1. ಸುದ್ದಿಗಳು

ಕೋವಿಡ್ ಲಸಿಕೆ ಆರಂಭದೊಂದಿಗೆ ಕೋವಿಡ್ ಆ್ಯಪ್ ಚಾಲನೆ ನೀಡುವ ಸಾಧ್ಯತೆ

Covid vaccine

ಜನವರಿ 16 ರಿಂದ ಆದ್ಯತೆ ಮೇರೆಗೆ 3 ಕೋಟಿ ಆರೋಗ್ಯ ಸೇವೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಹೌದು  ಇದೇ 16 ರಂದು  ಪ್ರಧಾನಿ ನರೇಂದ್ರ ಮೋದಿ' ಅವರು ದೇಶದಲ್ಲಿ ಕೋವಿಡ್ -19 ವಿರುದ್ಧದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ  ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಮೋದಿ ಅವರು ಇದೇ ವೇಳೆ  ಕೋವಿನ್‌ ಆ್ಯಪ್ ' ಅನ್ನೂ ( ಕೋವಿಡ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್‌ವರ್ಕ್ ) ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಆ್ಯಪ್ ಲಸಿಕೆ ಕುರಿತ ಮಾಹಿತಿ, ನೋಂದಣಿ,ವಿತರಣೆ ಹಾಗೂ ಟ್ರ್ಯಾಕಿಂಗ್ ಸಹಿತ ವಿವಿಧ ಪ್ರಯೋಜನ ಒದಗಿಸಲಿದೆ. 

ದೇಶದ ವಿವಿಧೆಡೆ ಮೊದಲ ದಿನ ಲಸಿಕೆ ಪಡೆಯಲಿರುವ ಕೆಲ ಆರೋಗ್ಯ ಕಾರ್ಯಕರ್ತರ ಜೊತೆಗೆ ಮೋದಿ ಅವರು ವಿಡಿಯೊ ಲಿಂಕ್ ಮೂಲಕ ಸಂವಾದ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

. ಬಹು ನಿರೀಕ್ಷಿತ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಇದೇ 16 ರಂದು ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.  ದೇಶದಲ್ಲಿ ಒಟ್ಟು 2,934 ಕೇಂದ್ರಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ಮೊದಲ ದಿನ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಡೋಸ್ ನೀಡಲಾಗುತ್ತದೆ. ಒಂದು ಕೇಂದ್ರದಲ್ಲಿ ಗರಿಷ್ಠ 100 ಮಂದಿಗೆ ಲಸಿಕೆ ಚುಚ್ಚಲಾಗುತ್ತದೆ 'ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿ ಸದ್ಯ 2,34,190 ಸಕ್ರೀಯ ಕೋವಿಡ್ ಪ್ರಕರಣಗಳಿದ್ದು, 1.09 ಕೋಟಿ ಜನರಿಗೆ ಸೋಂಕು ತಗುಲಿದೆ. ಕೋವಿಡ್ ನಿಂದ ಇದುವರಿಗೆ 1.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿ ತಿಳಿಸಿದೆ.

 ಈಗಾಗಲೇ ನೋಂದಣಿ ಮಾಡಿಕೊಂಡಿರುವ ವೈದ್ಯರು, ಶುಕ್ರೂಷಕಿಯರು, ಸಫಾಯಿ ಕರ್ಮಚಾರಿಗಳು ಹಾಗೂ ಆಂಬುಲೆನ್ಸ್ ಚಾಲಕರು ಮೊದಲ ದಿನ ಲಸಿಕೆಗೆ ಒಳಪಡಲಿದ್ದಾರೆ. ಕೋವಿಶೀರ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಒಟ್ಟು 1.65 ಕೋಟಿ ಡೋಸ್‌ಗಳನ್ನು ಈಗಾಗಲೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ. ರಾಜ್ಯಗಳು ಒದಗಿಸಿದ್ದ ದತ್ತಾಂಶಗಳ ಆಧಾರದಲ್ಲೇ ಮೊದಲ ಹಂತದಲ್ಲಿ ಅವರಿಗೆ ಅಗತ್ಯವಿರುವಷ್ಟು ಕೋವಿಡ್ ಲಸಿಕೆಯ ಡೋಸ್‌ಗಳನ್ನು ರವಾನಿಸಲಾಗಿದೆ.

ಲಸಿಕೆ ವಿತರಣೆ ವಿಚಾರದಲ್ಲಿ ನಾವು ಯಾವುದೇ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ತಾರತಮ್ಯವನ್ನೂ ಮಾಡಿಲ್ಲ . ಮುಂದಿನ ದಿನಗಳಲ್ಲಿ ರಾಜ್ಯಗಳ ಬೇಡಿಕೆಗೆ ಅನುಸಾರವಾಗಿ ಲಸಿಕೆಯ ಡೋಸ್‌ಗಳನ್ನು ಪೂರೈಸಲಾಗುತ್ತದೆ ' ಎಂದು ಸಚಿವಾಲಯ ಹೇಳಿದೆ. 2,934 ಲಸಿಕಾ ಕೇಂದ್ರಗಳ ಪೈಕಿ ಆಯ್ದ ಕೆಲ ಕೇಂದ್ರ ಗಳಲ್ಲಿ ಪ್ರಧಾನಿಯವರೊಂದಿಗೆ ಸಂವಾದ ನಡೆಸಲು ಅಗತ್ಯವಿರುವ ವ್ಯವಸ್ಥೆ ಮಾಡಲಾಗಿದೆ . ಲಸಿಕೆಯ ಡೋಸ್ ಪಡೆದವರು ಲಿಂಕ್ ಮೂಲಕ ಮೋದಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಮಾಲೋಚಿಸಬಹುದು ಎಂದೂ ಹೇಳಲಾಗಿದೆ.' ಮೋದಿ ಅವರೊಂದಿಗೆ ದ್ವಿಮುಖ ಸಂವಹನ ನಡೆಸಲು ಅಗತ್ಯವಿರುವ ವ್ಯವಸ್ಥೆಯನ್ನು ನಾವು ಮಾಡಿಕೊಂಡಿದ್ದೇ ವೆ ' ಎಂದು ನವದೆಹಲಿಯ ಏಮ್ಸ್ ಮತ್ತು ಸಪ್ಲರ್‌ಜಂಗ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

Published On: 16 January 2021, 09:04 AM English Summary: covid 19 vaccination drive in india to start on jan 16

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.