ್ಮಕ ಮನಸ್ಥಿತಿ ಇರಲಿ
4. ಸತ್ಯ ಪರಿಶೀಲಿಸಿ
5. ಚಿತ್ರಗಳನ್ನು ಪರಿಶೀಲಿಸಿ

ಯಾವುದೇ ಸುದ್ದಿ ಹಂಚಿಕೊಳ್ಳುವ ಮೊದಲು ಅದರ ಮೂಲ ಅಂದರೆ ಎಲ್ಲಿಂದ ಪ್ರಕಟವಾಗಿದೆ ಅಥವಾ ಶೇರ್‌ ಆಗಿದೆ ಎನ್ನುವುದನ್ನು ನೋಡಿ.

ಯಾರು ಹೇಳಿದ್ದಾರೆ ಅಥವಾ ಬರೆದಿದ್ದಾರೆ ನೋಡಿ,

ಇತರ ಮೂಲಗಳನ್ನು ಪರಿಶೀಲಿಸಿ: ಯಾವುದೇ ಸುದ್ದಿಯಲ್ಲಿ ಅನುಮಾನ ಬಂದರೆ,

ಇದೇ ಸುದ್ದಿಯನ್ನು ಬೇರೆಯ ಪತ್ರಿಕೆ ಅಥವಾ ವೆಬ್‌ಸೈಟ್‌ಗಳು ಹೇಗೆ ವರದಿ ಮಾಡಿದೆ ಎನ್ನುವುದನ್ನು ನೋಡಿ.

ವಿಮರ್ಶಾತ್ಮಕ ಮನಸ್ಥಿತಿ ಕಾಪಾಡಿಕೊಳ್ಳಿ: ಭಯ ಅಥವಾ ಕೋಪದಂತಹ ಬಲವಾದ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸಲು

ಬಹಳಷ್ಟು ನಕಲಿ ಸುದ್ದಿಗಳನ್ನು ಬುದ್ಧಿವಂತಿಕೆಯಿಂದ ಬರೆಯಲಾಗುತ್ತದೆ.

ನಿಮ್ಮನ್ನು ಕೇಳುವ ಮೂಲಕ ವಿಮರ್ಶಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ.

ಸತ್ಯ ಪರಿಶೀಲಿಸಿ: ನಂಬಲರ್ಹ ಸುದ್ದಿಗಳು ಸಾಕಷ್ಟು ಸಂಗತಿಗಳನ್ನು ಒಳಗೊಂಡಿರುತ್ತದೆ.

ಉದಾ ಡೇಟಾ, ಅಂಕಿಅಂಶಗಳು, ತಜ್ಞರಿಂದ ಉಲ್ಲೇಖಗಳು, ಇತ್ಯಾದಿ.

ಇವುಗಳು ಕಾಣೆಯಾಗಿದ್ದರೆ, ಏಕೆ ಎಂದು ಪ್ರಶ್ನಿಸಿ. ತಪ್ಪು ಮಾಹಿತಿಯೊಂದಿಗಿನ ವರದಿಗಳು ಸಾಮಾನ್ಯವಾಗಿ ತಪ್ಪಾದ ದಿನಾಂಕಗಳು

ಅಥವಾ ಬದಲಾದ ಟೈಮ್‌ಲೈನ್‌ಗಳನ್ನು ಒಳಗೊಂಡಿರುತ್ತವೆ.

ಆದ್ದರಿಂದ ಲೇಖನವನ್ನು ಯಾವಾಗ ಪ್ರಕಟಿಸಲಾಗಿದೆ ಎಂಬುದನ್ನು ಪರಿಶೀಲಿಸುವುದು ಉತ್ತಮ.

ಚಿತ್ರಗಳ ಅಧಿಕೃತೆಯ ಬಗ್ಗೆ ಪರಿಶೀಲಿಸಿ: ಚಿತ್ರವು ಎಲ್ಲಿಂದ ಬಂದಿದೆ ಮತ್ತು ಅದನ್ನು ತಿರುಚಲಾಗಿದೆಯೇ ಎಂದು ಪರಿಶೀಲಿಸಲು

ನೀವು Google ನ ರಿವರ್ಸ್ ಇಮೇಜ್ ಹುಡುಕಾಟದಂತಹ ಸಾಧನಗಳನ್ನು ಬಳಸಬಹುದು.

