1. ಸುದ್ದಿಗಳು

ʻವಾಟರ್ ಬೆಲ್ʼ ’ ಯೋಜನೆ ಮರುಜಾರಿಗೆ ಮಾಜಿ ಸಚಿವ  S  ಸುರೇಶ್‌ ಕುಮಾರ್‌ ಆಗ್ರಹ

Maltesh
Maltesh
Discussion ABout re-implementation of ``Water Bell'' scheme

ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ’ವಾಟರ್ ಬೆಲ್’ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು,   ಶಾಲಾ ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆ ನಿವಾರಿಸುವ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಪತ್ರದಲ್ಲೇನಿದೆ..?

ಕೇರಳ ಸರ್ಕಾರವು ಆ ರಾಜ್ಯದ ಶಾಲೆಗಳಲ್ಲಿ “ವಾಟರ್ ಬೆಲ್” ಎನ್ನುವ ಪರಿಕಲ್ಪನೆಯನ್ನು ಮರುಜಾರಿಗೊಳಿಸಿದೆ ಎನ್ನುವ ಮಾಧ್ಯಮ ವರದಿಗಳನ್ನು ಗಮನಿಸಿದ್ದೇನೆ.

ಇದು ನಮ್ಮ ವಿದ್ಯಾರ್ಥಿಗಳ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸರ್ಕಾರಿ ಶಾಲೆಗಳ ಮಕ್ಕಳ ಉತ್ತಮ ಆರೋಗ್ಯದ ದೃಷ್ಟಿಯಿಂದ ನಮ್ಮ ಸರ್ಕಾರವು ಆದ್ಯತೆಯ ಕ್ರಮವಾಗಿ ಕಾಣಬೇಕಾದ ವಿಷಯವಾಗಿದೆ.

ಈ ಪ್ರಯೋಗವನ್ನು ನಾನು 2019 ರಲ್ಲಿ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿಯೇ ಕೈಗೊಂಡಿದ್ದೆ. ಶಾಲಾ ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆಗಳು (ನೀರು ಕುಡಿಯದೆ ಆಗುವ ಪರಿಣಾಮ) ಅವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಷಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳ ಮೇಲೆ ಈ ನಿರ್ಜಲೀಕರಣದ ಪರಿಣಾಮಗಳನ್ನು ಕಡಿಮೆ ಮಾಡಬೇಕಾದರೆ ಸರ್ಕಾರದ ಹೆಚ್ಚಿನ ಮುತುವರ್ಜಿ ಅವಶ್ಯಕವೆಂದು ಭಾವಿಸಿ ಪ್ರತಿಯೊಂದು ಶಾಲೆಯಲ್ಲಿ ನಿಗದಿತ ಅವಧಿಗೆ ಮಕ್ಕಳು ನೀರು ಕುಡಿಯುವುದನ್ನು ನೆನಪಿಸಲು “ವಾಟರ್ ಬೆಲ್” ಮೊಳಗಿಸಬೇಕೆಂದು ಎಲ್ಲ ಶಾಲೆಗಳಿಗೆ ಸುತ್ತೋಲೆ ನೀಡಲಾಗಿತ್ತು.

1) ಈ ಕಾರ್ಯಕ್ರಮ ಪ್ರಸ್ತುತ ಎಷ್ಟು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ ಎನ್ನುವ ಕುರಿತು ತಾವು ಇನ್ನೊಮ್ಮೆ ಸುದೀರ್ಘ ಪರಾಮರ್ಶೆಯನ್ನು ಕೈಗೊಳ್ಳಬೇಕಾಗಿ ಈ ಮೂಲಕ ಕೋರುತ್ತೇನೆ.

2) ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕುರಿತಂತೆ ತಾಲ್ಲೂಕು ಜಿಲ್ಲಾ ಹಂತದಲ್ಲಿ ಸಿಆರ್‌ಪಿ-ಬಿಆರ್‌ಪಿಗಳ ಮೂಲಕ ಮೌಲ್ಯಮಾಪನ ಮಾಡಿಸುವುದು, ನ್ಯೂನ್ಯತೆಗಳನ್ನು ಸರಿಪಡಿಸುವುದು, ಉತ್ತಮವಾಗಿ ಅನುಷ್ಠಾನಗೊಳಿಸಿರುವ ಶಾಲಾ ಮುಖ್ಯಸ್ಥರನ್ನು ಅಭಿನಂದಿಸುವುದು-ಈ ರೀತಿಯ ಕೆಲಸಗಳಾದಲ್ಲಿ ಮಕ್ಕಳ ಪರವಾದ ಈ ಕಾರ್ಯಕ್ರಮವು ಇನ್ನಷ್ಟು ಯಶಸ್ವಿಯಾಗಬಹುದು.

3) ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಸೌಕರ್ಯಗಳಿಲ್ಲದ ಕಡೆ ಶಿಕ್ಷಣ ಇಲಾಖೆಯು ಆಡಿಟ್ ಕೈಗೊಂಡು ಸಮಸ್ಯೆಯಿರುವ ಶಾಲೆಗಳಲ್ಲಿ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ರೂಪಿಸಬೇಕಾದ ಅವಶ್ಯಕತೆ ಇದೆ.

4) ಸಂಬಂಧಪಟ್ಟ ಶಾಲಾ ಮುಖ್ಯಸ್ಥರು, ಸ್ಥಳೀಯ ಸಿ.ಆರ್.ಪಿ. ಉತ್ತರದಾಯಿತ್ವವನ್ನು ಹೆಚ್ಚಿಸುವ ಮೂಲಕ, ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಮಟ್ಟದಲ್ಲಿ ಮಕ್ಕಳ ಆರೋಗ್ಯ ತಪಾಸಣೆಗಳನ್ನು ಕೈಗೊಂಡು ಪರಿಹಾರ ಕ್ರಮಗಳಿಗೆ ಮುಂದಾಗುವ ಮೂಲಕ ಈ ಕಾರ್ಯಕ್ರಮವನ್ನು ಇನ್ನಷ್ಟು ಸಮಗ್ರ ಹಾಗೂ ಪರಿಣಾಮಕಾರಿಯಾಗಿಸಬಹುದು.

ಈ ನಿಟ್ಟಿನಲ್ಲಿ ತಾವು ಆಲೋಚಿಸಿ, ನಮ್ಮ ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ, “ವಾಟರ್ ಬೆಲ್” ಯೋಜನೆಯನ್ನು ಸಮರ್ಥವಾಗಿ ಸಮಗ್ರವಾಗಿ ಮರು ಜಾರಿಗೊಳಿಸಬೇಕಾಗಿ ಕೋರುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ..

Published On: 17 August 2023, 04:43 PM English Summary: Discussion ABout re-implementation of ``Water Bell'' scheme

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.