1. ಸುದ್ದಿಗಳು

ಹೂವಿನಹಡಗಲಿ: ಸಕ್ಕರೆ ಕಾರ್ಖಾನೆ ಕೆಮಿಕಲ್ ಮಿಶ್ರಿತ ನೀರಿನಿಂದ ಮೀನುಗಳ ಸಾವು..!

Kalmesh T
Kalmesh T
ಸಾಂದರ್ಭಿಕ ಚಿತ್ರ

ಕಾರ್ಖಾನೆಯ ರಾಸಾಯನಿಕಯುಕ್ತ ನೀರು ಕೆರೆಗ ಹರಿಬಿಟ್ಟ ಕಾರಣ ಕೆರೆಯಲ್ಲಿನ ಮೀನುಗಳು ಸಾವನ್ನಪ್ಪಿದ ಘಟನೆ ಹೂವಿನಹಡಗಲಿಯ ಅರಳಿಹಳ್ಳಿಯಲ್ಲಿ ನಡೆದಿದೆ.

ಇದನ್ನೂ ಓದಿರಿ: ಗ್ರಾಮಸ್ಥರ ದಾಳಿ; 50 ಮರಿಗಳಿಗೆ ಜನ್ಮ ನೀಡಿ ಸಾವನ್ನಪ್ಪಿದ Russell's viper ಗರ್ಭಿಣಿ ಹಾವು..!

ತಾಲೂಕಿನ ಬೀರಬ್ಬಿ ಬಳಿ ಇರುವ ಮೈಲಾರ ಸಕ್ಕರೆ ಕಾರ್ಖಾನೆಯಿಂದ ಹರಿಬಿಟ್ಟ ರಾಸಾಯನಿಕಯುಕ್ತ ನೀರು ಅರಳಿಹಳ್ಳಿ ಕೆರೆಯ ನೀರಿಗೆ ಸೇರಿದ ಪರಿಣಾಮ ಮೀನುಗಳು ಸಾವನ್ನಪ್ಪಿವೆ.

ಫ್ಯಾಕ್ಟರಿಯಲ್ಲಿ ಬಳಕೆಯಾದ ಕಲುಷಿತ ನೀರು ಅಕ್ಕ ಪಕ್ಕದ ರೈತರ ಜಮೀನುಗಳ ಮೂಲಕ ಹಳ್ಳ ಸೇರಿ ಅರಳಿಹಳ್ಳಿ ಕೆರೆಯ ನೀರಿನಲ್ಲಿ ಸೇರಿಕೊಂಡಿದೆ. ಇದರ ಪರಿಣಾಮ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸೇರಿದಂತೆ ಜಲಚರಗಳು ಸಾವನ್ನಪ್ಪಿವೆ.

ಬಿಸಿಲಿನ ಶಾಖದಿಂದ ಈ ಬಾರಿ ಮಾವಿನ ಉತ್ಪಾದನೆಯಲ್ಲಿ ಕುಂಠಿತ: ಕೃಷಿ ತಜ್ಞರ ಅಭಿಪ್ರಾಯ

ಕಾರ್ಖಾನೆ ನೀರು ಬಿಡುಗಡೆಯಿಂದ ಕೆರೆಯಲ್ಲಿ ಸಾಕಿದ್ದ ಲಕ್ಷಾಂತರ ಜಲಚರಗಳು ಸತ್ತು ಹೋಗಿವೆ. ಕಾರ್ಖಾನೆ ನೀರಿನಿಂದ ಮೀನಿನ ಉತ್ಪಾದನೆಗೆ ದೊಡ್ಡ ನಷ್ಟಉಂಟಾಗಿದೆ. ಕೆರೆ ಟೆಂಡರ್‌ ಪಡೆದಿರುವವರಿಗೆ ಅಪಾರ ನಷ್ಟವಾಗಿದೆ.

ಗಿರಿಯಾಪುರ ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ಮೈಲಾರ ಸಕ್ಕರೆ ಕಾರ್ಖಾನೆ ನೀರು, ಬಿಡುಗಡೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್‌ ನೀಡಲಿದ್ದಾರೆ. ಅವರ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ಹೂವಿನಹಡಗಲಿ ತಹಸೀಲ್ದಾರ್‌ ಪ್ರತಿಭಾ ತಿಳಿಸಿದ್ದಾರೆ.  

ಕಾಳುಮೆಣಸಿನಲ್ಲಿ ಬರುವ ರೋಗಗಳು ಮತ್ತು ಅದರ ಸಮಗ್ರ ನಿರ್ವಹಣೆ

Published On: 29 May 2022, 04:31 PM English Summary: Death of fish from factory chemical mixed water

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.