ಫ್ಯಾಕ್ಟ್‌ ಚೆಕ್‌ ಅಥವಾ ಸುಳ್ಳುಸುದ್ದಿಗಳ ಪತ್ತೆಗೆ ಈ ವೆಬ್‌ಸೈಟ್‌ಗಳನ್ನು ಬಳಸಬಹುದು.   

ರಾಜ್ಯದಲ್ಲಿ ಪ್ರಮುಖವಾಗಿ ಕರ್ನಾಟಕ ಸ್ಟೇಟ್‌ ಪೊಲೀಸ್‌ ಫ್ಯಾಕ್ಟ್‌ ಚೆಕ್‌ ಇದೆ. ಇದರಲ್ಲಿ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಸಲಾಗುತ್ತಿದೆ. ಅಲ್ಲದೇ  

https://factcheck.ksp.gov.in/

PIBFactCheck
Snopes
PolitiFact
Fact Check

BBC Reality Check ನಂತಹ ವೆಬ್‌ಸೈಟ್‌ಗಳ ಮೂಲಕ ನೀವು ಸುದ್ದಿಯ ನಿಖರತೆಯನ್ನು ಪರಿಶೀಲಿಸಬಹುದು.

ಅಲ್ಲದೇ ಸರ್ಕಾರದ ಅಧಿಕೃತ ಖಾತೆ, ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ಗಳನ್ನೂ ನೀವು ಪರಿಶೀಲಿಸಬಹುದು.

Fact Check websites / ಸುಳ್ಳು ಸುದ್ದಿ ಪತ್ತೆಗೆ ಇರುವ ಪ್ರಮುಖ ವೆಬ್‌ಸೈಟ್ಸ್‌ಗಳು

https://factcheck.ksp.gov.in/

https://pib.gov.in/factcheck.aspx

https://www.snopes.com/

https://www.politifact.com/

https://toolbox.google.com/factcheck/...

https://www.bbc.com/news/reality_check 

Fake News Alert What did the government say about fake news, how to detect it?

ಫೇಕ್‌ನ್ಯೂಸ್‌ಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ

ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹಾವಳಿ ಮಿತಿ ಮೀರಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಫೇಕ್‌ನ್ಯೂಸ್‌ಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುತ್ತಿರುವವರನ್ನು

ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು.  ಆರಂಭದಲ್ಲೇ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಬೇರು ಸಮೇತ ಕತ್ತರಿಸುವ ಬಗ್ಗೆ

ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.

ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲೇ  ತಾಂತ್ರಿಕ ತಂಡ ಫೇಕ್ ನ್ಯೂಸ್‌ಗಳನ್ನು ಪತ್ತೆ ಹಚ್ಚಿ,

ಫ್ಯಾಕ್ಟ್ ಚೆಕ್ ಮಾಡಿ ಜನರನ್ನು ಎಚ್ಚರಿಸುವ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಿತ್ತು. ಇದನ್ನು ಮತ್ತೆ ಆರಂಭಿಸಬೇಕು.

ಸೈಬರ್ ಪೊಲೀಸರು ಫೇಕ್ ನ್ಯೂಸ್‌ಗಳ ಮೂಲಗಳನ್ನು ಪತ್ತೆಹಚ್ಚಲು ಸರ್ವಸನ್ನದ್ಧ ವಾಗಿ ಕೆಲಸ ಮಾಡಬೇಕು.

ಪ್ರತೀ ತಿಂಗಳು ಈ ಬಗ್ಗೆ ವರದಿಯನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಫೇಕ್‌ನ್ಯೂಸ್‌ ಹಾಗೂ ಸರ್ಕಾರದ ಎಚ್ಚರಿಕೆಯ ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ:  

ಸುಳ್ಳು ಸುದ್ದಿ ಅವಾಂತರ, ಅದನ್ನು ಪತ್ತೆ ಹಚ್ಚುವುದೇಗೆ, ಸರ್ಕಾರ ಹೇಳಿದ್ದೇನು ? Fake News Alert| Cm Siddaramaiah

Published On: 23 June 2023, 12:48 PM English Summary: Fake News Alert What did the government say about fake news, how to detect it?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.