1. ಸುದ್ದಿಗಳು

CRPF,SI, ASI ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ

CRPF force

ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯು ಸಬ್‌-ಇನ್ಸ್‌ಪೆಕ್ಟರ್‌, ಅಸಿಸ್ಟಂಟ್‌ ಸಬ್‌-ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಗ್ರೂಪ್‌ ಬಿ, ಗ್ರೂಪ್‌ ಸಿ ಮತ್ತು ನಾನ್‌ ಮಿನಿಸ್ಟೆರಿಯಲ್‌ ಹಾಗೂ ನಾನ್‌-ಗೆಜೆಟೆಡ್‌, ಅರೆವೈದ್ಯಕೀಯ ಸಿಬ್ಬಂದಿಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 789

ವಿದ್ಯಾರ್ಹತೆ:  ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ಪಿಯುಸಿ, ಅಥವಾ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯಸ್ಸು: ಕನಿಷ್ಟ 18, ಗರಿಷ್ಟ 30 (ಹುದ್ದೆಗಳಿಗೆ ಅನುಸಾರವಾಗಿ ವಯಸ್ಸನ್ನು ನಿಗದಿಪಡಿಸಲಾಗಿದೆ. ಮಾಹಿತಿಗೆ ಅಧಿಸೂಚನೆ ನೋಡಬಹುದು.

ನೇಮಕಾತಿ ವಿಧಾನ: ನೇಮಕಾತಿಯು ಲಿಖಿತ ಮತ್ತು ದೈಹಿಕ ಪರೀಕ್ಷೆ ಮೂಲಕ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆಫ್‌ಲೈನ್ ಮೂಲಕವೇ ಸಲ್ಲಿಸಬೇಕು. ನಿಗದಿತ ಅರ್ಜಿಯನ್ನು ಸಿ.ಆರ್.ಪಿ.ಎಫ್ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಂಡು, ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. ಸಿಆರ್‌ಪಿಎಫ್‌ನ ಎಸ್‌ಐ, ಎಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಜುಲೈ 20, 2020 ರಿಂದ ಆಗಸ್ಟ್‌ 31, 2020 ರವರೆಗೆ ಅರ್ಜಿ ಸಲ್ಲಿಸಬೇಕು. ಎಸ್‌ಐ, ಎಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 20, 2020 ರ ವೇಳೆಗೆ ನಡೆಸಲಾಗವುದು.

crpf

ಲಿಖಿತ ಪರೀಕ್ಷೆ  ನಡೆಸುವ ನಗರಗಳು

- ನವದೆಹಲಿ, ಹೈದೆರಾಬಾದ್, ಗುವಾಹಟಿ, ಜಮ್ಮು, ಪ್ರಯಾಗ್ರಾಜ್, ಅಜ್ಮೀರ್, ನಾಗ್ಪುರ್, ಮುಜಾಫ್ಫರ್‌ಪುರ್, ಪಲ್ಲಿಪುರಮ್

ಸಿಆರ್‌ಪಿಎಫ್‌ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಅಧಿಕೃತ ವೆಬ್‌ಸೈಟ್‌ http://www.crpf.gov.in/

ಗೆ ಭೇಟಿ ನೀಡಿ. ಸಿರ್‌ಪಿಎಫ್‌ನ ಎಸ್‌ಐ, ಎಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳ ಅಧಿಸೂಚನೆಗೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.  ಅರ್ಜಿಯಲ್ಲಿ ಕೇಳಲಾದ ಅಗತ್ಯ ಮಾಹಿತಿಗಳೊಂದಿಗೆ, ಮೂಲದಾಖಲೆಗಳ ಎರಡು ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ಅಟೆಸ್ಟ್‌ ಮಾಡಿಸಿ, ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ : 'DIGP, Group Centre, CRPF, Bhopal, Village-Bangrasia, Taluk-Huzoor, District-Bhopal, M.P- 462045'.

ಅಭ್ಯರ್ಥಿಗಳು ಅರ್ಜಿಯ ಎನ್‌ವಲಪ್‌ ಕವರ್‌ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ನಮೂದಿಸಬೇಕು. ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ, ದೈಹಿಕ ಸಾಮರ್ಥ್ಯ ಮತ್ತು ಇತರೆ ಅರ್ಹತೆಗಳನ್ನು ಹೊಂದಿರಬೇಕು.

ಅಭ್ಯರ್ಥಿಗಳು ಹುದ್ದೆಗಳ ಸಂಪೂರ್ಣ ಮಾಹಿತಿ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ

http://www.crpf.gov.in/

Published On: 14 July 2020, 01:17 PM English Summary: crpf recruitment 2020 apply online-for789 asi constable posts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.