1. ಸುದ್ದಿಗಳು

ಅಡಿಕೆ ರೋಗ ನಿಯಂತ್ರಣಕ್ಕೆ 15 ಕೋಟಿ ರೂಪಾಯಿ ಬೇಡಿಕೆ: ಸಚಿವ ಮುನಿರತ್ನ

Hitesh
Hitesh
Minister Muniratna

ರಾಜ್ಯದ ಏಳು ಜಿಲ್ಲೆಗಳಲ್ಲಿ ಅಡಿಕೆ ಮರಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಅಡಿಕೆ ಬೆಳೆಗಾರರಿಗೆ ಉಚಿತವಾಗಿ ಏಣಿ, ದೋಟಿ ವಿತರಿಸಲು ಹಾಗೂ ರಾಸಾಯನಿಕ ಸಿಂಪಡಿಸಲು 15 ಕೋಟಿ ಒದಗಿಸುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಚಿವ ಎನ್‌. ಮುನಿರತ್ನ ತಿಳಿಸಿದರು.  

ರಾಜ್ಯದಲ್ಲಿ ಆನೆ- ಮಾನವ ಸಂಘರ್ಷ: ಪರಿಹಾರ ಮೊತ್ತ ಎರಡು ಪಟ್ಟು ಹೆಚ್ಚಳ!

ಅಡಿಕೆ ರೋಗವನ್ನು ತಡೆಯುವ ಉದ್ದೇಶದಿಂದ ಅಡಿಕೆ ಮರಗಳ ಒಣಗಿದ ಸೋಗೆಗಳನ್ನು  ಕತ್ತರಿಸಿ, ರಾಸಾಯನಿಕ ಸಿಂಪಡಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.  

ಎಲೆಚುಕ್ಕಿ ರೋಗವು ಕೊಲೆಟೋಟ್ರೈಕಂ ಗ್ಲಿಯೋಸ್ಪೊಯಿರೈಡಿಸ್‌ ಶಿಲೀಂಧ್ರದಿಂದ ಬರುತ್ತದೆ. ರೋಗಬಾಧಿತ ಸೋಗೆಗಳ (ಎಲೆ) ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆಗಳು ಕಾಣಿಸುತ್ತವೆ. ರೋಗಪೀಡಿತ ಸೋಗೆಗಳನ್ನು ಸಮಗ್ರವಾಗಿ ಕತ್ತರಿಸಿ ತೆಗೆದು ಬೆಂಕಿಯಲ್ಲಿ ಸುಟ್ಟು ನಾಶಪಡಿಸಿ ರೋಗ ನಿಯಂತ್ರಿಸಬಹುದು ಎಂದು ರೈತರೊಬ್ಬರು ಸಲಹೆ ನೀಡಿದ್ದಾರೆ.  

ಮಾಂಡೌಸ್‌ ಚಂಡಮಾರುತ ಪ್ರಭಾವ: ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

ಇದು ವಿಜ್ಞಾನಿಗಳ ಸಲಹೆಯಲ್ಲ. ರೋಗ ನಿಯಂತ್ರಣಕ್ಕೆ ಇದು ನೆರವಾಗಬಹುದು ಎಂದು ತಿಳಿದ ಹಿನ್ನೆಲೆಯಲ್ಲಿ ಇದನ್ನು ರಾಜ್ಯದಾದ್ಯಂತ ಜಾರಿಗಳಿಸಲಿದ್ದೇವೆ ಎಂದರು.

ಅಲ್ಲದೇ ರಾಜ್ಯದಲ್ಲಿ ಒಟ್ಟು 42,504 ಹೆಕ್ಟೇರ್‌ ಪ್ರದೇಶದ ಅಡಿಕೆ ಬೆಳೆ ಎಲೆ ಚುಕ್ಕಿ ರೋಗಬಾಧೆ ಎದುರಾಗಿದೆ. ಪ್ರತಿ ಗ್ರಾಮದಲ್ಲಿ ಯಾವ ರೈತರು ಎಷ್ಟು ಜಾಗದಲ್ಲಿ ಅಡಿಕೆ ಬೆಳೆಯುತ್ತಾರೆ.

ಅವರಿಗೆ ಪೂರೈಸಲು ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಅವಶ್ಯವಿದೆ ಎನ್ನುವುದರ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

ರೈತರಿಗೆ ದೋಟಿ, ಏಣಿಯನ್ನು ಉಚಿತವಾಗಿ ನೀಡಲಾಗುವುದು. ರಾಸಾಯನಿಕ ಸಿಂಪಡಣೆಗೆ ಇಲಾಖೆಯೇ ಏಜೆನ್ಸಿಯನ್ನು ನೇಮಿಸಲಿದೆ. ರೈತರು ತಮ್ಮ ತೋಟಗಳಿಗೆ ಅವರಿಂದಲೇ ಔಷಧಿ ಸಿಂಪಡಿಸಬೇಕು ಎಂದರು. 

 ಅಲ್ಲದೇ ರೋಗ ನಿಯಂತ್ರಣಕ್ಕೆ ಶಾಶ್ವತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳಿಂದಲೂ ಸಲಹೆ ಕೇಳಿದ್ದೇವೆ. ನಾನು ಅಧಿಕಾರಿಗಳ ಜೊತೆ ಇಸ್ರೇಲ್‌ ಪ್ರವಾಸವನ್ನು ಮುಂದಿನ ತಿಂಗಳು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರದೇಶ ರೋಗ ಬಾಧೆಗೆ ಒಳಗಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ (700 ಹೆಕ್ಟೇರ್‌) ಎಲೆಚುಕ್ಕಿ ರೋಗ ಬಾಧೆ ಕಾಣಿಸಿಕೊಂಡಿದೆ.

ಸುಳ್ಯ ತಾಲ್ಲೂಕಿನಲ್ಲಿ 200 ಹೆಕ್ಟೇರ್‌, ಪುತ್ತೂರು ತಾಲ್ಲೂಕಿನಲ್ಲಿ 100 ಹೆಕ್ಟೇರ್‌, ಬಂಟ್ವಾಳದಲ್ಲಿ 90 ಹೆಕ್ಟೇರ್‌ ಹಾಗೂ ಮಂಗಳೂರು ತಾಲ್ಲೂಕಿನಲ್ಲಿ 10 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಮರಗಳು ಈ ರೋಗಬಾಧೆಗೆ ಒಳಗಾಗಿವೆ ಎಂದು ಅವರು ವಿವರಿಸಿದರು.  

PmKisan | ಪಿ.ಎಂ ಕಿಸಾನ್‌ ಸಮ್ಮಾನ್‌ 13ನೇ ಕಂತಿನ ಹಣಕ್ಕೆ ಕ್ಷಣಗಣನೆ! 

Published On: 12 December 2022, 05:12 PM English Summary: Demand 15 crore rupees for control of groundnut disease: Minister Muniratna

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.