ಅಡುಗೆ ಎಣ್ಣೆಗಳ ಬೆಲೆಗಳನ್ನು ಇಳಿಕೆ ಮಾಡಲು ಮುಂದಾಗಿರುವ ಕೇಂದ್ರ ಸರಕಾರ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದೆ.
ಇದನ್ನೂ ಓದಿರಿ: ಈರುಳ್ಳಿ ಬೆಲೆ ಕುಸಿತ; ಕೆ.ಜಿ ಈರುಳ್ಳಿಗೆ 3 ರೂಪಾಯಿ! ಕಂಗಾಲಾದ ರೈತರು
Shocking News: Fix Deposit ಇಟ್ಟಿದ್ದ 1 ಕೋಟಿ ಹಣವನ್ನ IPL ಬೆಟ್ಟಿಂಗ್‌ಗೆ ಬಳಸಿದ ಪೋಸ್ಟ್ ಮಾಸ್ಟರ್!
ದೇಶೀಯ ಮಟ್ಟದಲ್ಲಿ ಗಗನಕ್ಕೇರಿರುವ ಅಡುಗೆ ಎಣ್ಣೆಗಳ ಬೆಲೆಗಳನ್ನು ಇಳಿಕೆ ಮಾಡುವ ಉದ್ದೇಶದಿಂದ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಸರಕಾರ ಕಡಿತಗೊಳಿಸಿದೆ.
ಇದರಿಂದ ಕೈಗೆಟುಕದಾಗಿರುವ ಖಾದ್ಯ ತೈಲ ಬೆಲೆ ಒಂದಿಷ್ಟು ಇಳಿಕೆಯಾಗುವ ಆಶಾಭಾವನೆ ಹುಟ್ಟಿಕೊಂಡಿದೆ.
ವಾರ್ಷಿಕ 20 ಲಕ್ಷ ಟನ್ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದಿನ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ಗೆ ವಿನಾಯಿತಿ ನೀಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!
Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?
"ಕಚ್ಛಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗಳ ಮೇಲೆ ವರ್ಷಕ್ಕೆ 20 ಲಕ್ಷ ಟನ್ ಸುಂಕ ರಹಿತ ಆಮದು ನಿಯಮವು 2022-23 ಹಾಗೂ 2023-24ನೇ ಅರ್ಥಿಕ ವರ್ಷಗಳಿಗೆ ಅನ್ವಯಿಸುತ್ತದೆ," ಎಂದು ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ.
ವಿನಾಯಿತಿಯು ದೇಶೀಯ ಬೆಲೆಗಳು ಇಳಿಕೆಯಾಗಲು ಹಾಗೂ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡಲಿವೆ. "ಇದು ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ," ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು ಟ್ವೀಟ್ ಮಾಡಿದೆ.
ಏರಿಕೆಯಾಗುತ್ತಲೇ ಇರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಕಳೆದ ವಾರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!
ಹಾಗೂ ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮದಲ್ಲಿ ಬಳಸುವ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನೂ ಮನ್ನಾ ಮಾಡಿತ್ತು. ಇದಲ್ಲದೆ, ಕಬ್ಬಿಣದ ಅದಿರು ಮತ್ತು ಕಬ್ಬಿಣದ ಉಂಡೆಗಳ ಮೇಲಿನ ರಫ್ತಿನ ಮೇಲಿನ ಸುಂಕವನ್ನೂ ಹೆಚ್ಚಿಸಿತ್ತು.
ಇದಲ್ಲದೆ ಗೋಧಿ ರಫ್ತಿಗೆ ನಿರ್ಬಂಧ ಹೇರಿರುವ ಸರಕಾರ ಮಂಗಳವಾರ ಸಕ್ಕರೆ ರಫ್ತಿನ ಮೇಲೆಯೂ ನಿರ್ಬಂಧ ವಿಧಿಸಿದೆ. ಈ ಮೂಲಕ ಹಣದುಬ್ಬರ ತಗ್ಗಿಸಲು ಸರ್ಕಸ್ ಮಾಡುತ್ತಿದೆ.
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!
ಇಂಧನದಿಂದ ತರಕಾರಿ, ಅಡುಗೆ ಎಣ್ಣೆಯವರೆಗಿನ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಏಪ್ರಿಲ್ ತಿಂಗಳ ಡಬ್ಲ್ಯೂಪಿಐ ಅಥವಾ ಸಗಟು ಬೆಲೆ ಹಣದುಬ್ಬರವು ದಾಖಲೆಯ ಶೇ. 15.08ಕ್ಕೆ ಏರಿಕೆಯಾಗಿದ್ದರೆ, ಚಿಲ್ಲರೆ ಹಣದುಬ್ಬರವು ಸುಮಾರು ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇ. 7.79ಕ್ಕೆ ತಲುಪಿದೆ.
ಅಧಿಕ ಹಣದುಬ್ಬರದ ಹಿನ್ನೆಲೆಯಲ್ಲಿ ಕಳೆದ ತಿಂಗಳ ಆರಂಭದಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲ ಅಂಕ ಏರಿಕೆ ಮಾಡಿದ್ದು ಶೇ. 4.40ಕ್ಕೆ ಹೆಚ್ಚಿಸಿತ್ತು. ಇದೀಗ ಮುಂದಿನ ಸಭೆಯಲ್ಲೂ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ.
Share your comments